ಕುಡಿದ ಮತ್ತಿನಲ್ಲಿ ಪತ್ನಿಗೆ ಕೊಚ್ಚಿ ಕೊಂದ ಪತಿ

ಸುರಪುರ ಟೈಮ್ಸ್ ವಾರ್ತೆ

ಸುರಪುರ: ಕುಡಿದ ಮತ್ತಿನಲ್ಲಿ ಗಂಡ ಹೆಂಡತಿಯನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಸೋಮವಾರ ನಸುಗಿನ ಜಾವ 1 ಗಂಟೆಗೆ ನಗರದ ಡೊಣ್ಣೀಗೇರಿ ಬಡಾವಣೆಯಲ್ಲಿ ನಡೆದಿದೆ. ಮರೆಮ್ಮ ಸಂಗಪ್ಪ ರಾಜವೋಳ (3೦) ಕೊಲೆಗೀಡಾದ ನತದೃಷ್ಟೆ ಎಂದು ಗುರುತಿಸಲಾಗಿದೆ. ಮರೆಮ್ಮಳನ್ನು ಕಕ್ಕೇರಾದ ಸಾ; ಹಿರೇಹಳ್ಳದ ಸಂಗಪ್ಪ ರಾಜವೋಳ ಎಂಬುವವರಿಗೆ ಮದುವೆ ಮಾಡಿಕೊಡಲಾಗಿತ್ತು. ಕೊಲೆ ಆರೋಪಿ ಸಂಗಪ್ಪ ರಾಜವೋಳ ಕುಡಿತದ ಚಟಕ್ಕೆ ಬಿದಿದ್ದ. ಈ ವಿಷಯದಲ್ಲಿ ಗಂಡ ಹೆಂಡತಿಯ ನಡುವೆ ಮೇಲಿಂದ ಮೇಲೆ ಜಗಳ ನಡೆಯತಿತ್ತು. ಗಂಡನ ಚಟದಿಂದ ಬೇಸತ್ತಿದ್ದ ಮರೆಮ್ಮ ಕಳೆದ ಕೆಲ ದಿನಗಳಿಂದ ಸುರಪುರದ ಡೊಣ್ಣೀಗೇರಿಯ ತವರು ಮನೆ ಸೇರಿದ್ದಳು. ಸೋಮವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಸಂಗಪ್ಪ ಕುಡಿದ ಅಮಲಿನಲ್ಲಿ ಹೆಂಡತಿ ಮರೆಮ್ಮಳ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಘಟನೆ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!