26 ರಂದು ನಿವೃತ್ತ ನೌಕರರ ಸಮಾವೇಶ

ಸುರಪುರ ಟೈಮ್ಸ್ ವಾರ್ತೆ

ಸುರಪುರ:ಅ. 26 ರಂದು ನಗರದ ದರಬಾರ ಶಾಲೆಯಲ್ಲಿ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ನಿವೃತ್ತ ನೌಕರರ 18ನೇ ತಾಲ್ಲೂಕು ಸಮ್ಮೇಳನ ಏರ್ಪಡಿಸಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರ ಉದ್ಘಾಟಿಸುವರು. ನಿವೃತ್ತ ಎಸ್.ಪಿ. ಸಿ.ಎನ್. ಭಂಡಾರೆ, ನಿವೃತ್ತ ಪ್ರಾಚಾರ್ಯ ಬಿ.ಸಿ.ಎನ್. ದೇಶಮುಖ, ನಿವೃತ್ತ ವೈದ್ಯಾಧಿಕಾರಿ ವಿ.ಎಲ್. ಚೌಧರಿ, ನಿವೃತ್ತ ಪ್ರಾಚಾರ್ಯ ರಾಘವೇಂದ್ರ ಗುಡಗುಂಟಿ ಮುಖ್ಯ ಅತಿಥಿಗಳಾಗಿರುವರು.
ಸಂಘದ ಅಧ್ಯಕ್ಷ ಶಿವಪ್ಪ ಕಟ್ಟಿಮನಿ ಅಧ್ಯಕ್ಷತೆ ವಹಿಸುವರು. ಉಪಾಧ್ಯಕ್ಷರಾದ ರಾಜಾ ಅಮರಪ್ಪರಾಜ, ಅಬ್ದುಲ ರಜಾಕ ನಾಲತವಾಡ ವೇದಿಕೆಯಲ್ಲಿರುವರು.ಜೇಷ್ಠತಾ ಆಧಾರದ ಮೇಲೆ ೧೫ ಜನ ನಿವೃತ್ತ ನೌಕರರನ್ನು ಸನ್ಮಾನಿಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭುದೇವ ಕಲ್ಲೂರಮಠ, ಕೋಶಾಧ್ಯಕ್ಷ ಹನುಮಪ್ಪ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!