ಸಾರ್ವಜನಿಕರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವೆ, ಅಭಿವೃದ್ಧಿ ಕಾರ್ಯಗಳಿಗೆ ಸದಾ ಸಿದ್ಧ: ಜೀವನ ಕುಮಾರ ಕಟ್ಟಿಮನಿ

ಸುರಪುರ ಟೈಮ್ಸ್ ವಾರ್ತೆ
ಶಹಾಪುರ :ನಗರದಲ್ಲಿರುವ ಜನಪರ ಕೆಲಸಗಳಿಗೆ ಸ್ಪಂಧಿಸುತ್ತಾ, ಕುಡಿಯುವ ನೀರು ನೈರ್ಮಲ್ಯಗಳಿಗೆ ಹೆಚ್ಚಿನ ಆಧ್ಯತೆ ನೀಡುವದರೊಂದಿಗೆ. ನೀಯಮಗಳ ಪಾಲನೆಡಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಾ, ಅಭಿವೃದ್ಧಿ ಕಾರ್ಯಗಳಿಗೆ ಸದಾ ಸಿದ್ದನಾಗಿ ಜನರ ವಿಶ್ವಾಸಕ್ಕೆ ಪಾತ್ರರಾಗಿರುತ್ತೇನೆ ಎಂದು ನೂತನ ಪೌರಾಯುಕ್ತರಾದ ಜೀವನಕುಮಾರ ಕಟ್ಟಿಮನಿ. ಅಧಿಕಾರ ಸ್ವೀಕರಿಸಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು.

ಪೌರಾಯುಕ್ತರಾದ ಜೀವನಕುಮಾರ ನಡೆದು ಬಂದ ದಾರಿ ಅತ್ಯಂತ ಮಹತ್ವದ್ದಾಗಿದ್ದು, ಸುರುಪುರ ಪುರಸಭೆಯಲ್ಲಿ ನೈರ್ಮಲ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಜೀವನಕುಮಾರವರು. ನಗರಸಭೆ ಪೌರಾಯುಕ್ತರಾಗಿ ಗ್ರೇಡ್-2 ಅಧಿಕಾರಿಗಳಾಗಿದ್ದವರು. ತದನಂತರದಲ್ಲಿ ಶಹಾಪುರ ನಗರಸಭೆಗೆ ಗ್ರೇಡ್ -1 ಪೌರಾಯುಕ್ತರಾಗಿ ಶನಿವಾರದಂದು ಅಧಿಕಾರ ಸ್ವೀಕಾರ ಮಾಡಿದರು.
ಈ ಸಮಯದಲ್ಲಿ ಎಇಇ ನಾನಸಾವಿಬ್ ಮಡಿವಾಳಕರ್, ನಗರಸಭೆ ನೈರ್ಮಲ್ಯ ಆರೋಗ್ಯ ಅಧಿಕಾರಿ ಹರೀಶ ಸಜ್ಜನ್ ಸೇರಿದಂತೆ ಅನೇಕರು ಹಾಜರಿದ್ದರು. ಅಲ್ಲದೆ ವಿವಿಧ ಸಂಘಟನೆಯ ಮುಖಂಡರು ಸಂಘ ಸಂಸ್ಥೆಗಳ ಪ್ರತಿನಿಧಿಗಳು ನೂತನ ಪೌರಾಯುಕ್ತರಿಗೆ ಶಾಲು ಹೊದಿಸಿ ಸನ್ಮಾನಿಸಿದರು.

Leave a Reply

Your email address will not be published. Required fields are marked *

error: Content is protected !!