ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಎಲ್ಲವೂ ಸಾಧ್ಯ: ಶಾಂತಮಯ ಶ್ರೀ

ಸುರಪುರ ಟೈಮ್ಸ್ ವಾರ್ತೆ

ಸುರಪುರ: ಗ್ರಾಮಗಳಲ್ಲಿ ಯಾವುದೇ ಸತ್ಕಾರ್ಯಗಳು ಪೂರ್ಣಗೊಳ್ಳಬೇಕಾದರೆ ಗ್ರಾಮಸ್ಥರ ಸಹಾಯ, ಸಹಕಾರದ ಜೊತೆಗೆ ನಾವೆಲ್ಲರೂ ಒಂದೇ ಭಾವನೆಯಿಂದ ಒಗ್ಗಟ್ಟಾಗಿ ಕೆಲಸ ಮಾಡಿದರೆ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಅಗತೀರ್ಥ ಹಾಗೂ ಸರೂರ ಹಾಲುಮತದ ಮೂಲ ಗುರುಪೀಠದ ಜಗದ್ಗುರು ರೇವಣಸಿದ್ದೇಶ್ವರ ಶಾಂತಮಯ ಮಹಾಸ್ವಾಮಿಗಳು ಹೇಳಿದರು. ಅವರು ಗುರುವಾರ ತಾಲೂಕಿನ ಕೆ. ತಳ್ಳಳ್ಳಿ ಗ್ರಾಮದ ಶ್ರೀ ಜಗದ್ಗುರು ರೇವಣಸಿದ್ದೇಶ್ವರರ ನೂತನ ಮಠದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು
ಶ್ರೀ ಮಠದ ಕಟ್ಟಡ ನಿರ್ಮಾಣ ಕಾಮಗಾರಿ ಇಂದಿನಿಂದ ಪ್ರಾರಂಭಗೊಂಡು ಒಂದು ವರ್ಷದ ಅವಧಿಯಲ್ಲಿ ಪೂರ್ಣಗೊಳಿಸುಂತೆ ಗ್ರಾಮಸ್ಥರಿಗೆ ಸೂಚನೆ ನೀಡಿದರು. ಮುಂದಿನ ದಿನಗಳಲ್ಲಿ ಶ್ರೀ ರೇವಣಸಿದ್ದೇಶ್ವರರ ಹೆಸರಿನಲ್ಲಿ ಮಠದಲ್ಲಿ ಪಲ್ಲಕ್ಕಿ ಉತ್ಸವ ಹಾಗೂ ಜಾತ್ರೆಯನ್ನು ಮುಂದುವರಿಸೋಣ ನಾನು ಯಾವತ್ತೂ ನಿಮ್ಮೋಂದಿಗೆ  ಇರುತ್ತೇನೆ ಎಂದು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ರೇವಣಸಿದ್ದಯ್ಯ ಗುರುವಿನ, ನಿಂಗಣ್ಣ ಸಾಹುಕಾರ ಮಾಲಗತ್ತಿ,ಸಾಹೇಬಗೌಡ ಪೊಲೀಸ್ ಪಾಟೀಲ, ಮಹಾದೇವಪ್ಪ ಪೂಜಾರಿ, ಚಿನ್ನಪ್ಪ ಚೂರಿ, ತಿರುಪತಿಗೌಡ ಕಾಕರಗಲ್ಲ, ಚನ್ನಪ್ಪ ಬೆಳ್ಳಿಕಟ್ಟಿ,ಮಲ್ಲನಗೌಡ ವಡಿಗೇರಿ, ಸೋಮಣ್ಣ ಮಾಲಗತ್ತಿ, ನಿಂಗಣ್ಣ ದೇವಿಕೇರಿ, ತಿಮ್ಮಣ್ಣ ದೊರಿ, ಸಾಯಬಣ್ಣ ಕತಿಗೇರ,ಗೌಡಪ್ಪ ಬಿರಾದಾರ, ರಾಘವೇಂದ್ರ ಮಾಸ್ತರ ಸೇರಿದಂತೆ ಗ್ರಾಮದ ಹಿರಿಯರು, ಯುವಕರು ಮತ್ತು ಮಕ್ಕಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!