ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆಯ ಲೋಪ ಸರಿಪಡಿಸಲು ಒತ್ತಾಯ

ಸುರಪುರ ಟೈಮ್ಸ್ ವಾರ್ತೆ
ಸುರಪುರ: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಯಲ್ಲಿನ ಸರಿಪಡಿಸಬೇಕೆಂದು ಆಗ್ರಹಿಸಿ ನಗರ ತಶೀಲ್ ಕಚೇರಿಯ ಮುಂಬಾಗದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ನೌಕರರ ಸಂಘದ ತಾಲೂಕು ಘಟಕದಿಂದ ಮನವಿ ಸಲ್ಲಿಸಿ ಸರಕಾರಿ ನೌಕರರ ಸಂಘದ ತಾಲೂಕು ಪ್ರದಾನ ಕಾರ್ಯದರ್ಶಿ ಶರಣಬಸವ ಬಿ.ಗೋನಾಲ ಮಾತನಾಡಿ, “ಸಮೀಕ್ಷೆ ವೇಳೆ ಶಿಕ್ಷಕರು ತಾಂತ್ರಿಕ ದೋಷ ಸಮೀಕ್ಷೆಯಲ್ಲಿ ಪಥದಾರಿ ತೋರಿಸದೆ ಬೇರೊಂದು ದಾರಿ ತೋರಿಸಿ ಸಮಸ್ಯೆ ಎದುರಿಸುತ್ತಿದ್ದಾರೆ. ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಅದೇ ಊರಲ್ಲಿ ಅಥವಾ ಪಕ್ಕದ ಊರಲ್ಲಿ ಸಮೀಕ್ಷೆ ಕಾರಿಗೆ ನಿಯೋಜನೆ ಮಾಡದೆ ದೂರದ ಊರುಗಳಿಗೆ ನಿಯೋಜನೆ ಮಾಡಿದ್ದು ಸರಿಯಾದ ಕ್ರಮವಲ್ಲ
UHID ನಂಬರ್ ಗಳನ್ನು ತಪ್ಪಾಗಿ ಅಂಟಿಸಿದ್ದು ತಿದ್ದುಪಡಿ ಮಾಡಲಾಗಿದೆ ಇದು ಗಣಿತಿ ಮಾಡುವಾಗ ಗೊಂದಲ ಉಂಟಾಗುತ್ತದೆ ಹಾಗೂ BLOಗಳಿಗೆ ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ಗರ್ಭಿಣಿಯರಿಗೆ ಸಣ್ಣ ಮಗುವನ್ನು ಹೊಂದಿದವರಿಗೆ ನಿವೃತ್ತಿ ಸಮೀಪದಲ್ಲಿರುವ ಶಿಕ್ಷಕರಿಗೆ ಈ ಗಣತಿ ಕಾರ್ಯದಿಂದ ಕೈಬಿಡುವಂತೆ ಮನವಿ ಪತ್ರ ಸಲ್ಲಿಸಿದರು ಈ ಸಂದರ್ಭದಲ್ಲಿ. ಸಂಘದ ತಾಲೂಕು ಅಧ್ಯಕ್ಷ ಗೋವಿಂದ್ ಎಸ್ ತನಿಕೇದಾರ ಸೇರಿದಂತೆ ಸೋಮರೆಡ್ಡಿ ಮಂಗಿಹಾಳ, ದೇವರಾಜ ಪಾಟೀಲ, ಮಹಾಂತೇಶ ಗೋನಾಲ, ಶಿವಕುಮಾರ್ ಕಮತಗಿ, ಕುಮಾರಗೌಡ ಲಕ್ಷ್ಮಣ ನಾಯಕ್ಯ, ಮಲ್ಲು ಕಟ್ಟಿಮನಿ, ಶಿವನಗೌಡ ಕೆಂಭಾವಿ, ನೀಲಕಂಠಯ್ಯಸ್ವಾಮಿ, ಗುರುರಾಜ ಸಾಹೇಬ ರೆಡ್ಡಿ ಖಾಸಿಂ ಮುಷ್ಟಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!