ಮಹರ್ಷಿ ವಾಲ್ಮೀಕಿ ಜಯಂತಿ ವಿಜೃಂಭಣೆಯ ಆಚರಣೆ;ಹೆಚ್.ಎ.ಸರಕಾವಸ್

ಸುರಪುರ ಟೈಮ್ಸ್ ವಾರ್ತೆ
ಸುರಪುರ : ತಾಲೂಕಾಡಳಿತದ ವತಿಯಿಂದ ಅ.7 ರಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು  ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು ಎಂದು ತಹಸೀಲ್ದಾರ್ ಹೆಚ್.ಎ.ಸರಕಾವಸ್ ಹೇಳಿದರು.
ಇಲ್ಲಿಯ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂದು ಎಲ್ಲ ಸರಕಾರಿ-ಅರೆ ಸರಕಾರಿ, ಶಾಲಾ-ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯತ್, ಅಂಗನವಾಡಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಜಯಂತಿ ಆಚರಿಸಬೇಕು ಎಂದು ಸೂಚಿಸಿದರು.
ಅ.7 ರಂದು ಬೆಳಗ್ಗೆ 9 ಗಂಟೆಗೆ ನಗರದ ಡೊಣ್ಣಿಗೇರಿಯ ಶ್ರೀ ಮಹರ್ಷಿ ವಾಲ್ಮೀಕಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮಹರ್ಷಿ ವಾಲ್ಮೀಕಿ ಜಯಂತಿಯ ಮೆರವಣಿಗೆಗೆ ಚಾಲನೆ ನೀಡಲಾಗುವುದು. ನಂತರ ತಹಸಿಲ್ ಕಚೇರಿ ಸಭಾಂಗಣದಲ್ಲಿ ತಾಲೂಕಾಡಳಿತದ ಜಯಂತ್ಯುತ್ಸವ ನಡೆಯಲಿದೆ. ಬಳಿಕ ವಿಶೇಷ ಉಪನ್ಯಾಸ ಇರುತ್ತದೆ. ಜಯಂತಿಯಲ್ಲಿ ಎಲ್ಲ ಇಲಾಖೆಯ ಅನುಷ್ಠಾನಾಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳಬೇಕು ಎಂದು ತಾಕೀತು ಮಾಡಿದರು.ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ತಾಲೂಕು ಅಧ್ಯಕ್ಷ ಭೀಮನಗೌಡ ಲಕ್ಷ್ಮೀ ಹೆಮನೂರು, ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯಕ ಪ್ಯಾಪ್ಲಿ, ಶಾಸಕರ ಆಪ್ತ ಸಹಾಯಕ ಶಿವರಾಜ ನಾಯಕ ಬೊಮ್ಮನಳ್ಳಿ, ಸಮಾಜದ ಮುಖಂಡರಾದ ಪ್ರೊ.ವೇಣುಗೋಪಾಲ ನಾಯಕ ಜೇವರ್ಗಿ, ರಮೇಶ ದೊರೆ ಆಲ್ದಾಳ, ವೆಂಕಟೇಶ ಬೇಟೆಗಾರ, ವೆಂಕಟೇಶ ನಾಯಕ ಬೈರಿಮಡ್ಡಿ, ಭೀಮು ನಾಯಕ ಮಲ್ಲಿಬಾವಿ, ಚಂದ್ರಶೇಖರ ನಾಯಕ ಬೀಚಗತ್ತಿಕೇರಿ, ಶಿವಮೋನಯ್ಯ ಎಲ್‌ಡಿ ನಾಯಕ ದೇವರಗೋನಾಲ, ದೇವು ನಾಯಕ, ವಾಸುದೇವ ನಾಯಕ ಬೈರಿಮಡ್ಡಿ, ವಿಜಯಗೌಡ ಬೇವಿನಾಳ, ಪರಶುನಾಯಕ ಮಂಗೀಹಾಳ, ಮಲ್ಲಿಕಾರ್ಜುನ ಬೇವಿನಾಳ, ನಿಂಗಣ್ಣ ಬುಡ್ಡಾ, ರೇವಣಸಿದ್ದಪ್ಪ, ಮಲ್ಲಿಕಾರ್ಜುನ ನಾಯಕ, ಹಣಮಂತ ಬೊಮ್ಮನಳ್ಳಿ, ವಿನೋದ ನಾಯಕ ರತ್ನಗಿರಿ ಸೇರಿ ಅನೇಕರಿದ್ದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು
ಪೂರ್ವಭಾವಿ ಸಭೆಯಲ್ಲಿ ಬಿಇಒ ಯಲ್ಲಪ್ಪ ಕಾಡ್ಲೂರ, ಸಿಪಿಐ ಉಮೇಶ ನಾಯಕ, ಆರ್‌ಡಬ್ಲೂö್ಯಎಸ್ ಎಇಇ ಹಣಮಂತ್ರಾಯ, ಪಿಡಬ್ಲೂö್ಯಡಿ ಎಇಇ ಎಸ್.ಜಿ.ಪಾಟೀಲ್, ಉಪ ನೋಂದಣಾಧಿಕಾರಿ ಗುರುರಾಜ ಸಜ್ಜನ್, ಸಮಾಜ ಕಲ್ಯಾಣಾಧಿಕಾರಿ ಮೊಹ್ಮದ್ ಸಲೀಂ, ಬಿಸಿಎಂ ಅಧಿಕಾರಿ ಯಂಕಪ್ಪ ಟಣಕೇದಾರ, ವಿವಿಧ ಇಲಾಖೆಯ ಅಧಿಕಾರಿಗಳಾದ ಡಾ.ಭೀಮರಾಯ ಹವಲ್ದಾರ, ಎಚ್.ಬಿ.ಬಿರಾದಾರ, ಪ್ರಸನ್ನ ದೇಶಪಾಂಡೆ, ಭೀಮಾಶಂಕರ, ನಾಗರಾಜ, ಹುಲಿಗೆಮ್ಮ, ಭಾಗ್ಯಶ್ರೀ, ಶಿವಪ್ಪ ಜಮಾದಾರ, ಎಂ.ಬಿ.ನಾಯಕ, ಹೋಮಗಾರ್ಡ್ ಘಟಕಾಧಿಕಾರಿ ವೆಂಕಟೇಶ ಸುರಪುರ ಇದ್ದರು.

ಫೋಟೊ : ಸುರಪುರ ತಹಸೀಲ್ದಾರ್ ಕಚೇರಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆ ಜರುಗಿತು.

Leave a Reply

Your email address will not be published. Required fields are marked *

error: Content is protected !!