ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಬೌದ್ಧ ವರ್ಷ ವಾಸ ಮುಕ್ತಾಯ ಆಚರಣೆ

ಸುರಪುರ ಟೈಮ್ಸ್ ವಾರ್ತೆ
ಸುರಪುರ:ಇಲ್ಲಿಯ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಜಿಬಿಟಿ ಆಡಳಿತ ಮಂಡಳಿಯಿಂದ ಬೌದ್ಧ ವರ್ಷ ವಾಸ ಮುಕ್ತಾಯ ಆಚರಣೆ ಮಂಗಳವಾರ ಜರುಗಿತು.ಭಗವಾನ್ ಬುದ್ಧರ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸಿ ಮೇಣದ ಬತ್ತಿ ಬೆಳಗಿಸಿ ನಮನ ಸಲ್ಲಿಸಲಾಯಿತು. ಹಿರಿಯ ದಮ್ಮಚಾರಿ ಮರೆಪ್ಪ ಬುಕ್ಕಲ್ ಅವರು ಸಂದೇಶ ಪಂಚಶೀಲ ತತ್ವಗಳ ಬಗ್ಗೆ ಮತ್ತು ಭಗವಾನ್ ಬುದ್ಧರ ಬೋಧನೆಯ ಕುರಿತು ವಿವರಿಸಿದರು.
ಜಿಬಿಟಿ ಪ್ರಧಾನ ಕಾರ್ಯದರ್ಶಿ ರಾಹುಲ್ ಹುಲಿಮನಿ ಕಮಾಪನ ಮತ್ತು ಶೀಲ ಯೋಜನೆಯನ್ನು ಮಾಡಿದರು. ಜಿಬಿಟಿ ಅಧ್ಯಕ್ಷ ವೆಂಕಟೇಶ ಹೊಸಮನಿ ಭಾಗಿಯಾಗಿದ್ದ ಪ್ರತಿಯೊಬ್ಬರಿಗೆ ಪುಸ್ತಕಗಳನ್ನು ಕಾಣಿಕೆಯಾಗಿ ನೀಡಿದರು.
ವಿಹಾರದ ಗೌರವಾಧ್ಯಕ್ಷ ವರಜ್ಯೋತಿ ಬಂತೆಜಿಯವರು ಸಾನಿಧ್ಯ ವಹಿಸಿದ್ದರು,ಶರ್ಮಿಳಾ ಎಂ.ಕರಡಕಲ್ ಕುಟುಂಬದವರು ಭೋಜನ ದಾನ ನೀಡಿದರು. ಭಾಗವಹಿಸಿದ ಪ್ರಮುಖರು ನಾಗಣ್ಣ ಕಲ್ಲದೇವನಹಳ್ಳಿ, ಮಾಳಪ್ಪ ಕಿರದಳ್ಳಿ, ಮರಪ್ಪ ತೆಲ್ಕರ್, ತಿಪ್ಪಣ್ಣ ಶಳ್ಳಿಗಿ, ಚಂದಪ್ಪ ಪಂಚಂ, ಶೇಖರ್ ಮಂಗಳೂರು, ಮಂಜುಳಾ ಸುರಪುರ,ಶಿಲ್ಪಾ ಹುಲಿಮನಿ, ಭೀಮಬಾಯಿ ಕಲ್ಲದೇವನಹಳ್ಳಿ, ಸುನಿತಾ ಕಿರದಳ್ಳಿ, ಶ್ರೀನಿವಾಸ ನಾಯಕ ಬೊಮ್ಮನಹಳ್ಳಿ, ರಾಜು ದೊಡ್ಡಮನಿ, ರಾಜು ಬಡಿಗೇರ್ ರಮೇಶ್ ಬಡಿಗೇರ್, ಬಸವರಾಜ್, ಹಲವಾರು  ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸುರಪುರ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಬೌದ್ಧ ವರ್ಷ ವಾಸ ಮುಕ್ತಾಯ ಆಚರಣೆ ಜರುಗಿತು.

Leave a Reply

Your email address will not be published. Required fields are marked *

error: Content is protected !!