ಪುಟ್ಟರಾಜ ಗವಾಯಿಗಳಿಗೆ ಮರಣೋತ್ತರ ಭಾರತ ರತ್ನ ನೀಡಲಿ: ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ

ಸುರಪುರ ಟೈಮ್ಸ್ ವಾರ್ತೆ
ಸುರಪುರ:ಸಂಗೀತಕ್ಕೆ ಶತಮಾನಗಳ ಇತಿಹಾಸವಿದೆ. ಸಂಗೀತಕ್ಕೆ ಕ್ಷೇತ್ರಕ್ಕೆ ಹಲವು ಮಹನೀಯರ ಕೊಡುಗೆ ಅಪಾರ. ಈ ಸಾಲಿನಲ್ಲಿ ಗದಗನ ವೀರೇಶ್ವರ ಪುಣ್ಯಾಶ್ರಮದ ಸ್ಥಾಪನೆಗೆ ಹಾನಗಲ್ ಕುಮಾರಸ್ವಾಮಿಗಳು, ಪಂಡಿತ ಪಂಚಾಕ್ಷರಿ ಗವಾಯಿಗಳು ಹಾಗೂ ಪುಟ್ಟರಾಜ ಗವಾಯಿಗಳ ಸೇವೆ ಅತ್ಯಂತ ಅಮೂಲ್ಯವಾದದ್ದು. ಅಂಧರ ಬಾಳಲ್ಲಿ ಬೆಳಕು ತುಂಬುವ ಕಾಯಕಕ್ಕೆ ಗವಾಯಿಗಳು ಶ್ರಮಿಸಿದ್ದಾರೆ. ಆದರೆ ಇಂತಹ ಸೇವೆಯನ್ನು ಇದುವರೆಗೂ ಸರ್ಕಾರಗಳು ಪರಿಗಣಿಸಿಲ್ಲ. ಪುಟ್ಟರಾಜ ಗವಾಯಿಗಳಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಬೇಕು ಎಂದು ಲಕ್ಷ್ಮೀಪುರದ ಶ್ರೀ ಗಿರಿ ಸಂಸ್ಥಾನ ಮಠದ  ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಕಳವಳ ವ್ಯಕ್ತಪಡಿಸಿದರು.
ನಗರದ ಶ್ರೀ ಲಕ್ಷ್ಮೀಪುರ ಶ್ರೀ ಮರಡಿ ಮಲ್ಲಿಕಾರ್ಜುನ ದೇವಸ್ಥಾನ ಸಭಾಭವನದಲ್ಲಿ ಶ್ರೀ ಗುರು ಪುಟ್ಟರಾಜ ಜನಕಲ್ಯಾಣ ಸೇವಾ ಸಮಿತಿ ಬೋನ್ಹಾಳ ಹಮ್ಮಿಕೊಂಡ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 111 ನೇ ಜನ್ಮ ದಿನಾಚರಣೆ ಪ್ರಯುಕ್ತ ಗುರುನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಂಧರು ಯಾರ ಮೇಲೂ ಆಧಾರವಾಗದೇ ತಮ್ಮ ಸ್ವಾಭಿಮಾನದ ಬದುಕು ನಡೆಸುವ ಮೂಲ ಉದ್ದೇಶದಿಂದ ಈ ವೀರೇಶ್ವರ ಪುಣ್ಯಾಶ್ರಮ ಹುಟ್ಟಿಕೊಂಡಿದ್ದು, ಇಂದು ಎಷ್ಟೋ ಅಂಧರ ಬಾಳಿನಲ್ಲಿ ಬೆಳಕು ತುಂಬಿದ ಕೀರ್ತಿ ಈ ಮಠಕ್ಕೆ ಸಲ್ಲುತ್ತದೆ. ಇಂತಹ ಮಹನೀಯರನ್ನು ಸರ್ಕಾರಗಳು ಗುರುತಿಸಿ ಅವರಿಗೆ ಸೂಕ್ತ ಗೌರವ ನೀಡಬೇಕಿದೆ. ಆದರೆ ಸರ್ಕಾರಗಳಿಗಿರುವ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಸರ್ಕಾರಗಳು ಪುಟ್ಟರಾಜ ಗವಾಯಿಗಳ ಜಯಂತಿ ಮಾಡುವ ಮನಸ್ಸು ಮಾಡಬೇಕು. ಅಂದಾಗ ಅವರ ಸೇವೆ ಗೌರವಿಸುವಂತಾಗುತ್ತದೆ ಎಂದು ಹೇಳಿದರು.
ಸಮಿತಿ ಅಧ್ಯಕ್ಷ ಕ್ಷೀರಲಿಂಗಯ್ಯ ಹಿರೇಮಠ ಬೋನ್ಹಾಳ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ವೀರೇಶ್ವರ ಪುಣ್ಯಾಶ್ರಮವು ಯಾವುದೇ ಜಾತಿ, ಮತ, ಬೇಧವಿಲ್ಲದೇ ಸಂಗೀತ ಕ್ಷೇತ್ರಕ್ಕೆ ತನ್ನ ಕೊಡುಗೆ ನೀಡುತ್ತಾ ಬಂದಿದೆ ನನ್ನಂತ ಎಷ್ಟು ಬಡ ಅಂದ ಅನಾಥ ಮಕ್ಕಳಿಗೆ ಆಶ್ರಯ ತಾಣವಾಗಿದೆ ಎಂದರು

  ಕಾರ್ಯಕ್ರಮದಲ್ಲಿ ತ್ರೀಮೂರ್ತಿ ಸೇವಾ ಸಮಿತಿ ಕಾರ್ಯದರ್ಶಿ ಶ್ರೀ ನಾಥ ಪಾಣಿಭಾತೆ ನಿಂಗಣ್ಣ ಕುಂಬಾರ ಹಣಮಂತ ದೊಡ್ಡಮನಿ, ಸುರೇಶ ಹಳಿಸಗರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!