ವೈಜ್ಞಾನಿಕ ಹೈನುಗಾರಿಕೆಯಿಂದ ಅಧಿಕ ಲಾಭ: ಸಿಪಿಐ ಉಮೇಶ ನಾಯಕ

ಸುರಪುರ ಟೈಮ್ಸ್ ವಾರ್ತೆ
ಸುರಪುರ; ರೈತ ಮಹಿಳೆಯರು ಕೃಷಿಯ ಜತೆಗೆ ಹೈನುಗಾರಿಕೆಯನ್ನು ಉಪಕಸಬು ಮಾಡಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದಬೇಕು. ವೈಜ್ಞಾನಿಕ ರೀತಿಯಲ್ಲಿ ಹೈನುಗಾರಿಕೆ ನಿರ್ವಹಣೆ ಮೂಲಕ ಲಾಭದಾಯಕ ಉದ್ಯೋಗವನ್ನಾಗಿ ಮಾಡಿಕೊಳ್ಳಬಹುದು ಎಂದು ಸುರಪುರ ಪೋಲಿಸ್ ಠಾಣೆಯ ಸಿಪಿಐ ಉಮೇಶ ನಾಯಕ ಹೇಳಿದರು. ನಗರದ ಖಾನಾಪುರ ಎಸ್ ಎಚ್. ಎಪಿಎಂಸಿ ಆವರಣದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಸಯೋಗದೊಂದಿಗೆ ಪಶು ಇಲಾಖೆ ಮತ್ತು ಕೆ.ಎಂ.ಎಫ್. ಸಹಯೋಗದಲ್ಲಿ ವೈಜ್ಞಾನಿಕ ಹೈನುಗಾರಿಕೆ ತರಬೇತಿ ಕಾರ್ಯಕ್ರಮ ಹಾಗೂ ಕಲ್ಯಾಣ ಕರ್ನಾಟಕ ವಿಮೋಚನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಮಹಿಳಾ ರೈತರು ತರಬೇತಿಯಲ್ಲಿ ಭಾಗವಹಿಸಿದ್ದು ಬಹಳ ಸಂತೋಷಕರ ವಿಷಯ ಎಂದು ತಿಳಿಸಿದರು.ಸದ್ಯ ಮಹಿಳಾ ರೈತರು ಹೈನುಗಾರಿಕೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಗೆ ಹೆಚ್ಚು ಒತ್ತು ಕೊಡುವಂತೆ ಸಲಹೆ ನೀಡಿದರು.ಕಾರ್ಯಕ್ರಮವನ್ನು ಡಾಕ್ಟರ್ ಬಿ.ಆರ್ ಅಂಬೇಡ್ಕರ ಹಾಗೂ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸ ಜ್ಯೋತಿ ಬೆಳಗಿಸುವುದರಮೂಲಕ ಉಪ ತಸಿಹಲ್ದಾರ ಮಲ್ಲಯ್ಯ ದಂಡು  ಉದ್ಘಾಟಿಸಿ ಮಾತನಾಡಿದರು.ಅಶೋಕ್ ಚೌಧರಿ ಹಿರಿಯ ಸಾಹಿತಿಗಳು ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ಕೊಟ್ರೇಶ್ ಚೌದರಿ, ಯಲ್ಲಪ್ಪ ಮಲ್ಲಿಬಾವಿ, ಮರಿಲಿಂಗಪ್ಪ ಅಡೋಡಗಿ, ಹುಲಗಮ್ಮ ಮಾಲಿ ಪಾಟೀಲ್ ರುಕ್ಮಾಪುರ್, ಪಶು ಇಲಾಖೆಯ ಜಿಲ್ಲಾ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು, ಚಂದ್ರಶೇಖರ್ ಸಾಹುಕಾರ್, ರಾಮು ವಾಗಿಣಗೇರಾ ನಗರ ಸುತ್ತಮುತ್ತಲ್ಲಿನ ಗ್ರಾಮದ ರೈತರು,
ರೈತ ಮಹಿಳೆಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!