ಬಸವಸಾಗರಕ್ಕೆ ಬಾಗಿನ ಸಮರ್ಪಣೆ ಇಂದು
ಸುರಪುರ ಟೈಮ್ಸ್ ವಾರ್ತೆ
ಸುರಪುರ: ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಯಾದಗಿರಿ
ಜಿಲ್ಲಾ ಉಸ್ತುವಾರಿ ಸಚಿವ ಶರಣಬಸ್ಸಪ್ಪ ದರ್ಶನಾಪೂರ, ಶಾಸಕ ರಾಜಾ ವೇಣುಗೋಪಾಲ ನಾಯಕ ಇಂದು ಬೆಳಿಗ್ಗೆ 11-30ಕ್ಕೆ ಬಾಗಿನ ಅರ್ಪಿಸಲಿದ್ದಾರೆ. ದಸರಾ ಹಬ್ಬದ ನಂತರ ಇಷ್ಟೊಂದು ಸುದೀರ್ಘ ದಿನಗಳ ನಂತರ ತಡವಾಗಿ ಅರ್ಪಿಸುತ್ತಿರುವದು ಇದೇ ಮೊದಲ ಬಾರಿಯಾಗಿದೆ. ಇದಕ್ಕೆ ಅತಿಯಾದ ಮಳೆಯ ಕಾರಣವೂ ಕೂಡಾ ಎನ್ನಲಾಗಿದೆ.
ಜಲಾಶಯದಿಂದ 6 ಲಕ್ಷ ಹೆಕ್ಟೇರ್‌ಗೆ ನೀರು ಹರಿಸಲಾಗುತ್ತಿದೆ. ವಿಜಯಪುರ, ಇಂಡಿ, ಶಹಾಪುರ, ಜೇವರ್ಗಿ, ಸುರಪುರ, ರಾಯಚೂರ, ದೇವದುರ್ಗ, ಲಿಂಗಸೂಗೂರು, ಕೊಪ್ಪಳ, ಹುನಗುಂದ, ಕುಷ್ಟಗಿ, ಯಲಬುರ್ಗಾ, ಕುಕನೂರು ಸೇರಿ ಅನೇಕ ರೈತರು ಏತ ನೀರಾವರಿ ಯೋಜನೆಗಳ ಪ್ರಯೋಜನ ಪಡೆಯಲಿದ್ದಾರೆ. ನಾರಾಯಣಪುರ, ಭೀಮರಾಯನಗುಡಿ, ರಾಮಪುರ ವಲಯಗಳ ಮುಖ್ಯ ಅಭಿಯಂತರರು, ಕಾಡಾ ಆಡಳಿತ ಅಧಿಕಾರಿಗಳು, ಅಧಿಕ್ಷಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆಂದು ಆಣೆಕಟ್ಟು ವಿಭಾಗದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

