ಮಾವಿನಮಟ್ಟಿ ಗ್ರಾಮದ ಶ್ರೀ ಶ್ರೀ ಗಡ್ಡದರಾಯ ಮುತ್ಯಾನವರ ಅದ್ದೂರಿ ಪಲ್ಲಕ್ಕಿ ಉತ್ಸವ

ಸುರಪುರ ಟೈಮ್ಸ್ ವಾರ್ತೆ
ಸುರಪುರ : ತಾಲೂಕಿನ ಮಾವಿನಮಟ್ಟಿ ಗ್ರಾಮದಲ್ಲಿ ಶ್ರೀ ಗಡ್ಡದರಾಯ ಮುತ್ಯಾನವರ ಜಾತ್ರಾ ಮಹೋತ್ಸವ ನಿಮಿತ್ತ ಶನಿವಾರ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಭವ್ಯ ಪಲ್ಲಕ್ಕಿ ಉತ್ಸವ ಜರುಗಿತು.
ಭವ್ಯ ಅಲಾಂಕರದ ಪಲ್ಲಕ್ಕಿ ಉತ್ಸವವು ಶ್ರೀ ಕರಿ ದೇವರ ದೇವಸ್ಥಾನದಿಂದ ಭವ್ಯ ಮೆರವಣಿಗೆಯ ಮುಖಾಂತರ ಮಾವಿನಮಟ್ಟಿ ಗ್ರಾಮದ ಹಿರಿ ಹಳ್ಳದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಭವ್ಯ ಪಲ್ಲಕ್ಕಿ ಉತ್ಸವವು ಗಂಗಸ್ತಾನ ಮಾಡಿ ವಿಶೇಷ ಪೂಜೆ ಸಲ್ಲಿಸಿ ಸಕಲ ಬಾಜಿ ಭಜಂತ್ರಿ ಮೇಳದೊಂದಿಗೆ ಕುಂಭ ಕಳಸ ಹೊತ್ತು ಊರಿನ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಮೂಲಕ ಸಾವಿರಾರು ಭಕ್ತರು ಮಧ್ಯ ಶ್ರೀ ಶ್ರೀ ಗಡ್ಡದರಾಯ ಮುತ್ಯಾ ನವರ ದೇವಸ್ಥಾನಕ್ಕೆ ಪಲ್ಲಕ್ಕಿ ಉತ್ಸವ ತಲುಪಿದರು.ಡೊಳ್ಳು ಕುಣಿತ ವಿವಿಧ ಕಲಾ ತಂಡಗಳು ಪಲ್ಲಕ್ಕಿ ಉತ್ಸವಕ್ಕೆ ವಿಶೇಷ ಮೆರುಗು ತಂದು ಕೊಟ್ಟು ನೋಡಗರ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ರಾಯಪ್ಪ ಪೂಜಾರಿ , ಹೈಯಲಪ್ಪ ಪೂಜಾರಿ ಹಾಗೂ ಮಾವಿಣಮಟ್ಟಿ ಗ್ರಾಮದ ಸಕಲ ಸದ್ಭಕ್ತರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!