24/7 ನೀರು ಸರಬರಾಜು ವ್ಯತ್ಯಯ ಸಹಕರಿಸಲು ಮನವಿ: ಪೌರಾಯುಕ್ತ ಬಸವರಾಜ ಟಣಕೆದಾರ

ಸುರಪುರ ಟೈಮ್ಸ್ ವಾರ್ತೆ
ಸುರಪುರ ;ನಗರಕ್ಕೆ ಸರಬರಾಜು ಆಗುವ 24/7 ಕುಡಿಯುವ ನೀರು ರವಿವಾರದಿಂದ ಸುಮಾರು ಮೂರರಿಂದ ನಾಲ್ಕು ದಿನದವರೆಗೆ ಬರುವುದಿಲ್ಲ ಎಂದು ಪೌರಾಯುಕ್ತ ಬಸವರಾಜ ಟಣಕೆದಾರ ಅವರು ತಿಳಿಸಿದ್ದಾರೆ.
ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾರ್ಡ್ ಗಳಿಗೆ 24/7 ಕುಡಿಯುವ ನೀರು ನಾಳೆ 28.09.2025 ಬರುವುದಿಲ್ಲ ಕಾರಣವೇನೆಂದರೆ ಸುರಪುರ ನಗರಕ್ಕೆ ನಿರಂತರ ನೀರು ಸರಬರಾಜು ಮಾಡುವ 24/7 ಯೋಜನೆಗೆ ಅಳವಡಿಸಿರುವ ಕಚ್ಚಾ ನೀರಿನ ಕೊಳವೆ ಮಾರ್ಗವು ದೇವಾಪುರ ಹಳ್ಳದಲ್ಲಿ (ಡಿಸ್ಟಬ್) ದುರಸ್ತಿಗೊಳಗಾಗಿರುತ್ತದೆ. ನಿರಂತರ ಮಳೆಯಿಂದಾಗಿ ಹಳ್ಳವು ತುಂಬಿ ನೀರು ಹರಿಯುತ್ತಿದ್ದು, ಹಳ್ಳದಲ್ಲಿ ನೀರು ಕಡಿಮೆಯಾದ ನಂತರ ಸದರಿ ಕಚ್ಚಾ ಕೊಳವೆಯನ್ನು
ದುರಸ್ತಿಪಡಿಸಲಾಗುವುದು.ಆದ್ದರಿಂದ ನಗರದ ಸಾರ್ವಜನಿಕರು 24/7 ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವುದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಪೌರಾಯುಕ್ತ ಟಣಕೆದಾರ ಅವರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!