ಧರ್ಮಸ್ಥಳ ಸಂಸ್ಥೆಯಲ್ಲಿ ಗಣ ಹೋಮ, ಪೂಜೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ : ಇಲ್ಲಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಕಚೇರಿಯಲ್ಲಿ ಆಯುಧ ಪೂಜೆ ನಿಮಿತ್ತ ಗಣ ಹೋಮ, ಲಕ್ಷ್ಮಿ ಪೂಜೆ ಮತ್ತು ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಶ್ರದ್ಧಾ-ಭಕ್ತಿಯಿಂದ ನೆರವೇರಿದವು.
ಕಾರ್ಯಾಲಯದಲ್ಲಿ ವಿಶೇಷ ಪೂಜಾ ನಿಮಿತ್ತವಾಗಿ ಕಚೇರಿಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಕಚೇರಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಎಲ್ಲಾ ಸಿಬ್ಬಂದಿಗಳು ಗಣ ಹೋಮ ಸೇರಿ ವಿಶೇಷ ಪೂಜೆಯಲ್ಲಿ ಭಕ್ತಿಯೊಂದಿಗೆ ಪಾಲ್ಗೊಂಡರು. ಅರ್ಚಕರ ಮಂತ್ರ ಘೋಷಗಳ ಮಧ್ಯೆ ಗಣ ಹೋಮ ಅದ್ಧೂರಿಯಾಗಿ ಜರುಗಿತು.
ಕಚೇರಿಗೆ ಆಗಮಿಸಿದ ಸಿಬ್ಬಂದಿಗೆ ತೀರ್ಥ, ಪ್ರಸಾದ ವಿತರಿಸಲಾಯಿತು. ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ನಾಗೇಶ ಎನ್.ಪಿ, ಮೇಲ್ವಿಚಾರಕ ಶ್ರೇಣಿಯ ಕಾರ್ಯಕರ್ತರಾದ ಶಿವಕಲ್ಲವ್ವ, ಜಯಶ್ರೀ, ಅನಿತಾ, ಸವಿತಾ, ತ್ರಿವೇಣಿ, ವಿನೋದ ಶಿವಕುಮಾರ, ದತ್ತಾತ್ರೇಯ, ರಾಕೇಶ, ಅರುಣ, ವೀಣಾ ವಿಭೂತಿ,ಸಿದ್ದರಾಮ, ರಾಜೇಂದ್ರ, ಅಶೋಕ, ಮಹಾದೇವಿ, ಬಸಪ್ಪ, ನಿಂಗರಾಜ್ ಸೇರಿ ಕಚೇರಿಯ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಗ್ರಂಥಾಲಯ ಉದ್ಘಾಟನೆ : ಮಾತೃ ಶ್ರೀ ಹೇಮಾವತಿ ವಿ.ಹೆಗ್ಗಡೆ ಅಮ್ಮನವರ ಕನಸಿನ ಮತ್ತು ಮಹಿಳೆಯರ ಸಬಲೀಕರಣಕ್ಕೆ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ತಾಲೂಕಿನ ಯೋಜನಾ ಕಚೇರಿಯಲ್ಲಿ ಮಹಿಳೆಯರಿಗೆ ಅನುಕೂಲವಾಗುವ ಗ್ರಂಥಾಲಯದ ಉದ್ಘಾಟನೆ ಜರುಗಿತು. ಗ್ರಂಥಾಲಯದ ಸದುಪಯೋಗಕ್ಕೆ ಕ್ಷೇತ್ರ ಯೋಜನಾಧಿಕಾರಿಗಳು ಸಲಹೆ ನೀಡಿದರು.

ಧರ್ಮಸ್ಥಳ
