ಅನರ್ಹರಿಗೆ ಪಿಂಚಣಿ ಸೌಲಭ್ಯ: ಕ್ರಮ ಕೈಗೊಳ್ಳಲು ನಗರಸಭೆ ಸದಸ್ಯ ಸೋಮನಾಥ ಡೊಣ್ಣಿಗೇರಾ ಮನವಿ
ಸುರಪುರ ಟೈಮ್ಸ್ ವಾರ್ತೆ
ಸುರಪುರ:ಕೇಂದ್ರ ಸರ್ಕಾರದ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ ಮತ್ತು ರಾಜ್ಯ ಸರ್ಕಾರ ನೇತೃತ್ವದ ಸಂಧ್ಯಾ ಸುರಕ್ಷಾ ಯೋಜನೆ, ಮಾಶಾಸನ ದುರ್ಬಳಕೆ ಮಾಡಿಕೊಂಡು ಅಕ್ರಮ ದಾಖಲೆ ಸೃಷ್ಟಿಸಿ, ಅನಧಿಕೃತವಾಗಿ ವೃದ್ಧಾಪ್ಯ ವೇತನವನ್ನು ಪಡೆಯುತ್ತಿದ್ದ
ಸುರಪುರ ತಾಲೂಕಿನಾದ್ಯಂತ ಪ್ರತಿ ಹಳ್ಳಿಗಳಲ್ಲಿ ಪಿಂಚಣಿ ಯೋಜನೆ ಅನರ್ಹರಿಗೆ ಆದೇಶಪತ್ರ ನೀಡಲಾಗುತ್ತಿದೆ.
65ವರ್ಷ ವಯಸ್ಸಾಗದೆ ಇರುವ 45 ರಿಂದ 50ವರ್ಷದೊಳಗಿನ ಫಲಾನುಭವಿಗಳ ಕಡೆಯಿಂದ ಸಾಕಷ್ಟ ಲಂಚವನ್ನು ಪಡೆದುಕೊಂಡು ಅಂತವರಿಗೆ ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ ಪಿಂಚಣಿ ಸೌಲಭ್ಯ ಬರುವಂತೆ ಅಧಿಕಾರಿಗಳು ಮಾಡಿರುತ್ತಾರೆ. ಇವರಿಗೆ ಆದೇಶ ಪತ್ರ ನೀಡಿದ ಗ್ರಾಮ ಆಡಳಿತಾಧಿಕಾರಿ, ಕಂದಾಯ ನಿರೀಕ್ಷಕರು, ಉಪ ತಹಸೀಲ್ದಾರರು, ನೆಮ್ಮದಿ ಕೇಂದ್ರ ಕಂಪ್ಯೂಟರ ಆಪರೇಟರರಗಳು ಎಲ್ಲರೂ ಕೂಡಿಕೊಂಡು ಈ ಸರ್ಕಾರದ ಹಣವನ್ನು ಲೂಟಿ ಮಾಡಿ ಭ್ರಷ್ಟಾಚಾರ ವೆಸಗಿರುತ್ತಾರೆ, ನಿಜವಾದ ಫಲಾನುಭವಿಗಳು ಹೋದರೆ ಇಲ್ಲದ ದಾಖಲಾತಿಗಳು ಕೇಳಿ ಅವರಿಗೆ ಯಾವುದೇ ಸೌಲಭ್ಯ ಬರದಂತೆ ಮಾಡುತ್ತಿದ್ದಾರೆ. ಈಗಾಗಲೇ ಫಲಾನುಭವಿಗಳು ಮೌಖಿಕವಾಗಿ ತಮಗೆ ತಿಳಿಸಿದರೂ ಕೂಡಾ ನೀವು ಯಾವುದೇ ತನಿಖೆಗೆ ಆದೇಶ ನೀಡಿಲ್ಲ ಎಂದು ದೂರಿದರು.
ಇದರ ಬಗ್ಗೆ ಕೂಲಂಕೂಶವಾಗಿ ಪರಿಶಿಲಿಸಿ ಅನ್ಯಾಯಕ್ಕೊಳಗಾದ ಫಲಾನುಭವಿಗಳಿಗೆ ನ್ಯಾಯ ದೊರಕಿಸಿಕೊಟ್ಟು ಮೋಸ, ವಂಚನೆ ಮಾಡಿ ಭ್ರಷ್ಟಾಚಾರವೆಸಗುತ್ತಿರುವ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ ಜರುಗಿಸಿ ಸೇವೆಯಿಂದ ವಜಾಗೊಳಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಲು& ಕೋಟ್ಯಾಂತರ ರೂಪಾಯಿ ಹಣ ಸರ್ಕಾರಕ್ಕೆ ವಂಚನೆ ಮಾಡಿದ್ದನ್ನು ಅಧಿಕಾರಿಗಳಿಂದ ದಾಪಸ್ಸು ಕಟ್ಟಿಸಿಕೊಳ್ಳಬೇಕು ಮತ್ತು ನಕಲಿ ಆದೇಶವನ್ನು ರದ್ದುಪಡಿಸಬೇಕೆಂದು ತಹಶೀಲ್ದಾರರಿಗೆ ಮನವಿ ಮಾಡಿದ್ದಾರೆ.


