ಅ.15ರಂದು ರಾಜ್ಯ ಹೆದ್ದಾರಿ ಬಂದ್
ಸುರಪುರ ಟೈಮ್ಸ್ ವಾರ್ತೆ
ಸುರಪುರ : ಡಾ.ಬಿ.ಆರ್. ಅಂಬೇಡ್ಕರ್ ಭೂಮಿ ಮಂಜೂರಾತಿ ಹೋರಾಟ ಸಮಿತಿ ವತಿಯಿಂದ ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿದರು.
ಈ ಸಮಯದಲ್ಲಿ ಸಮಿತಿಯ ಮುಖಂಡರು ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ ವೃತ್ತ ಅಭಿವೃದ್ಧಿಗಾಗಿ ನಿರಂತರ ಧರಣಿ ಸತ್ಯಾಗ್ರಹವು ಹಮ್ಮಿಕೊಂಡಿರುವ ಧರಣಿಯು ಇಂದಿಗೆ 50 ದಿನ ಪೂರೈಸಿದರು ಸಹ ಇಲ್ಲಿಯವರೆಗೂಬೇಡಿಕೆಗಳನ್ನು ಈಡೇರುಸುವಲ್ಲಿ ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ವಿಫಲವಾಗಿದೆ. ಮತ್ತು ಸರಿಯಾಗಿ ಸ್ಪಂದಿಸದೇ ತುಂಬಾ ವಿಳಂಬ ದೋರಣೆಯನ್ನು ಅನುಸರಿಸುತ್ತಿರುವದನ್ನು ಎಂದು ಆಕ್ರೊಶ ವ್ಯಕ್ತಪಡಿಸಿದರು.
ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಅ. 15 ರಂದು ದೇವಾಪೂರ ರಾಜ್ಯ ಹೆದ್ದಾರಿಯನ್ನು ಬಂದಮಾಡಿ ರಸ್ತೆ ರೋಖೋ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ. ಅಂದಿನ ಹೊರಾಟದ ಮನವಿ ಪತ್ರವನ್ನು ಖುದ್ದಾಗಿ ಜಿಲ್ಲಾಧಿಕಾರಿಗಳೇ ಬಂದು ಸ್ವಿಕರಿಸಬೇಕು ಎಂದರು.
ನಂತರ ಮುಖಂಡ ಮಾಳಪ್ಪ ಕಿರದಳ್ಳಿ ಮಾತನಾಡಿ, ಕಳೆದ 50 ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಧರಣಿ ನಿರತ ಸ್ಥಳದ ಮುಂದೆ ತಹಸಿಲ್ದಾರ ಹಾದು ಹೊಗುತ್ತಾರೆ. ಅದರು ವೇದಿಕೆ ಕಡೆಗೆ ಬಂದಿಲ್ಲಾ ಇವರು ದಲಿತ ವಿರೋಧಿ ನಡೆ ಎಸಗುತ್ತಿದ್ದಾರೆ. ಅವರ ನಡೆಯನ್ನು ಖಂಡಿಸುತ್ತೇವೆ ಮತ್ತು ಇಂತಹ ಅಧಿಕಾರಿಗಳಿಗೆ ಮುಂದಿನ ದಿನದಲ್ಲಿ ನಮ್ಮ ದಲಿತ ಸಂಘರ್ಷ ಸಮಿತಿಯವರು ತಕ್ಕ ಪಾಠ ಕಲಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೆಂಕಟೇಶ್ ಹೊಸಮನಿ , ರಾಹುಲ್ ಹುಲಿಮನಿ, ನಾಗಪ್ಪ ಕಲ್ಲದೇವನಹಳ್ಳಿ ಶ್ರೀನಿವಾಸ್ ನಾಯಕ್ ಬೊಮ್ಮನಹಳ್ಳಿ, ನಿಂಗಣ್ಣ ಗೋನಾಲ, ಶಿವಲಿಂಗ ಹಸನಾಪುರ, ಮರಿಲಿಂಗಪ್ಪ ಗುಡಿಮನಿ,ಶರಣಪ್ಪ ತಳವಾರಗೇರ, ಮಹಾದೇವ ಚಲುವಾದಿ, ಶೇಖರ ಮಂಗಳೂರ ಶಿವಶಂಕರ್ ಎಚ್ ಹೊಸಮನಿ ಮಾನಪ್ಪ ಕಲ್ಲದೇವನಹಳ್ಳಿ
ಮಂಜುನಾಥ್ ಹೊಸಮನಿ, ಶರಣು ಚಂದ್ಲಾಪುರ ಮಲ್ಲಿಕಾರ್ಜುನ ತಳವಾರಗೇರಾ,ನಾಗರಾಜ ವಾಗಣಗೇರಾ,ಶರಣಪ್ಪ ವಾಗಣಗೇರಾ,ರಾಮಚಂದ್ರ ವಾಗಣಗೇರಾ,ಚಂದಪ್ಪ ,
ಮಹಾದೇವ ಚಲವಾದಿ, ವೈಜನಾಥ ಹೊಸಮನಿ ಆಕಾಶ ಕಟ್ಟಿಮನಿಸೇರಿದಂತೆ ಅನೇಕರು ಉಪಸ್ಥಿತರಿದ್ದರು.




