ಇಂದು ಸುರಪುರದಲ್ಲಿ ವಿದ್ಯುತ್ ವ್ಯತ್ಯಯ:ಇಇ ರಾಜಶೇಖರ ಬಿಳವಾರ್
ಸುರಪುರ ಟೈಮ್ಸ್ ವಾರ್ತೆ
ಸುರಪುರ: ತಾಲೂಕಿನ 110/33/11 ಕೆ. ವಿ.ದೇವಾಪುರ ಹಾಗೂ ಸುರಪುರ (ಶೋರಾಪುರ) 110/33/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರಗಳಿಂದ ಹೊರ ಹೋಗುವ ಎಲ್ಲಾ ಮಾರ್ಗಗಳಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಕಾರ್ಯನಿರ್ವಾಹಕ ಇಂಜಿನಿಯರ್ (ವಿ)ಕಾರ್ಯ ಮತ್ತು ಪಾಲನೆ ವಿಭಾಗದ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಜೆಸ್ಕಾಂ ವಿಭಾಗೀಯ ಕಾರ್ಯ ನಿರ್ವಾಹಕ ಅಧಿಕಾರಿ ರಾಜಶೇಖರ ಬಿಳವಾರ್ ಅವರು ತಿಳಿಸಿದ್ದಾರೆ.
ನಿರಂತರವಾಗಿ ವಿದ್ಯುತ್ ಪೂರೈಕೆ ಹಾಗೂ ವಿದ್ಯುತ್ ಅವಘಡಗಳನ್ನು ತಪ್ಪಿಸಲು ವಿದ್ಯುತ್ ಕೇಂದ್ರ ಹಾಗೂ ಮಾರ್ಗದಲ್ಲಿ ನಿರ್ವಹಣಾ ಕಾಮಗಾರಿ ಮಾಡುತ್ತಿರುವ ಹಿನ್ನೆಲೆಯಲ್ಲಿ ದೇವಾಪುರ ಹಾಗೂ ಸುರಪುರ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೋಗುವ ಎಲ್ಲಾ 33/11 ಕೆ.ವಿ./ಐಪಿಪಿ ಮಾರ್ಗಗಳ ಮಾರ್ಗದ ವಿದ್ಯುತ್ ಕಡಿತಗೊಳಿಸಲಾಗುವುದು ಆದರಿಂದ ಸುರಪುರ ನಗರ, ರಂಗಂಪೇಟ,ತಿಮ್ಮಾಪುರ, ಗೌಡಗೇರಾ, ತಿಂಥಣಿ, ದೇವಾಪೂರ, ಹೇಮನೂರು, ದೇವಿಕೇರಾ, ಬಿಜಾಸಪೂರ, ಕೃಷ್ಣಾಪೂರ, ಸೂಗೂರು, ತಿಪನಟಗಿ, ಪೇಠ ಅಮ್ಮಾಪೂರ ಕಕ್ಕೇರಾ, ದೇವತ್ಕಲ್ ವ್ಯಾಪ್ತಿಯಲ್ಲಿ ಹಾಗೂ ಸುತ್ತಮುತ್ತಲಿನ ತಾಂಡಾ, ಗ್ರಾಮಗಳು ಸೇರಿದಂತೆ ದೊಡ್ಡಿಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಹಾಗೂ ಗ್ರಾಹಕರು, ರೈತರು ಜೆಸ್ಕಾಂ ಗೆ ಸಹಕರಿಸಬೇಕು ಎಂದು ಆರ್. ಬಿಳವಾರ್ ಅವರು ಮನವಿ ಮಾಡಿದ್ದಾರೆ.


