ಕಕ ಭಾಗದಲ್ಲಿ ಶಿಕ್ಷಕರ ಹುದ್ದೆ ಭರ್ತಿಗೆ ವಿಶೇಷ ಕ್ರಮ ಕೈಗೊಳ್ಳಬೇಕು; ಡಾ.ಸುರೇಶ ಸಜ್ಜನ


ಕಲ್ಯಾಣ ಕರ್ನಾಟಕ ಭಾಗದ ಅದೇಷ್ಟೋ ಶಾಲೆಗಳಲ್ಲಿ ಇಂದು ಶಿಕ್ಷಕರ ಕೊರತೆ ಇದೆ.  ಶಿಕ್ಷಕರ ಭರ್ತಿಗೆ ಸರ್ಕಾರ ಕೂಡಲೇ ವಿಶೇಷ ಕ್ರಮವನ್ನು ಕೈಗೊಳ್ಳಬೇಕು ಎಂದು ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ ಹೇಳಿದರು.

ಇಲ್ಲಿಯ ಗರುಡಾದ್ರಿಯಲ್ಲಿ ಬಣಗಾರ ಫೌಂಡೇಷನ್ ಹಮ್ಮಿಕೊಂಡಿದ್ದ ಕ-ಕ ಉತ್ಸವ ಹಾಗೂ ಶಿಕ್ಷಕರ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೈಕ ಹೋರಾಟ ಸಮಿತಿ ಅಧ್ಯಕ್ಷರಾಗಿದ್ದ ವೈಜನಾಥ ಪಾಟೀಲ್‌ರ ಜತೆ ಈ ಹಿಂದೆ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯಲ್ಲಿ ಯಾದಗಿರಿ ಜಿಲ್ಲಾಧ್ಯಕ್ಷನಾಗಿ ಅನೇಕ ಹೋರಾಟಗಳಲ್ಲಿ ಭಾಗವಹಿಸಿ ಈ ಭಾಗದ ಯುವಕರಿಗೆ ಶಿಕ್ಷಣದಲ್ಲಿ ಉದ್ಯೋಗ ಸಿಗಬೇಕು ಎಂದು ಒತ್ತಾಯಿಸಲಾಗಿತ್ತು ಎಂದರು.

ಸರಕಾರಿ ಶಾಲೆಯಲ್ಲಿ ಪೂರ್ಣ ಪ್ರಮಾಣದ ಶಿಕ್ಷಕರು ಇರಬೇಕು ಆದರೆ ಅದು ಅನುಷ್ಠಾನವಾಗುತ್ತಿಲ್ಲ, ಇಂದಿಗೂ ಸಹ ಶಾಲೆಗಳಲ್ಲಿ ಶಿಕ್ಷಕರ ಸಮಸ್ಯೆ ಎದ್ದು ಕಾಣುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಸಮಾಜದಲ್ಲಿ ಶಿಕ್ಷಕರಿಗೆ ಇರುವ ಗೌರವ,ಉಜ್ವಲ ಭವಿಷ್ಯ ರೂಪಿಸಿ
ಸ್ಥಾನಮಾನ ಜಗತ್ತಿನಲ್ಲಿ ಯಾವ ಹುದ್ದೆಗೂ ಇಲ್ಲ. ಶಿಕ್ಷಕರನ್ನು ಗೌರವಿಸುವುದು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಡಾ. ಎಸ್.ರಾಧಾಕೃಷ್ಣನ್‌ರ ಜೀವನ ಒಂದು ಸಾಧನೆ ಮತ್ತು ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಅವರ ಜೀವನ ಶಿಕ್ಷಕಿಯರಿಗೆ ಆದರ್ಶ. ಹೈದರಾಬಾದ್ ಕರ್ನಾಟಕ ವಿಮೋಚನಾ ಚಳುವಳಿಯಲ್ಲಿ ಸುರಪುರದ ಕೊಡುಗೆ ಅಪಾರವಾಗಿದೆ ಎಂದರು.
ರುಕ್ಮಾಪುರದ ಗುರುಶಾಂತಮೂರ್ತಿ ಶಿವಾಚಾರ್ಯರು ಸಾನಿಧ್ಯ ವಹಿಸಿ ಮಾತನಾಡಿದರು.ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ ಉದ್ಘಾಟಿಸಿ ಮಾತನಾಡಿದರು. ಗಮಕ ಕಲಾ ಪರಿಷತ್ತು ಜಿಲ್ಲಾಧ್ಯಕ್ಷ ಶ್ರೀನಿವಾಸ ಜಾಲವಾದಿ, ರಾಜ್ಯಸರಕಾರಿ ಎಸ್ ಸಿ ಎಸ್ ಟಿ ನೌಕರರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಆರ್. ಎಂ.ನಾಟೇಕ‌ರ್ ಮಾತನಾಡಿದರು. ಶಿಕ್ಷಕಿ ನಾಗರತ್ನ ಪೂಜಾರಿ ಅನಿಸಿಕೆ ವ್ಯಕ್ತಪಡಿಸಿದರು. ಶಂಕರಪ್ಪ ಬಣಗಾರ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಎಚ್.ಸಿ. ಪಾಟೀಲ್, ಚಂದ್ರಶೇಖರ ದಂಡಿನ್, ಜಯಲಲಿತಾ ಪಾಟೀಲ್, ನೀಲಮ್ಮ ಕುಂಬಾರ, ಸಾಯಬಣ್ಣ ಪುರ್ಲೆ, ಸೈದಾಬಿ ಜಮಾದಾ‌ರ್, ನಿಂಗಪ್ಪ ನಾಯಕ, ರಂಗ ನಾಥ ಬಾಗಲಿ, ಬಣಗಾರ ಫೌಂಡೇಷನ್ ಅಧ್ಯಕ್ಷ ವಸಂತ ಬಣಗಾರ ಇನ್ನಿತರರು ವೇದಿಕೆಯಲ್ಲಿದ್ದರು. ನಾನಾ ಕ್ಷೇತ್ರಗಳ ಸಾಧಕರಾದ ವೀಣಾ ಅಮ್ಮಣಗಿ, ನಾಗರತ್ನ ಪೂಜಾರಿ, ಅಫ್ರೀನ್ ಜಹಾನ್, ಮಲ್ಲಣ್ಣ ಕಮತಗಿ, ಅಮರೇಶ ಚಿಲ್ಲಾಳ, ಸಾಹೇಬ ರೆಡ್ಡಿ ಇಟಗಿ (ಶಿಕ್ಷಣ), ರಮೇಶ ಕಾಗೇರಿ (ಸಂಗೀತ), ಮೌನೇಶ ಅಮ್ಮಾಪುರ (ಕಲಾ),  ನನ್ನ ಪತ್ರಿಕೆಯ ಮಾರ್ಗದರ್ಶಕರು ಗುರುಗಳಾದ ಗಿರೀಶ್ ಶಾಬಾದಿ (ಪತ್ರಿಕಾ ರಂಗ) ಅವರಿಗೆ ಸನ್ಮಾನಿಸ ಲಾಯಿತು. ಶರಣಮ್ಮ ದೊಡ್ಡಮನಿ ಪ್ರಾಸ್ತಾವಿಕ ಮಾತನಾಡಿದರು. ಅಮರೇಶ ಚಿಲ್ಲಾಳ ಸ್ವಾಗತಿಸಿದರು. ದೀಪಿಕಾ ಉದ್ದಾರ ಪ್ರಾರ್ಥಿ ಸಿದರು. ದೇವು ಹೆಬ್ಬಾಳ ನಿರೂಪಿ ಸಿದರು. ಕನಕಪ್ಪ ವಾಗಣಗೇರಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!