ಮಳೆ ಹಾನಿ ಪ್ರದೇಶಕ್ಕೆ ಶಾಸಕ ಆರ್ವಿನ್ ಭೇಟಿ
ಸುರಪುರ ಟೈಮ್ಸ್ ವಾರ್ತೆ
ಸುರಪುರ: ಸುರಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪೃಕೃತಿ ವಿಕೋಪದಿಂದ ಯಾವುದೇ ಅನಾಹುತ ನಡೆದರೂ ಅದು ಸಣ್ಣದಾಗಿರಲಿ, ದೊಡ್ಡದಾಗಿರಲಿ ಅಲ್ಲಿ ಏನು ನಡೆದಿದೆ ಎಂಬುದರ ಬಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ವರದಿ ಸಲ್ಲಿಸಬೇಕು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಸೂಚನೆಯನ್ನು ನೀಡಿದ್ದಾರೆ.ಸುರಪುರ ನಗರ ಸಭಾ ವ್ಯಾಪ್ತಿಯಲ್ಲಿ ನಗರಸಭಾ ಅಧಿಕಾರಿಗಳು, ಹಾಗೂ ಗ್ರಾಮಾಂತಗರ ಭಾಗದಲ್ಲಿ ಗ್ರಾಮ ಆಡಳಿತಾಧಿಕಾರಿಗಳು ಈ ವರದಿಯನ್ನು ಸಲ್ಲಿಸಬೇಕು ಯಾವುದೇ ನೆಪ ಹೇಳಿ ಜಾರಿಕೊಳ್ಳುವಂತಿಲ್ಲ ಎಂದು ಶಾಸಕರು ಖಡಕ್ ಸೂಚನೆಯನ್ನು ನೀಡಿದ್ದಾರೆ. ಶನಿವಾರದಂದು ನಗರ ಸಭೆಯ ವ್ಯಾಪ್ತಿಯ ವಣಕಿಹಾಳ ವಾರ್ಡ್ ನ 31ರ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡ ಪರಿಣಾಮ ಸ್ಥಳಕಕ್ಕೆ ಭೇಟಿ ನೀಡಿದ ಅವರು ಸತತವಾಗಿ ಸುರಿಯುತ್ತಿರುವ ಮಳೆಗೆ ಮನೆಗಳಿಗೆ ನೀರು ನುಗ್ಗಿ ಜನ ತೊಂದರೆಗೊಳಗಾದದ್ದನ್ನು ಖುದ್ದು ವಿಕ್ಷೇಣೆ ಮಾಡಿ ಜೊತೆಯಲ್ಲಿ ಆಗಮಿಸಿದ ತಹಸೀಲ್ದಾರ ಹೆಚ್.ಎ.ಸರಕಾವಸ್ ಹಾಗೂ ನಗರಸಭೆ ಪೌರಾಯುಕ್ತ ಬಸವರಾಜ ಟಣಕೆದಾರರಿಗೆ ಸಾರ್ವಜನಿಕರಿಗೆ ಸೂಕ್ತ ರೀತಿಯಲ್ಲಿ ಸ್ಪಂದನೆ ನೀಡುವಂತೆ ಸೂಚಿಸಿದರು.ಆದಷ್ಟು ಶೀಘ್ರ ಸಮಸ್ಯೆ ಪರಿಹರಿಸಿ ತಿಳಿಸಿದರು. ತಾತ್ಕಾಲಿಕ ಗಂಜಿ ಕೇಂದ್ರ ನಿರ್ಮಿಸಿ ಸಂತ್ರಸ್ತರಿಗೆ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಲು ತಿಳಿಸಿದರು. ವಾರ್ಡನ ನಿವಾಸಿಗಳ ಜೊತೆಗೆ ಮಾತನಾಡಿ ಮಳೆಗಾಲದ ನಂತರ ಶಾಶ್ವತ ಪರಿಹಾರ ಕಲ್ಪಿಸಿ ಕೊಡುವದಾಗಿ ಭರವಸೆ ನೀಡಿದರು. ತಾಲೂಕಾದ್ಯಂತ ಸತತ ಮಳೆಯಿಂದಾಗಿ ಜಮೀನುಗಳಲ್ಲಿ ನೀರು ನಿಂತು, ರೈತರು ಬೆಳೆದ ಹತ್ತಿ, ತೋಗರಿ ಬೆಳೆ ಹಾನಿಯಾದ ಪರಿಣಾಮ ಖಾನಾಪುರ ಎಸ್ ಎಚ್,ಚಂದ್ಲಾಪೂರ, ಬೇವಿನಾಳ ಎಸ್ ಎಚ್ ಗ್ರಾಮಗಳ ರೈತರ ಜಾಮೀನುಗಳಿಗೆ ಅಧಿಕಾರಿಗಳ ಜೊತೆ ಭೇಟಿ ನೀಡಿ ಹಾನಿಯಾದ ಎಲ್ಲಾ ರೈತರಿಗಸರ್ಕಾರದ ನಿಯಮಾನುಸಾರ ಪರಿಹಾರ ಒದಗಿಸಲು ರೈತರ ಸಮ್ಮುಖದಲ್ಲಿ ತಹಶೀಲ್ದಾರಿಗೆ,ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ರೈತರು, ಅಧಿಕಾರಿಗಳು ಜೊತೆಗಿದ್ದರು ಸಮಯದಲ್ಲಿ ಪಕ್ಷದ ಮುಖಂಡರು ವಾರ್ಡ್ ನ ನಿವಾಸಿಗಳು ಉಪಸ್ಥಿತರಿದ್ದರು.






