ವಿದ್ಯುತ್ ಅವಘಡ : ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಧನದ ಚೆಕ್ ವಿತರಣೆ

ಸುರಪುರ ಟೈಮ್ಸ್ ವಾರ್ತೆ
ಸುರಪುರ;ವಿದ್ಯುತ್‌ ಅವಘಡದಿಂದಾಗಿ ರಂಗಂಪೇಠ ಹೊರವಲಯದ ಜಮೀನನಲ್ಲಿ ಸೋಮನಾಥ ಕೆಲಸ ಮಾಡುವ ಸಂದರ್ಭದಲ್ಲಿ ವಿದ್ಯುತ್ ತಗುಲಿ ಮೃತಪಟ್ಟ ಕುಟುಂಬಸ್ಥರಿಗೆ ಜೆಸ್ಕಾಂ ಇಲಾಖೆ ವತಿಯಿಂದ 5 ಲಕ್ ರೂಪಾಯಿ ಚೆಕ್ ಫಲಾನುಭವಿಗಳಿಗೆ ನಗರದ ತಮ್ಮ ಕಚೇರಿ ಆವರಣದಲ್ಲಿ ಸುರಪುರ ಶಾಸಕರಾದ ರಾಜಾ ವೇಣುಗೋಪಾಲ ನಾಯಕ ಅವರು ಪರಿಹಾರದ ಧನದ ಚೆಕ್ ವಿತರಿಸಿದರು.

ಈ ಸಮಯದಲ್ಲಿ ಮಾತನಾಡಿದ ಅವರು, ಸರಕಾರದಿಂದ ಲಭಿಸಿರುವ ಪರಿಹಾರ ಧನದ ಚೆಕ್ ಗಳನ್ನು ನೀಡಲಾಗುತ್ತಿದ್ದು, ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಪರಿಹಾರ ಹಣವನ್ನು ವ್ಯರ್ಥ ಮಾಡದೇ ತಮ್ಮ ಜೀವನೋಪಯಾಕ್ಕೆ ಬಳಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ . ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ವಿಠ್ಠಲ ಯಾದವ್, ಮಲ್ಲಣ್ಣ ಸಾಹುಕಾರ,ದೊಡ್ಡ ದೇಸಾಯಿ ದೇವರಗೋನಾಲ, ಎಇಇ ರಫೀಕ್, ಮುಖಂಡರಾದ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!