ಬೆಂಬಲ ಬೆಲೆಯಲ್ಲಿ ಕ್ವಿಂಟಾಲ್ ಗೆ 8,110/- ರಂತೆ ಹತ್ತಿ ಖರೀದಿಗೆ ರೈತರ ನೋಂದಣಿ ಆರಂಭ

ಬೆಂಬಲ ಬೆಲೆಯಲ್ಲಿ ಕ್ವಿಂಟಾಲ್ ಗೆ 8,110/- ರಂತೆ ಹತ್ತಿ ಖರೀದಿಗೆ ರೈತರ ನೋಂದಣಿ ಆರಂಭ

ಸುರಪುರ;ಕರ್ನಾಟಕ ಸರಕಾರದಡಿ ಬರುವ ಕೃಷಿ ಮಾರಾಟ ಇಲಾಖೆ ಮತ್ತು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ(Krishi Marata Mandali)ಸಹಯೋಗದಲ್ಲಿ 2025-26 ನೇ ಸಾಲಿನಲ್ಲಿ ಹತ್ತಿ ಬೆಳೆಗಾರರಿಂದ ನೇರವಾಗಿ ಹತ್ತಿಯನ್ನು ಖರೀದಿ ಮಾಡಲು ರೈತರ ನೋಂದಣಿಯನ್ನು ಮಾಡಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳಾದ ವಿನಾಯಕ ತಿಳಿಸಿದ್ದಾರೆ.

ಭಾರತೀಯ ಹತ್ತಿ ನಿಗಮ ನಿಯಮಿತ(CCI)ವು ರಾಜ್ಯದ ಹತ್ತಿ ಬೆಳೆಗಾರರಿಂದ(Cotton MSP) ಬೆಂಬಲ ಬೆಲೆಯಲ್ಲಿ ಹತ್ತಿಯನ್ನು ಖರೀದಿ ಮಾಡಲು ತೀರ್ಮಾನಿಸಿದ್ದು ಇದಕ್ಕಾಗಿ ಅರ್ಜಿ ರೈತರನ್ನು ಗುರುತಿಸಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಲು ಮೊಬೈಲ್‌ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಾಗಿದ್ದು.
ನೋಂದಣಿ ಮಾಡಿಕೊಳ್ಳಲು ನಿಗದಿಪಡಿಸಿರುವ ಅರ್ಹತಾ ಮಾನದಂಡಗಳು ಅರ್ಜಿದಾರ ರೈತರು ಕರ್ನಾಟಕದ ನಿವಾಸಿಯಾಗಿರಬೇಕು.
ಹತ್ತಿಯನ್ನು ಬೆಳೆದಿರುವ ರೈತರು ಮಾತ್ರ ನೋಂದಣಿ ಮಾಡಿಕೊಳ್ಳಬೇಕು ಮಧ್ಯವರ್ತಿಗಳಿಗೆ ಅವಕಾಶವಿರುವುದಿಲ್ಲ ಎಂದರು.
ಯಾರ ಹೆಸರಿಗೆ ಜಮೀನಿನ ಖಾತೆ ಇರುತ್ತದೆಯೋ ಆ ರೈತರ ಹೆಸರಿನಿಂದ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ
ಹತ್ತಿಯನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಆಸಕ್ತಿಯನ್ನು ಹೊಂದಿರುವ ರೈತರು ತನ್ನ ಹೆಸರನ್ನು ನೋಂದಣಿಯನ್ನು ಮಾಡಿಕೊಳ್ಳಲು ಅರ್ಜಿ ಸಲ್ಲಿಕೆಗೆ ಪ್ರಾರಂಭದಿನಾಂಕ: 01 ಸೆಪ್ಟೆಂಬರ್ 2025 ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ: 30 ಅಕ್ಟೋಬರ್ 2025 ಹಾಗಿರುತ್ತದೆ ಎಂದರು.
ಬೆಂಬಲ ಬೆಲೆಯಲ್ಲಿ ಹತ್ತಿ ಬೆಳೆಗಾರರಿಂದ ಹತ್ತಿಯನ್ನು ಖರೀದಿ ಮಾಡಲು ಸರಕಾರದಿಂದ ನಿಗದಿಪಡಿಸಿರುವ ಪ್ರತಿ ಕ್ವಿಂಟಾಲ್ ಗೆ ಖರೀದಿ ದರ
ಹತ್ತಿ (ಮಧ್ಯಮ ಎಳೆ)- 7,710/- ರೂ
ಹತ್ತಿ (ಉದ್ದನೆಯ ಎಳೆ)-8,110/- ರೂ ಇರುತ್ತದೆ.
ಬೆಂಬಲ ಬೆಲೆಯಲ್ಲಿ ಹತ್ತಿಯನ್ನು ಮಾರಾಟ ಮಾಡಲು ಆಸಕ್ತಿಯನ್ನು ಹೊಂದಿರುವ ರೈತರು ಕೆಳಗೆ ತಿಳಿಸಿರುವ ಹಂತಗ ಅನುಸರಿಸಿ “ಕಪಾಸ್ ಕಿಸಾನ್” ಮೊಬೈಲ್ ಅಪ್ಲಿಕೇಶನ್ ಅನ್ನು ಗೂಗಲ್ ಪ್ರೈ ಸ್ಟೋರ್ ಪ್ರವೇಶ ಮಾಡಿ ಡೌನ್ಫೋಡ್ ಮಾಡಿಕೊಂಡು ಹತ್ತಿ ಮಾರಾಟ ಮಾಡಲು ನೋಂದಣಿಯನ್ನು ಮಾಡಿಕೊಳ್ಳಬಹುದು.
ಹತ್ತಿ ಬೆಳೆಗಾರರು ಭಾರತೀಯ ಹತ್ತಿ ನಿಗಮ ನಿಯಮಿತದಿಂದ ಹೊರಡಿಸಿರುವ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಹತ್ತಿಯನ್ನು ಮಾರಾಟ ಮಾಡಿ ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಸಕಾಲದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳುವಂತೆ ಅರ್ಹ ರೈತರಿಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!