ಅರ್ಥ ಪೂರ್ಣವಾಗಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಗೆ ನಿರ್ಧಾರ;ಎಚ್.ಎ.ಸರಕವಾಸ್
ಸುರಪುರ ಟೈಮ್ಸ್ ವಾರ್ತೆ
ಸುರಪುರ;ಸೆ.17ರಂದು ಕಲ್ಯಾಣ ಕರ್ನಾಟಕ ಉತ್ಸವವನ್ನು ಅದ್ದೂರಿಯಾಗಿ ಅರ್ಥ ಪೂರ್ಣವಾಗಿ ಆಚರಿಸ ಲಾಗುವುದು ಎಂದು ತಹಸೀಲ್ದಾರ್ ಎಚ್.ಎ.ಸರಕವಾಸ್ ಹೇಳಿದರು. ಮಿನಿವಿಧಾನಸೌಧ ಆವರಣದ ತಹಸಿಲ್ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಜರುಗಿದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದರು. ಸರಕಾರಿ ಕಚೇರಿ, ಅರೆ ಸರಕಾರಿ ಕಚೇರಿ ಮತ್ತು ಶಾಲಾ- ಕಾಲೇಜುಗಳಲ್ಲಿ ಕಡ್ಡಾಯವಾಗಿ ಉತ್ಸವ ಆಚರಣೆ ಮಾಡಬೇಕು ಎಂದರು.
ಸರಕಾರಿ ಕಚೇರಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಬೇಕು. ಅಂದು ಬೆಳಗ್ಗೆ 8ಗಂಟೆಗೆ ರಾಷ್ಟ್ರ ಧ್ವಜಾರೋಹಣ ಮಾಡಬೇಕು. ನಂತರ ತಾಲೂಕಾಡಳಿತ ‘ದಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಕಾರ್ಯಕ್ರಮ ಜರುಗಲಿದ್ದು, ಬೆಳಗ್ಗೆ 8.45ಕ್ಕೆ ರಾಷ್ಟ್ರ ಧ್ವಜಾರೋಹಣ ನಡೆಯಲಿದೆ. ನಂತರ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ. ಎಲ್ಲ ಅಧಿಕಾರಿಗಳು, ಸಿಬ್ಬಂದಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದರು.
ತಾಪಂ ಇಒ ಬಸವರಾಜ ಸಜ್ಜನ್, ಟಿಎಚ್‌ಒ ಡಾ.ಆರ್.ವಿ.ನಾಯಕ, ಸಿಡಿಪಿಒ ಲಾಲಸಾಬ್ ಪೀರಾಪುರ್, ಉಪ ನೋಂದಣಾಧಿಕಾರಿ ಗುರುರಾಜ್ ಸಜ್ಜನ್, ಎಸ್‌ಟಿಒ ಸಣಕೆಪ್ಪ ಕೊಂಡಿಕಾರ, ದೈಹಿಕ ಶಿಕ್ಷಣಾಧಿಕಾರಿ ಮಲ್ಲಣ್ಣದೊಡ್ಡಮನಿ, ಸಮಾಜ ಕಲ್ಯಾಣ ಇಲಾಖೆ ಮಹ್ಮದ್ ಸಲಿಂ, ಇತರೆ ಇಲಾಖೆಯ ಅಧಿಕಾರಿಗಳಾದ ಡಾ. ಸುರೇಶ್ ಹಚ್ಚಡ, ಪಂಡಿತ ನಿಂಬೂರ್, ಗುರುಸ್ವಾಮಿ ಹಿರೇಮಠ, ಶಾಸಕರ ಆಪ್ತ ಸಹಾಯಕ ಶಿವರಾಜ ನಾಯಕ ಬೊಮ್ಮನಳ್ಳಿ, ಮುಖಂಡರಾದ ರಮೇಶ ದೊರೆ, ಉಸ್ತಾದ್ ವಜಾಹತ್ ಹುಸೇನ್, ಚಂದ್ರು ಶೇಖರ ಬಿಚ್ಚುಗತ್ತಗೇರಿ ಇತರರಿದ್ದರು




