ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ, ಹಣ ಇರುವ ಬ್ಯಾಗ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಸುರಪುರ ಬಸ್ ಘಟಕದ ನಿರ್ವಾಹಕ, ಚಾಲಕ

ಸುರಪುರ ಟೈಮ್ಸ್ ವಾರ್ತೆ
ಸುರಪುರ: ವ್ಯಕ್ತಿಯೊಬ್ಬರ ಜೇಬಿನಿಂದ ಹತ್ತು ರೂಪಾಯಿ ಆಚೆ ಬಿದ್ದರು ಎತ್ತಿಕೊಂಡು ಹೋಗುವ ಈಗಿನಲ ಕಾಲದಲ್ಲಿ ಬಸ್ ನಲ್ಲೇ ಬಿಟ್ಟು ಹೋಗಿದ್ದ ಚಿನ್ನಾಭರಣ ಇದ್ದ ಬ್ಯಾಗ್ ಅನ್ನು ನಿರ್ವಾಹಕ ಬಸವರಾಜ ಪೂಜಾರ ಚಾಲಕ ನಿಂಗಪ್ಪ ವಾಪಸ್ ನೀಡಿ ಮಾನವೀಯತೆ ಮೆರೆದಿದ್ದಾರೆ.ದಿನಾಂಕ 8.10.2025 ರಂದು ಹುಣಸಗಿಯಿಂದ ನಿಡಗುಂದಿ ಹೋಗುತ್ತೀರುವಾಗ ಸರಸ್ವತಿ ಎಂಬ ಮಹಿಳೆ,6 ತೋಲಿ ಚಿನ್ನಾಭರಣ ಇದರ ಬೆಲೆ ಸರಿ ಸುಮಾರು 7,44,000, 2 ಬೆಳ್ಳಿ ಕಡಗ , ಬೆಳ್ಳಿ ಚೈನು 4 ಸೇಟು ಇದ್ದ ಬ್ಯಾಗ್ ಅನ್ನು ಬಸ್ನಲ್ಲೇ ಬಿಟ್ಟು ಹೋಗಿದ್ದರು. ಬಳಿಕ ಬಸ್ ನಿರ್ವಾಹಕಿ ಬಸವರಾಜ ಪೂಜಾರ ಅವರು ಬ್ಯಾಗ್ ಗಮನಿಸಿ ತಮ್ಮ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.ಮಹಿಳೆಯನ್ನು ಪತ್ತೆ ಮಾಡಿ ಸ್ಥಳಕ್ಕೆ ಕರೆಯಿಸಿಕೊಂಡು ಬ್ಯಾಗ್ ಹಸ್ತಾಂತರಿಸಿದ್ದಾರೆ.ಘಟಕದ ಸಿಬ್ಬಂದಿಗಳ ಸಮ್ಮುಖದಲ್ಲಿ ಮಹಿಳೆಗೆ ಆಭರಣ ಹಾಗೂ ಹಣ ಮರಳಿಸಿದ್ದು, ನಿರ್ವಾಹಕ,ಚಾಲಕ ಪ್ರಮಾಣಿಕ ಕರ್ತವ್ಯಕ್ಕೆ ಸಾರ್ವಜನಕರು ಮತ್ತು ಘಟಕದ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ಮೆಚ್ಚುಗೆ ವ್ಯಕ್ತಪಡಿಸಿ ಸನ್ಮಾನಿಸಿದರು.ವಾರಸದಾರರು ಕೃತಜ್ಞತೆಯನ್ನು ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!