ತಹಸೀಲ್ದಾರರ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ನಿಯಂತ್ರಿಸಲು ಸಾರ್ವಜನಿಕರ ಆಗ್ರಹ
ಸುರಪುರ ಟೈಮ್ಸ್ ವಾರ್ತೆ
ಸುರಪುರ;ತಾಲ್ಲೂಕಿನ ಎಲ್ಲೆಡೆಯಿಂದ ಪ್ರತಿನಿತ್ಯ ಅನ್ನದಾತರು, ಸಾರ್ವಜನಿಕರು ನಾನಾ ಕಾರ್ಯ ನಿಮಿತ್ತ ತಹಶೀಲ್ದಾರ್ ಕಚೇರಿಗೆ ಆಗಮಿಸುತ್ತಾರೆ.ತಹಸೀಲ್ದಾರರ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಬೇಸತ್ತು ನಿಯಂತ್ರಿಸಲು ಸಾರ್ವಜನಿಕರ ಆಗ್ರಹಿಸಿದ್ದಾರೆ .
ತಾಲೂಕಿನ ಹದನೂರು ಗ್ರಾಮದ ಬಡ ರೈತ ಲಾಲ್ ಸಾಬ್ ದವಲ್ ಸಾಬ್ ಎನ್ನುವ ರೈತನ ಸ. ನಂ 117 ರ ಪೋ 2 ರಲ್ಲಿರುವ ಪಹಣಿಯಲ್ಲಿ ಹೆಸರು ತಿದ್ದುಪಡಿಗೆ ಕಳೆದ ನಾಲ್ಕು ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿ ಹೈರಾಣಾಗಿ ತಹಸೀಲ ಕಚೇರಿಯಲ್ಲಿ ರಂಪಾಟ ಮಾಡಿರುವ ಘಟನೆ ಶುಕ್ರವಾರ ನಡೆದಿದೆ.
ನೇರವಾಗಿ ರೈತರ ಕೆಲಸಗಳನ್ನು ಮಾಡಿಕೊಡಲು ಅಧಿಕಾರಿಗಳಿಗೆ ಇಚ್ಛಾಶಕ್ತಿ ಕೊರತೆ ಜೊತೆಗೆ ಕನಿಷ್ಠಪಕ್ಷ ಅವರ ಸಮಸ್ಯೆಗಳನ್ನು ತಿಂಗಳಾನುಗಟ್ಟಲೇ ಅಲೆದಾಡಿದರೂ ಸಮಸ್ಯೆಗೆ ಮುಕ್ತಿ ಸಿಗುವುದಿಲ್ಲ. ಬ್ಯಾಗಿನಲ್ಲಿ ಕಡತ, ಕೈಯಲ್ಲಿ ಕಾಸು ಇದ್ದರೆ 24 ಗಂಟೆಯಲ್ಲಿ ಕೆಲಸವಾಗುವ ಮಟ್ಟಕ್ಕೆ ಇಲಾಖೆ ಹದಗೆಟ್ಟಿದೆ ಎಂದು ಆರೋಪ ಮಾಡಿದರು.
ಕಚೇರಿಗೆ ಬರುವ ಗ್ರಾಮೀಣ ಪ್ರದೇಶದ ರೈತ ಕೂಲಿ ಕಾರ್ಮಿಕರಿಗೆ ಕನಿಷ್ಟಪಕ್ಷ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯಿಲ್ಲ. ಇರುವ ಶೌಚಾಲಯಗಳು ಸ್ವಚ್ಛತೆಯಿಲ್ಲದೆ ಗಬ್ಬು ನಾರುತ್ತಿವೆ. ದೂರದ ಊರುಗಳಿಂದ ಬರುವ ಬಡವರು ಕುಳಿತುಕೊಳ್ಳಲು ಕುರ್ಚಿಗಳಿಲ್ಲ. ಸಮಸ್ಯೆಯನ್ನು ಕೇಳಲು ಹಿರಿಯ ಅಧಿಕಾರಿಗಳಿಗೆ ಫೋನ್ ಮಾಡಿದರೆ ಸರಿಯಾದ ಮಾಹಿತಿ ನೀಡುವುದಿಲ್ಲ.
ತಹಸಿಲ್ ಕಚೇರಿಯಲ್ಲಿ ಇಂಥ ಸಮಸ್ಯೆ ಸರ್ವೇಸಾಮಾನ್ಯವಾಗಿದ್ದು ಪಹಣಿ ತಿದ್ದುಪಡಿ ಸೇರಿದಂತೆ ಇತರ ದಾಖಲೆಗಳನ್ನು ಪಡೆಯಲು ರೈತರು ಹೈರಾಣಾಗಿದ್ದರೆ, ದಾಖಲೆಗಳ ಬಗ್ಗೆ ಮಾಹಿತಿ ಇಲ್ಲದ ರೈತರಿಗೆ ಅನಗತ್ಯ ಇಲ್ಲಸಲ್ಲದ ದಾಖಲೆಗಳನ್ನು ಕೇಳಿ ದಿನ ನಿತ್ಯ ಕಚೇರಿಗೆ ಅಲೆದಾಡುವಂತೆ ಮಾಡಿದ್ದಾರೆಂದು ತಮ್ಮ ಅಳಲು ತೋಡಿಕೊಂಡರು.ಕಚೇರಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗಿಂತ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು. ಒಬ್ಬ ನೌಕರರ ಜೊತೆಗೆ ಮೂರ್ನಾಲ್ಕು ಜನ ದಲ್ಲಾಳಿಗಳಿದ್ದು ಎಲ್ಲಾ ದಾಖಲೆಗಳನ್ನು ಅವರ ಮೂಲಕವೇ ಅಧಿಕಾರಿಗಳು ಪಡೆಯುತ್ತಿದ್ದಾರಂತೆ ಎನ್ನುವ ಮಾತುಗಳು ಸಾರ್ವಜನಿಕವಾಗಿ ಚರ್ಚೆಯಲ್ಲಿವೆ.
ಇನ್ನು ಹದನೂರ ಗ್ರಾಮದ ರೈತ ಕಳೆದ ನಾಲ್ಕುವರ್ಷದಿಂದ ಪಹಣಿಯಲ್ಲಿ ಹೆಸರು ತಿದ್ದುಪಡಿಗಾಗಿ ಎಲ್ಲಾ ದಾಖಲಾತಿಗಳನ್ನು ನೀಡಿ ಪ್ರತಿ ದಿನ ತಹಸೀಲ್ದಾರ ಕಚೇರಿಗೆ ಅಲೆದಾಡಿ ಕೊನೆಗೆ ಬೇಸತ್ತು ಕಚೇರಿಯ ಸಿಬ್ಬಂದಿಯೊಂದಿಗೆ ರಂಪಾಟ ನಡೆಸಿದ್ದಾರೆ ರೈತನ ಪ್ರಶ್ನೆಗೆ ಉತ್ತರಿಸಲಾಗದೆ ರೈತನನ್ನು ಸಮಾಧಾನ ಪಡಿಸಲು ಹರಸಾಹಸ ಪಟ್ಟರು ಇಷ್ಟೆಲ್ಲಾ ಘಟನೆಯು ನಡೆಯುತ್ತಿದ್ದರು ಯಾವೊಬ್ಬ ಸಿಬ್ಬಂದಿಯೂ ರೈತನನ್ನು ಸಮಾಧಾನ ಪಡಿಸಿ ಸನ್ನಿವೇಶವನ್ನು ತಿಳಿಗೊಳಿಸದೆ ಘಟನೆಯನ್ನು ಮೂಕ ವಿಸ್ಮಿತರಾಗಿ ನೋಡುತ್ತಾ ರೈತನನ್ನು ನೊಡಿ ವ್ಯಂಗದಿಂದ ನೋಡುತ್ತಾ ಕೊಳಿತಿರುವುದನ್ನು ಗಮನಿಸಿದ ಸಾರ್ವಜನಿಕರು ಇದು ನಮ್ಮ ಅನ್ನದಾತರಿಗೆ ಅಧಿಕಾರಿ ವರ್ಗ ನೀಡುವ ಗೌರವ ಎಂದು ಗೊಣಗುತ್ತಾ ಹೊದರು.




