ಮಹಾತ್ಮರ ಜೀವನ ಚರಿತ್ರೆ ಬದುಕಿಗೆ ದಾರಿದೀಪ; ಎಚ್.ಸಿ.ಪಾಟೀಲ್

ಸುರಪುರ ಟೈಮ್ಸ್ ವಾರ್ತೆ
ಸುರಪುರ;ಅಂತರಂಗದಲ್ಲಿ ಪ್ರೀತಿ, ದಯೆ, ವಿಶ್ವಾಸ, ಕೃತಜ್ಞತೆ ಹಾಗೂ ಮಾನವೀಯತೆ ಮೌಲ್ಯಗಳು ಬೆಳೆಯಬೇಕಾದರೆ ಮಹಾತ್ಮರ ಜೀವನ ಚರಿತ್ರೆಯನ್ನು ಅರಿಯಬೇಕು. ಇಂಥ ಚರಿತ್ರೆಗಳು ನಮ್ಮ ಬದುಕಿಗೆ ದಾರಿದೀಪವಿದ್ದಂತೆ’ ಎಂದು ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಎಚ್.ಸಿ. ಪಾಟೀಲ್ ಹೇಳಿದರು.
ಅವರು ಸುರಪುರ ಕಬಾಡಗೇರಾದ ಶ್ರೀ ನಿಷ್ಠಿ ಕಡ್ಲಪ್ಪನವರ ವಿರಕ್ತಮಠದಲ್ಲಿ ಲಿಂ.ಶ್ರೀ.ಮ.ನಿ.ಪ್ರ. ಮಲ್ಲಿಕಾರ್ಜುನ ಮಹಾಸ್ವಾಮಿಗಳವರ 49ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶರಣ ಚರಿತಾಮೃತ ಪ್ರವಚನ ಕಾರ್ಯಕ್ರಮದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು
ನಾವೆಲ್ಲರೂ ಇಂದು ಒತ್ತಡದ ಬದುಕಿನಲ್ಲಿ ಜೀವಿಸುತ್ತಿದ್ದೇವೆ. ನೆಮ್ಮದಿಯ ಬದುಕಿಗಾಗಿ ಪರಿತಪಿಸುತ್ತಿದ್ದೇವೆ. ಸಂತ ಮಹಾತ್ಮರ ಜೀವನ, ತಪಸ್ಸು, ವಿನಯ, ಕಲ್ಯಾಣ ಗುಣಗಳು ತ್ರಿವೇಣಿ ಸಂಗಮಗಳಿದ್ದಂತೆ. ಇಂಥ ಮಹಾತ್ಮರ ಜೀವನ ಚರಿತ್ರೆಯ ಅವಲೋಕನ, ಕತ್ತಲು ಕವಿದ ನಮ್ಮ ಬದುಕಿಗೆ ಬೆಳಕಿದ್ದಂತೆ’ ಎಂದರು.
ಈ ಭಾಗದಲ್ಲಿ ಅನೇಕ ಶರಣರು,ಸೂಫಿ ಸಂತರು ಹಾಗಿ ಹೋಗಿದ್ದಾರೆ ಹುಟ್ಟು ಅನಿರೀಕ್ಷಿತ ಸಾವು ನಿಶ್ಚಿತ ಶ್ರೀಮಂತ ಬಡವ ಎಲ್ಲರೂ ಒಂದು ದಿನ ಈ ಭೂಮಿಯಿಂದ ಬಿಟ್ಟು ಹೋಗಬೇಕು ಕಾರಣ ದಾನ, ಧರ್ಮದಿಂದ ಪುಣ್ಯ ಪ್ರಾಪ್ತಿ ಆಗುತ್ತದೆ. ಬೇಡುವ ಕೈಗಿಂತ ನೀಡುವ ಕೈ ಶ್ರೇಷ್ಠ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ದಾನ, ಧರ್ಮ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು. ಅಂದಾಗ ಆರೋಗ್ಯ ಮತ್ತು ನೆಮ್ಮದಿ ಸಿಗುತ್ತದೆ ಎಂದು ಹೇಳಿದರು. ನೂತನವಾಗಿ ನಿರ್ದೇಶಕರಾದ ಬಸವೇಶ್ವರ ಪತ್ತಿನ ಸಹಕಾರ ಸಂಘದ ನಿರ್ದೇಶಕರಿಗೆ ಗೌರವ ಸನ್ಮಾನ ಜರುಗಿತು.ಪ್ರಭುಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಮೋಳಿಗೆ ಮಾರಯ್ಯ ಶಿವಶರಣರ ಬಸಯ್ಯಶಾಸ್ತ್ರಿ ಹಿರೇಮಠ ಪ್ರವಚನ ನೀಡಿದರು.ಶರಣುಕುಮಾರ ಯಾಳಗಿ ಮತ್ತು ಶಿವಕುಮಾರ ಕಟ್ಟಿ ಸಂಗಾವಿ ಸಂಗೀತ ಸೇವೆ ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!