ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ
ಸುರಪುರ ಟೈಮ್ಸ್ ವಾರ್ತೆ
ಸುರಪುರ: ಸಮಸ್ತ ನಾಡು ಬಂಧುಗಳಿಗೆ ಹಾಗೂ ಸುರಪುರ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಕತ್ತಲಿನಿಂದ ಬೆಳಕಿನ ಹಾದಿ ತೋರುವ ಈ ಹಬ್ಬವು ಸಮಾಜವನ್ನು ಬಾಧಿಸುತ್ತಿರುವ ದ್ವೇಷ, ಹಿಂಸೆ, ಅಸತ್ಯ, ಅಶಾಂತಿ, ಬಡತನ, ಅಜ್ಞಾನಗಳ ಅಂಧಕಾರವನ್ನು ಸರಿಸಿ, ಸ್ನೇಹ, ಸಹಬಾಳ್ವೆ, ಸತ್ಯ, ನೆಮ್ಮದಿ, ಸುಜ್ಞಾನದ ಬೆಳಕನ್ನು ಎಲ್ಲೆಡೆ ಬೆಳಗಿಸಲಿ ಎಂದು ಹಾರೈಸುತ್ತೇನೆ. ಹಬ್ಬದ ಸಂಭ್ರಮದ ಜೊತೆಗೆ ಪರಿಸರ ಕಾಳಜಿಯನ್ನು ಮರೆಯದಿರಿ. ಹಸಿರು ಪಟಾಕಿಗಳನ್ನೇ ಬಳಸಿ, ಚಿಕ್ಕ ಮಕ್ಕಳು ಪಟಾಕಿ ಸಿಡಿಸುವಾಗ ಹಿರಿಯರು ಅವರ ಬಗ್ಗೆ ಜಾಗೃತೆ ವಹಿಸಿ. ದೀಪಾವಳಿಯನ್ನು ಸಂಭ್ರಮದಿಂದಲೂ, ಸುರಕ್ಷಿತವಾಗಿಯೂ ಆಚರಿಸಿ ಎಂದು ವಿನಂತಿಸಿದರು.. ಮತ್ತೊಮ್ಮೆ ತಮ್ಮೆಲ್ಲರಿಗೂ ದೀಪಾವಳಿಯ ಶುಭಾಶಯಗಳು ಎಂದು ಸುರಪುರ ವಿಧಾನ ಸಭೆ ಕ್ಷೇತ್ರದ ಶಾಸಕ ರಾಜಾ ವೇಣುಗೋಪಾಲ ನಾಯಕ ಶುಭಾಷಯ ಕೋರಿದರು.


