ಸುರಪುರದ ದೇಶಭಕ್ತ ನಾಗರಿಕ ಸಮಿತಿ ವತಿಯಿಂದ ಬೃಹತ್ ತಿರಂಗಾ ಯಾತ್ರೆ 21ಕ್ಕೆ

ಸುರಪುರ ಟೈಮ್ಸ್ ವಾರ್ತೆ
ಸುರಪುರ:ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಯಶಸ್ವಿಯಾದ ಪ್ರಯುಕ್ತ ದೇಶಭಕ್ತ ನಾಗರಿಕ ಸಮಿತಿ ವತಿಯಿಂದ ನಗರದಲ್ಲಿ ಮೇ. 21ರಂದು ಸಂಜೆ 4ಕ್ಕೆ ಶ್ರೀ ವೇಣು ಗೋಪಾಲಸ್ವಾಮಿ ದೇವಸ್ಥಾನದ ಆವರಣದಿಂದ ಮಹಾತ್ಮ ಗಾಂಧೀಜಿ ವೃತ್ತದವರೆಗೆ ಪಾದಯಾತ್ರೆ ಮೂಲಕ ಬೃಹತ್ ತಿರಂಗಾ ಯಾತ್ರೆ ಮತ್ತು ವಿಜಯೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ದೇಶಭಕ್ತ ನಾಗರಿಕ ಸಮಿತಿ ಪ್ರಮುಖ ಡಾ. ಉಪೇಂದ್ರ ನಾಯಕ ಸುಬೇದಾ‌ರ್ ಹೇಳಿದರು.

ಇಲ್ಲಿಯ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಶ್ಮೀರದ ಪಹಲ್ಯಾಮ್‌ ನಲ್ಲಿ ಧರ್ಮ ಕೇಳಿ ಅಮಾಯಕ ಪ್ರವಾಸಿಗರನ್ನು ಹತ್ಯೆ ಮಾಡಿದ ಪಾಕಿಸ್ತಾನಿ ಪ್ರಾಯೋಜಿತ ಉಗ್ರರಿಗೆ ಭಾರತೀಯ ಯೋಧರು ಆಪರೇಷನ್ ಸಿಂದೂರ ಮೂಲಕ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಉಗ್ರರ ಅಡುಗು ತಾಣಗಳನ್ನು ಧ್ವಂಸ ಮಾಡಲಾಗಿದೆ. ಈ ಪರಿಸ್ಥಿತಿಯಲ್ಲಿ ದೇಶದ ಐಕ್ಯತೆಗಾಗಿ ರಾಷ್ಟ್ರಭಕ್ತಿ ಅನಾವರಣಗೊಳಿಸುವ ತಿರಂಗಾ ಯಾತ್ರೆಯನ್ನು ಆಯೋಜಿಸಲಾಗಿದೆಸುರಪುರ ಪತ್ರಿಕಾ ಭವನದಲ್ಲಿ ದೇಶಭಕ್ತ ನಾಗರಿಕ ಸಮಿತಿಯವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ತಿರಂಗಾ ಯಾತ್ರೆಯ ಮೂಲಕ ಭಾರತೀಯ ಸೈನಿಕರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ ಎಂದರು.ಸಮಿತಿಯ ಪ್ರಮುಖ ವೆಂಕಟೇಶ ನಾಯಕ ಬೈರಿಮಡ್ಡಿ ಮಾತನಾಡಿ, ಪರಾಕ್ರಮದಿಂದ ಪಾಕಿಸ್ತಾನಕ್ಕೆ ಪಾಠ ಕಲಿಸಿದ ಭಾರತೀಯ ಸೈನ್ಯದೊಂದಿಗೆ ರಾಷ್ಟ್ರ ರಕ್ಷಣೆಗಾಗಿ ನಾವೆಲ್ಲಾ ಜೊತೆಯಾಗಬೇಕಾದ ಸಮಯವಿದು. ನಗರದ ತಿರಂಗಾ ಯಾತ್ರೆ ಯಾವುದೇ ಪಕ್ಷದು, ಯಾವುದೇ ಸಮಾಜ, ವ್ಯಕ್ತಿಯದು ಅಲ್ಲ. ಇಡೀ ದೇಶಕ್ಕೆ ಸಂಬಂಧಿಸಿದ ಕಾರ್ಯಕ್ರಮ ಇದಾಗಿದೆ. ತಾ ಲೂಕಿನ ಸಮಸ್ತ ನಾಗರಿಕರು ಪಾಲ್ಗೊಂಡು ಯಾತ್ರೆ ಯಶಸ್ವಿಗೊಳಿಸಬೇಕು ಎಂದು ಕೋರಿದರು.
ಸಮಿತಿಯ ಪ್ರಮುಖ ಲಕ್ಷ್ಮೀಕಾಂತ ಬಿರಾದಾರ್ ದೇವರಗೋನಾಲ ಮಾತನಾಡಿ, ನಮ್ಮ ಸೈನಿಕರ ಶೌರ್ಯ ಮತ್ತು ದೇಶಭಕ್ತಿಯನ್ನು ನಾವು ಗೌರವಿಸಬೇಕು. ದೇಶ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದ ಯೋಧರಿಗೆ ಕೃತಜ್ಞತೆ ಸಲ್ಲಿಸಬೇಕು ಎಂದರು. ಸಮಿತಿಯ ಶರಣು ನಾಯಕ ಬೀಚತ್ತಕೇರಿ, ಭೀಮು ನಾಯಕ ಮಲ್ಲಿಬಾವಿ, ಅರವಿಂದ ಬಿಲ್ಲವ್, ನಾಗರಾಜ ನಾಯಕ ಪ್ಯಾಪಲಿ, ಮೌನೇಶ ನಾಯಕ ನಾಕ್ಕೋಡಿ, ಶರಣು ನಾಯಕ ಡೊಣ್ಣಿಗೇರಿ, ಗಂಗಾಧರ ನಾಯಕ ಅರಳಹಳ್ಳಿ, ಮಂಜುನಾಥ ಚೆಟ್ಟಿ ಸಂದೀಪ್ ಜೋಷಿ, ಮನೋಜ ಕುಮಾರ, ಕ್ಯಾತಪ್ಪ ಮೇದಾ,ಲೋಕೇಶ ನಾಯಕ, ದೇವುನಾಯಕ ಚಂದಾಪುರ, ರಮೇಶ ಚನ್ನೂರ, ಮಲ್ಲು ವಿಷ್ಣು ಸೇನಾ,ಹಣಮಗೌಡ ಶಖಾಪುರ, ಶ್ರೀನಿವಾಸ, ವಿನೋದ ಯಾಳಗಿ ಸೇರಿ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!