ಸೂಕ್ತ ಚಿಕಿತ್ಸೆ ಮತ್ತು ಆಹಾರ ಪದ್ದತಿಯಲ್ಲಿ ಬದಲಾವಣೆ ತಂದರೆ ಕ್ಷಯರೋಗ ತಡೆಗಟ್ಟಬಹುದು ;ಡಾ ಸಂಜೀವಕುಮಾರ ರಾಯಚೂರಕರ್

ಸುರಪುರ ಟೈಮ್ಸ್ ವಾರ್ತೆ

ಸುರಪುರ: ಸೂಕ್ತ ಚಿಕಿತ್ಸೆ ಮತ್ತು ಆಹಾರ ಪದ್ದತಿಯಲ್ಲಿ ಬದಲಾವಣೆ ತಂದರೆ ಕ್ಷಯರೋಗ ತಡೆಗಟ್ಟಬಹುದು ಎಂದು ಜಿಲ್ಲಾ ಕ್ಷಯರೋಗ ಅಧಿಕಾರಿ ಡಾ.ಸಂಜೀವಕುಮಾರ ರಾಯಚೂರಕರ್ ಹೇಳಿದರು.

ತಾಲೂಕಿನ ಹೇಮನೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಅಡಿಯಲ್ಲಿ ನಿಕ್ಷಯ ಮಿತ್ರ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕ್ಷಯ ರೋಗದ ಬಗ್ಗೆ ಭಯ ಪಡಬಾರದು ಆದರೆ ಜಾಗೃತಿ ಇರಬೇಕುಎಂದರು.ವಿಶೇಷ ಅತಿಥಿಯಾಗಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ.ಆ‌ರ್.ವಿ .ನಾಯಕ ಮಾತನಾಡಿ, ನಿಕ್ಷಯ ಮಿತ್ರ ಅಡಿಯಲ್ಲಿ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರ ಕಿಟ್ ವಿತರಿಸಲಾಗುತ್ತದೆ. ಅದರ ಸದುಪಯೋ ಗಪಡೆದುಕೊಂಡು ಆರೋಗ್ಯ ಸುಧಾರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಹೆಮನೂರ ಪಿಎಚ್‌ಸಿಯ ಆಡಳಿತ ವೈದ್ಯಾಧಿಕಾರಿ ಡಾ.ಎಸ್.ಎಸ್.ಚಿಕ್ಕಮಠ ಮಾತನಾಡಿ, ಕ್ಷಯ ರೋಗಿಗಳಿಗೆ ಆಹಾರ ಮುಖ್ಯ ಮತ್ತು ನಿಯಮನುಸಾರವಾಗಿ ಔಷಧ ತೆಗೆದುಕೊಳ್ಳಬೇಕು ಎಂದರು. ತಾಲೂಕು ಬಿಎಚ್‌ ಇಒ ನಿಂಗಮ್ಮ ಪ್ರಾಸ್ತಾವಿಕ ಮಾತನಾಡಿ, ಕ್ಷಯರೋಗದ ಬಗ್ಗೆ ವಿವರಿಸಿದರು. ಹಿರಿಯ ಆರೋಗ್ಯ ನಿರೀಕ್ಷಣಾ ಧಿಕಾರಿ ಸಂಗಪ್ಪ ಚೆಟ್ಟಿನಿರೂಪಿಸಿ ವಂದಿಸಿದರು.

22 ಕ್ಷಯ ರೋಗಿಗಳ ದತ್ತು; ಹೆಮನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಎಸ್.ಎಸ್.ಚಿಕ್ಕಮಠ ಮತ್ತು ಕೇಂದ್ರದ ಸಿಬ್ಬಂದಿಯವರು 22 ಕ್ಷಯ ರೋಗಿಗಳನ್ನು ದತ್ತು ಪಡೆದುಕೊಂಡು ಅವರಿಗೆ ಗೋಧಿ, ಬೆಲ್ಲಾ, ಕಡಲೆ, ಅಲಸಂದಿಯ ಧಾನ್ಯದ ಆಹಾರ ಪೊಟ್ಟಣ ಮತ್ತು ಪ್ರೊಟಿನ್ ಪೌಡರ್ ವಿತರಿಸುವ ಮೂಲಕ ಮಾದರಿಯಾಗಿ ಗಮನಸೆಳೆದರು.

Leave a Reply

Your email address will not be published. Required fields are marked *

error: Content is protected !!