ಭಕ್ತಿಯಿಂದ ಪೂಜಿಸಿದರೆ ದೇವಿಯ ಕೃಪೆಯು ಸದಾ ಕಾಲ ಇರುತ್ತದೆ: ಗುರುಶಾಂತಮೂರ್ತಿ ಶಿವಾಚಾರ್ಯರ
ಸುರಪುರ ಟೈಮ್ಸ್ ವಾರ್ತೆ
ಸುರಪುರ: ಕಳೆದ 45 ವರ್ಷಗಳಿಂದ ಬಣಗಾರ ಬಂಧುಗಳು ಒಗ್ಗಟ್ಟಿನಿಂದ ಶ್ರೀ ದೇವಿ ಪುರಾಣ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಶ್ರೀ ದೇವಿಯ ಕೃಪೆಯು ಬಣಗಾರ ಕುಟುಂಬದವರಿಗೆ ಮಾತ್ರವಲ್ಲದೆ, ತನ್ನನ್ನು ನಂಬಿ ಪೂಜಿಸಿದ ಎಲ್ಲರ ಮೇಲೂ ತೋರಿದ್ದಾಳೆ ಎಂದು ರುಕ್ಮಾಪುರ ಹಿರೇಮಠ ಸಂಸ್ಥಾನದ ಶ್ರೀ ಗುರುಶಾಂತಮೂರ್ತಿ ಶಿವಾಚಾರ್ಯರು ಹೇಳಿದರು.
ಅವರು ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿ ಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ 45ನೇ ವರ್ಷದ ಶ್ರೀ ದೇವಿ ಪಾರಾಯಣ ಶನಿವಾರ ಪ್ರವಚನ ಕಾರ್ಯಕ್ರಮಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿ ಆಶೀರ್ವದಿಸಿದರು ಅವರು
ನವರಾತ್ರಿಯ ಈ ದಿನದಂದು ಶ್ರೀ ದೇವಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿದರೆ ಆ ದೇವಿಯ ಕೃಪೆಯು ಸದಾ ನಿಮ್ಮ ಮೇಲೆ ಇರುತ್ತದೆ. ಜೀವನದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳೂ ನಿವಾರಣೆ ಆಗಲಿವೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನೂ ಕೊಟ್ರಯ್ಯಸ್ವಾಮಿ ಬಳುಂಡಗಿಮಠ ವಹಿಸಿದ್ದರು. ಪಂ. ಪುಟ್ಟರಾಜು ಗವಾಯಿಗಳ ಶಿಷ್ಯರಾದ ಯರಡೋಣಾದ ಅಮರೇಶ್ವರ ಶಾಸ್ತ್ರಿಗಳು ಹಿರೇಮಠ ಆನಾಹೊಸೂರು ಅವರು ಪುರಾಣ ಪ್ರವಚನ ನೀಡಿದರು. ರಾಜಶೇಖರ ಗೆಜ್ಜಿ, ಬಸವರಾಜ ಮಿಣಜಿಗಿ ಸೇರಿದಂತೆ ಗ್ರಾಮದ ಗುರು ಹಿರಿಯರು ಪಾಲ್ಗೊಂಡಿದ್ದರು.

