ಬೆಳೆನಷ್ಟ: ಎಕರೆಗೆ 20 ಸಾವಿರ ರೂ.ಪರಿಹಾರಕ್ಕೆ ಮನವಿ
ಸುರಪುರ ಟೈಮ್ಸ್ ವಾರ್ತೆ
ಸುರಪುರ;ಅತಿವೃಷ್ಟಿಯಿಂದ ಹಾನಿಗಿಡಾದ ರೈತರಿಗೆ ಎಕರೆಗೆ 20 ಸಾವಿರ ರೂಪಾಯಿಯಂತೆ ಬೆಳೆ ಪರಿಹಾರ ನೀಡಿ ರೈತರಿಗೆ ಅನುಕೂಲ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ಶಾಸಕ ರಾಜಾ ವೇಣುಗೋಪಾಲನಾಯಕ ಆಗ್ರಹಿಸಿದರು
ಕರ್ನಾಟಕ ಜನದರ್ಶನ ವೇದಿಕೆ ಕಲ್ಯಾಣ ಕರ್ನಾಟಕ ವಿಭಾಗ ಮಂಗಳವಾರ ಶಾಸಕರಿಗೆ ಮನವಿ ಪತ್ರ ನೀಡುವುದರ ಮೂಲಕ ಮಾತನಾಡಿದವರು 2025ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರು ತಮ್ಮ ಜಮೀನಿನಲ್ಲಿ ತೊಗರಿ, ಸಜ್ಜೆ, ಶೇಂಗಾ, ಹತ್ತಿ ಬೆಳೆಯನ್ನು ಬಿತ್ತನೆ ಮಾಡಿ ಬೆಳೆಗೆ ರಸಗೊಬ್ಬರ, ಎಣ್ಣೆ ಮತ್ತು ಕೂಲಿಯಾಳುಗಳಿಗೆ ಖರ್ಚು ಮಾಡಿರುತ್ತಾರೆ. ಈ ಖರ್ಚು ಮಾಡಿದ ಹಣವು ಕೂಡಾ ಕೈಗೆ ಬರದಂತೆಯಾಗಿದೆ, ಅತಿವೃಷ್ಟಿಯಾಗಿ ರೈತರು ಬೆಳೆದಿರುವ ಬೆಳೆಗಳು ಭಾರೀ ಪ್ರಮಾಣದಲ್ಲಿ ನಷ್ಟವಾಗಿದೆ, ಏನು ಮಾಡಬೇಕೆಂದು ತಿಳಿಯದೆ ರೈತರು ಕಂಗಾಲಾಗಿದ್ದಾರೆ. ಕೂಡಲೇ ಪರಿಹಾರ ಘೋಷಣೆ ಮಾಡುವಲ್ಲಿ ನಿರತರಾಗಬೇಕೆಂದು ಸಂಘಟನೆಯ ಪದಾಧಿಕಾರಿಗಳು ಮನವಿ ಮಾಡಿದರು.
ಬೆಳೆಯು ಸಂಪೂರ್ಣ ಕೈಗೆ ಬರದೆ ಹಾಳಾಗಿ ಹೋಗಿ ಸಾಲದ ಸೂಳಿಯಲ್ಲಿ ಸಿಕ್ಕು ಹಾಕಿಕೊಂಡು ರೈತ ಪ್ರಾಣವನ್ನು ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿ ಇದ್ದಾನೆ. ಸರ್ಕಾರ ಬೆಳೆ ಪರಿಹಾರವೆಂದು ಒಂದು ಹೆಕ್ಟರ್‌ಗೆ 7000 ರೂಪಾಯಿ ಘೋಷಣೆ ಮಾಡಿದ್ದು, ಈ ಹಣವು ರೈತನ ಕೂಲಿಹಾಳಿಗೆ ಸಾಕಾಗುವುದಿಲ್ಲ. ಇದರಿಂದ ಆತನು ಹೊರಗೆ ಬರುವದಕ್ಕೆ ಸಾಧ್ಯವಾಗುವುದಿಲ್ಲ. ತಾವುಗಳು ಪ್ರತಿ ಎಕರೆಗೆ 20 ಸಾವಿರ ರೂಪಾಯಿಯಂತೆ ಬೆಳೆ ಪರಿಹಾರ ನೀಡಲು ಸರ್ಕಾರದ ಮೇಲೆ ಒತ್ತಡ ಹೇರಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಶಾಸಕರಲ್ಲಿ ಕರ್ನಾಟಕ ಜನದರ್ಶನ ವೇದಿಕೆ ಕಲ್ಯಾಣ ಕರ್ನಾಟಕ ವಿಭಾಗ ಉಪಾಧ್ಯಕ್ಷ ರವಿ.ಆರ್.ಅಂಬಿಗೇರ ಮನವಿ ಮಾಡಿದರು. ಈ ಸಂದರ್ಭದಲ್ಲಿ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು.



