39ನೇ ನಾಡಹಬ್ಬ ಉತ್ಸವ, ನಾಡದೇವಿ ಭಾವಚಿತ್ರ ಭವ್ಯ ಮೆರವಣಿಗೆ, “ಶೂರರ ನಾಡಿನಲ್ಲಿ ನಾಡಹಬ್ಬಕ್ಕೆ ಅದ್ಧೂರಿ ಚಾಲನೆ”

ಫೋಟೊ : ಸುರಪುರ ನಾಡದೇವಿ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಸುರಪುರ ಟೈಮ್ಸ್ ವಾರ್ತೆ

ಸುರಪುರ : ಇಲ್ಲಿಯ ಕನ್ನಡ ಸಾಹಿತ್ಯ ಸಂಘ, ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಮತ್ತು ನಾಡಹಬ್ಬ ಉತ್ಸವ ಸಮಿತಿ ಹಮ್ಮಿಕೊಂಡಿರುವ 39 ನೇ ನಾಡಹಬ್ಬ ಉತ್ಸವ ಆಚರಣೆಯು ಸೋಮವಾರ ದಿಂದ ನಾಡದೇವಿಯ ಪೂಜೆಯೊಂದಿಗೆ ಪ್ರಾರಂಭಿಸಲಾಯಿತು.
ನಗರದ ಶ್ರೀವೇಣುಗೋಪಾಲ ಸ್ವಾಮಿ ದೇವಸ್ಥಾನ ಆವರಣದಲ್ಲಿ ನಾಡದೇವಿಯ ಭಾವಚಿತ್ರಕ್ಕೆ ಶ್ರದ್ಧಾ-ಭಕ್ತಿಯೊಂದಿಗೆ ಪೂಜೆ ಸಲ್ಲಿಸುವ ಮೂಲಕ ನಾಡದೇವಿಯ ಭಾವಚಿತ್ರದ ಮೆರವಣಿಗೆಗೆ ಅರಸು ಮನೆತನದ ರಾಜಾ ಲಕ್ಷ್ಮೀನಾರಾಯಣ ನಾಯಕ, ಪ್ರಮುಖರಾದ ರಾಜಾ ಸಂತೋಷ ನಾಯಕ, ನಾಡಹಬ್ಬ ಉತ್ಸವ ಸಮಿತಿ ಗೌರವಾಧ್ಯಕ್ಷ ರಾಜಾ ಪಾಮ ನಾಯಕ, ಅಧ್ಯಕ್ಷ ರಾಜಾ ಮುಕುಂದ ನಾಯಕ, ನಯೋಪ್ರಾ ಅಧ್ಯಕ್ಷ ಪ್ರಕಾಶ ಗುತ್ತೇದಾರ, ಉದ್ಯಮಿ ಗ್ಯಾನಚಂದ ಜೈನ್ ವಿದ್ಯುಕ್ತ ಚಾಲನೆ ನೀಡಿದರು.
ನಾಡದೇವಿ ಭಾವಚಿತ್ರದ ಮೆರವಣಿಗೆಯು ಮಾರುಕಟ್ಟೆ ಪ್ರದೇಶ, ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತ, ಮುಖ್ಯರಸ್ತೆ, ಮಹಾತ್ಮ ಗಾಂಧೀಜಿ ವೃತ್ತದ ಮೂಲಕ ಗರುಡಾದ್ರಿ ಕಲಾ ಮಂದಿರದವರೆಗೂ ಅದ್ಧೂರಿಯಾಗಿ ನಡೆಯಿತು. ದಾರಿಯುದ್ದಕ್ಕೂ ನೂರಾರು ಸಂಖ್ಯೆಯಲ್ಲಿ ಜನರು ಸಂಭ್ರಮದ ಮೆರವಣಿಗೆಯ ಕಣ್ತುಂಬಿಕೊAಡರು. ವಿಶೇಷವಾಗಿ ಮಕ್ಕಳು, ಮಹಿಳೆಯರು ರಸ್ತೆ ಬದಿ, ಮನೆ, ಕಟ್ಟಡಗಳ ಮೇಲೆ ನಿಂತು ವೀಕ್ಷಿಸಿದರು. ನಂತರ ಗರುಡಾದ್ರಿಯಲ್ಲಿ ನಾಡದೇವಿಯ ಸ್ಥಾಪನೆ, ಪೂಜೆ, ಪ್ರಸಾದ ವಿತರಣೆ ನಡೆಯಿತು.
ಯೂಥ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ, ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ, ಪ್ರಮುಖರಾದ ರಾಜಾ ಹನುಮಪ್ಪ ನಾಯಕ, ಗೋವರ್ಧನ ಝಂವ್ಹಾರ, ರಾಘವೇಂದ್ರ ಕುಲಕರ್ಣಿ ಬಾಡಿಯಾಳ, ಅಮೃತಲಾಲ್ ಜೈನ್, ಮಂಜುನಾಥ ಗುಳಗಿ, ಸೋಮನಾಥ ಡೊಣ್ಣಿಗೇರಿ, ಪ್ರಕಾಶ ಸಜ್ಜನ, ಜಯಲಲಿತಾ ಪಾಟೀಲ್, ಶಿವಕುಮಾರ ಮಸ್ಕಿ, ಶ್ರೀನಿವಾಸ ಜಾಲವಾದಿ, ಶರಣಬಸವ ಯಾಳವಾರ, ಶಂಕರ ನಾಯಕ, ರಾಜಶೇಖರ ದೇಸಾಯಿ, ಮಹೇಶ ಜಹಗೀರದಾರ್, ಪಾರಪ್ಪ ಗುತ್ತೇದಾರ, ಸೋಮರಾಯ ಶಖಾಪೂರ, ಶ್ರೀಶೈಲ ಯಂಕAಚಿ, ದೇವು ಹೆಬ್ಬಾಳ, ಸಂಗಣ್ಣ ರಾಂಪುರೆ, ಪ್ರಕಾಶ ಅಂಗಡಿ, ಸೋಮರಡ್ಡಿ ಮಂಗ್ಯಾಳ, ನರಸಿಂಹ ಬಾಡಿಹಾಳ, ವೆಂಕಟೇಶ ಸುರಪುರ, ರಾಘವೇಂದ್ರ ಭಕ್ರಿ, ಹಸೀನಾ ಬಾನು, ಅಕ್ಕುಬಾಯಿ ಬಿರಾದಾರ, ಸಾಮುವೆಲ್ ಮ್ಯಾಥ್ಯೂ, ಸಾಹೇಬರಡ್ಡಿ ಇಟಗಿ, ಹಣಮಂತ್ರಾಯ ಚೌಡೇಶ್ವರಿಹಾಳ, ಶರಣಬಸವ ಹೂಗಾರ ಕಬಾಡಗೇರಾ ಸೇರಿ ಇತರರಿದ್ದರು.
ಮೆರಗು ಹೆಚ್ಚಿಸಿದ ಕಲಾ ತಂಡಗಳ ಪ್ರದರ್ಶನ
ನಾಡಹಬ್ಬ ಮಹೋತ್ಸವದ ನಿಮಿತ್ತ ನಾಡದೇವಿ ಭಾವಚಿತ್ರದ ಮೆರವಣಿಗೆ ಸಡಗರ ಸಂಭ್ರಮದೊAದಿಗೆ ಜರುಗಿತು. ವಿವಿಧಡೆಗಳಿಂದ ಆಗಮಿಸಿದ ಕಲಾ ತಂಡಗಳು ಮೆರವಣಿಗೆಯ ಮೆರಗು ಹೆಚ್ಚಿಸಿದವು. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪೂರದ ಶ್ರೀ ನೂಲಿ ಚಂದಯ್ಯ ಗೊಂಬೆ ಕುಣಿತ ತಂಡದವರು ಪ್ರದರ್ಶನ ಮತ್ತು ಹುಣಸಗಿಯ ದಂಡಿನ್ ಸಾಹುಕಾರ ಅವರ ಎರಡು ಕುದರೆಗಳ ಕುಣಿತ ಜನಾಕರ್ಷಿಸಿತು. ಕುದುರೆಗಳ ಆಕರ್ಷಕ ಕುಣಿತಕ್ಕೆ ಜನರು ಫೀದಾ ಆದರು. ಇನ್ನೂ ಜೋಗುತಿ ತಂಡದವರ ಜೋಗುತಿ ನೃತ್ಯ ಅದ್ಬುತವಾಗಿ ಮೂಡಿಬಂತು. ಕಂಸಾಳೆ, ಮಂಜಲಾಪುರದವರ ಡೊಳ್ಳು ಕುಣಿತ ಕಲಾ ಲೋಕದಲ್ಲಿ ತೇಲಾಡಿಸಿ ಮೆರವಣಿಗೆಗೆ ಇನ್ನಷ್ಟು ಕಳೆ ತಂದು ಕೊಟ್ಟವು. ಶಾಲಾ ವಿದ್ಯಾರ್ಥಿಗಳ ಕೋಲಾಟ, ಲೇಜಿಮ್ ನೃತ್ಯ ಕಣ್ಮನ ಸೆಳೆಯಿತು. ಪ್ರತಿಯೊಬ್ಬ ಮುಖಂಡರು ಕೊರಳಲ್ಲಿ ಕನ್ನಡದ ಶಾಲೂ ಹಾಕಿಕೊಂಡು ಮಿಂಚಿದರು. ಸಾರೋಟದಲ್ಲಿ ನಾಡದೇವಿ ಮತ್ತು ಬಾಲ ಮುರಳಿಯ ಛದ್ಮವೇಷದಾರಿಗಳು ಸಹ ಗಮನಸೆಳೆದರು. ಈ ಸಲವೂ ನಾಡದೇವಿಯ ಭಾವಚಿತ್ರದ ಮೆರವಣಿಗೆಯ ಅಚ್ಚುಕಟ್ಟಾಗಿ ಆಯೋಜಿಸಲಾಗಿದೆ ಎಂಬ ಶ್ಲಾಘನೆ ವ್ಯಕ್ತವಾಯಿತು. ಒಟ್ಟಾರೆ ನಾಡಹಬ್ಬ ದೇವಿ ಮೆರವಣಿಗೆಯಲ್ಲಿ ಕಲಾ ತಂಡಗಳ ಪ್ರದರ್ಶನಕ್ಕೆ ಜನರು ಮನ ಸೋತರು.

Leave a Reply

Your email address will not be published. Required fields are marked *

error: Content is protected !!