ಆಲ್ದಾಳ: ಗ್ರಾಮ ಪಂತಾಯಿತಿಯಲ್ಲಿ ಅವ್ಯವಹಾರ: ತನಿಖೆಗೆ ದಲಿತ ಸೇನೆ ಆಗ್ರಹ

ಸುರಪುರ ಟೈಮ್ಸ್ ವಾರ್ತೆ
ಸುರಪುರ : ತಾಲೂಕಿನ ಆಲ್ದಾಳ ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸು ಯೋಜನೆ ಅವ್ಯವಹಾರ ನಡೆದಿದ್ದು, ಕೂಡಲೇ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸೇನೆ ಮುಖಂಡರು ಆಗ್ರಹಿಸಿದ್ದಾರೆ .
ಈ ಕುರಿತು ತಾಲೂಕು ಪಂಚಾಯತ್ ಇಓ ಯವರಿಗೆ ಮನವಿ ಸಲ್ಲಿಸಿದರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಹಲವಾರು ಸಮಸ್ಯೆಗಳಿದ್ದು, ಬೀದಿದೀಪವಾಗಲಿ, ಕುಡಿಯುವ ಬೋನ್ಹಾಳ ಗ್ರಾಮದಲ್ಲಿ ಒಂದೇ ಬೋರ್ವೆಲ್ ಎಸಿ ವಾರ್ಡ್ ನ ಬಾವಿಯ ನೀರು ಪಾಚಿಯಿಂದ ಕೂಡಿದ್ದು ಸ್ವಚ್ಛತೆ ಮರಿಚಿಕೆಯಾಗಿದೆ. ಹೀಗಾಗಿ ಕುಡಿಯುವ ನೀರಾಗಲಿ ಸ್ವಚ್ಛತೆ ಯಾವುದೇ ಕೆಲಸ ಮಾಡದೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮನಸ್ಸಿಗೆ ತಮಗೆ ಬೇಕಾದವರಿಗೆ ಮತ್ತು ಪಂಚಾಯತ್ ಸದಸ್ಯರಿಗೆ ಬಂದಂತೆ ಬಿಲ್ ನೀಡಿದ್ದಾರೆ. ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ತಿಳಿಸಿದರೂ ಹಲವು ಬಾರಿ ಈವರೆಗೂ ಯಾವುದೇ ತನಿಖೆಯಾಗಿಲ್ಲ. ತಾಲೂಕು ಪಂಚಾಯಿತಿ ಅಧಿಕಾರಿಗಳು ಈ ಸಮಸ್ಯೆಗಳತಕ್ಷಣವೇ ತನಿಖೆಗೆ ಆಗ್ರಹಿಸಬೇಕು

15ನೇ ಹಣಕಾಸಿನ ಅನುದಾನದ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡಿಲ್ಲ. ಹಿಂದಿನ ವರ್ಷದ ವಾರ್ಷಿಕ ಜಮಾಬಂದಿ ನಡೆಸದೆ ಮುಂದಿನ ವರ್ಷದ ಅನುದಾನವನ್ನು ಖರ್ಚು ಮಾಡುವಂತಿಲ್ಲ. ಅದು ಪಾಲನೆಯಾಗುತ್ತಿಲ್ಲ. 2025–26ನೇ ಸಾಲಿನ ಅನುದಾನ , ಏಕಪಕ್ಷಿಯವಾಗಿ ಅದನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ
ಬಡವರ ಕಲ್ಯಾಣ ಹಾಗೂ ಗ್ರಾಮಗಳ ಅಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಆದರೆ, ಅನುಷ್ಠಾನಗೊಳಿಸುವಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರು ವಿಫಲವಾಗಿದ್ದು, ಸಂವಿಧಾನ ಆಶಯಗಳನ್ನು ಗಾಳಿಗೆ ತೂರಿ ಸಾರ್ವಜನಿಕ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಪಿಡಿಓ ಮತ್ತು ತೆಗೆದುಕೊಂಡವರ ವಿರುದ್ಧ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಹಂತ ಹಂತವಾಗಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ತಿಳಿಸಿದ್ದರು.
ಈ ಸಂದರ್ಭದಲ್ಲಿ ಮರೇಪ್ಪ ಗುಡಿಮನಿ, ಮಹಾದೇವ ಚಲುವಾದಿ, ಮಹಾದೇವಪ್ಪ ದೊಡಮನಿ ಬಸ್ಸು ಮದ್ರಿಕೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!