ಮತ ಕಳ್ಳತನಕ್ಕೆ ಸುರಪುರ ಮತ ಕ್ಷೇತ್ರದ 2018ರ ಚುನಾವಣೆಯೆ ಸಾಕ್ಷಿ : ಶಾಸಕ ಆರ್ವಿನ್
ಸುರಪುರ ಟೈಮ್ಸ್ ವಾರ್ತೆ
ಸುರಪುರ: 2018ರ ಚುನಾವಣೆಯಲ್ಲಿ ಸುರಪುರ ವಿಧಾನಸಭಾ ಕ್ಷೇತ್ರದಿಂದ ಸುಮಾರು 22 ಸಾವಿರಕ್ಕೂ ಹೆಚ್ಚು ನಕಲಿ ಮತದಾರರು ಸೇರ್ಪಡೆಯಾಗಿದ್ದವು. ಇದರಲ್ಲಿ ಅಪ್ರಾಪ್ತ ಮತದಾರರು, ಬೇರೆ ಜಿಲ್ಲೆಯ ಮತದಾರರು, ಒಬ್ಬನೇ ಮತದಾರರ ಆರು ಕೆಡೆ ಮತದಾನ ಪಟ್ಟಿಯಲ್ಲಿ ನೋಂದಣಿಯಾಗಿ ಮತ ಚಲಾವಣೆ ಮಾಡಿದ್ದಾರೆ, ಈ ಎಲ್ಲಾ ಚುನಾವಣೆ ಅಕ್ರಮವನ್ನು ಅಂದೇ ನಮ್ಮ ತಂದೆ ಮಾಜಿ ಶಾಸಕ ದಿ. ರಾಜಾ ವೆಂಕಟಪ್ಪ ನಾಯಕ ಅವರು ಚುನಾವಣೆ ಆಯೋಗದ ಗಮನ ಸೆಳೆದರೂ. ಹೀಗಾಗಿ 2023ರ ಚುನಾವಣೆಯಲ್ಲಿ 19 ಸಾವಿರಕ್ಕೂ ಹೆಚ್ಚು ನಕಲಿ ಮತದಾರರನ್ನು ಗುರುತಿಸಿ ಮತದಾರರ ಪಟ್ಟಿಯಿಂದ ಕೈ ಬಿಡಲಾಯಿತು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿ ವಸಂತ ಮಹಲ ಆವರಣದಲ್ಲಿ ಶನಿವಾರ ಮತ ಕಳ್ಳತನ ವಿರೋಧಿಸಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಕಲಿ ಮತದಾರರು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದಾರೆ, ಮತಗಳ್ಳತನ ವಿರುದ್ಧ ರಾಹುಲ್ ಗಾಂಧಿಯವರು ನಡೆಸುತ್ತಿರುವ ಜನಜಾಗೃತಿ ಹೋರಾಟಕ್ಕೆ ಬೆಂಬಲವಾಗಿ ಸಹಿ ಸಂಗ್ರಹಿಸಲಾಗುತ್ತಿದೆ, ದೇಶದ ಪ್ರಗತಿಯ ಈ ಹೋರಾಟಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು. ಜಾತಿ ಧರ್ಮದ ಆದರದ ಮೇಲೆ ಚುನಾವಣೆ ಎದುರಿಸುವ ಬಿಜೆಪಿ, ಅದು ನಡೆಯದಿದ್ದಾಗ ಮತ ಕಳ್ಳತನಕ್ಕೆ ಕೈ ಹಾಕಿದ್ದಾರೆ. ನಮ್ಮ ರಾಷ್ಟ್ರೀಯ ನಾಯಕರ ಹೋರಾಟದಿಂದ ಈಗಾಗಲೇ ದೇಶಾದ್ಯಂತ ಸಾಬೀತಾಗಿದ್ದು. ಸಹಿ ಸಂಗ್ರಹಿಸುವ ಮೂಲಕ ಅವರ ಹೋರಾಟಕ್ಕೆ ನಾವೆಲ್ಲರೂ ಬೆಂಬಲವಾಗಿ ನಿಲ್ಲುವಬೇಕು,ಕ್ಷೇತ್ರದ 319 ಬೂತ್ ನಲ್ಲಿ ಕೂಡ ಪ್ರತಿ ಬೂತ್ ನಿಂದ 250ಕ್ಕೂ ಹೆಚ್ಚು ಜನರ ಸಹಿ ಸಂಗ್ರಹಿಸಬೇಕೆಂದು ಕಾರ್ಯಕರ್ತ, ಮುಖಂಡರಿಗೆ ತಿಳಿಸಿದರು.
ಮತದಾನ ಪ್ರತಿಯೊಬ್ಬ ಪ್ರಜೆಯ ಹಕ್ಕು, ಚುನಾವಣೆ ಎದುರಿಸಲಾಗದವರು, ಮತ ಕಳ್ಳತನ ಮಾಡುತ್ತಿದ್ದಾರೆ. ಅದನ್ನು ಕದ್ದುಕೊಳ್ಳುವ ಈ ರೀತಿಯ ಪ್ರಯತ್ನಗಳನ್ನು ಖಂಡಿಸಲು ಎಲ್ಲರೂ ಎಚ್ಚರಿಕೆ ವಹಿಸಬೇಕು. ಮುಂದಿನ ತಾಲೂಕು, ಜಿಲ್ಲಾಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪಟ್ಟಿಗಳ ಪರಿಶೀಲನೆಯ ಮೂಲಕ ಯಾವುದೇ ರೀತಿಯ ಮತಗಳ್ಳತನದ ಸಾಧ್ಯತೆಗಳನ್ನು ತಡೆಯುವುದು ಅವಶ್ಯಕತೆ ಇದೆ ಎಂದು ಶಾಸಕ ರಾಜಾ ವೇಣುಗೋಪಾಲ್ ನಾಯಕ ಹೇಳಿದರು.
ಸಂದರ್ಭದಲ್ಲಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸರೆಡ್ಡಿ ಅನಪೂರ ಮಾತನಾಡಿ ಪಕ್ಷ ಗಟ್ಟಿಯಾಗಿ ನೆಲೆಯೂರಲು ಕಾರ್ಯಕರ್ತರೇ ಬುನಾದಿ. ಪಕ್ಷದ ಕಾರ್ಯಕರ್ತರು, ಮುಖಂಡರು ಎಲ್ಲರೂ ಒಗ್ಗೂಡಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದ ಆಶಯಗಳಿಗೆ ಧಕ್ಕೆಯಾಗದಂತೆ. ನಮ್ಮ ನಮ್ಮ ಮತಗಟ್ಟೆಗಳಲ್ಲಿ ನಕಲಿ ಮತದಾರರು ಸೇರ್ಪಡೆಯಾಗದಂತೆ ನಿಗಾ ವಹಿಸಬೇಕು, ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಬೇಕು, ಸಂವಿಧಾನದ ರಕ್ಷಣೆಗೆ ಕಾಂಗ್ರೆಸ್ ಪಕ್ಷದ ಮತಗಳ್ಳತನದ ವಿರುದ್ಧದ ಹೋರಾಟಕ್ಕೆ ಬೆಂಬಲಿಸುವಂತೆ ಮನವಿ ಮಾಡಿದರು.ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ದಂಡಿನ್ ಮಾತನಾಡಿ ಬಿಜೆಪಿಗರು ಪೊಳ್ಳು ಬಾಷಣ ಮಾಡುವ ಮೂಲಕ ದೇಶದ ಜನರನ್ನು ಯಾಮಾರಿಸುತ್ತಿದ್ದಾರೆ. ಬಿಜೆಪಿಯಲ್ಲಿ ಮತ ಕಳ್ಳತನ ಮಾಡುವವರಿಗೆ ಚಾಣುಕ್ಯ ಎಂದು ಕರೆಯುತ್ತಾರೆ. ದೇಶಪ್ರೇಮದ ಹೆಸರಿನಲ್ಲಿ ಯುವಕರನ್ನು ತಮ್ಮ ಏಳಿಗೆಗೆ ಬಳಸಿಕೊಳ್ಳುತ್ತಿದ್ದಾರೆ, ಬಿಜೆಪಿಯವರಿಂದ ನಾವು ದೇಶಪ್ರೇಮ ಕಲಿಯುವ ಅವಶ್ಯಕತೆ ಇಲ್ಲವೆಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ದಂಡಿನ್ ಮಾತನಾಡಿ ಬಿಜೆಪಿಗರು ಪೊಳ್ಳು ಬಾಷಣ ಮಾಡುವ ಮೂಲಕ ದೇಶದ ಜನರನ್ನು ಯಾಮಾರಿಸುತ್ತಿದ್ದಾರೆ. ಬಿಜೆಪಿಯಲ್ಲಿ ಮತ ಕಳ್ಳತನ ಮಾಡುವವರಿಗೆ ಚಾಣುಕ್ಯ ಎಂದು ಕರೆಯುತ್ತಾರೆ. ದೇಶಪ್ರೇಮದ ಹೆಸರಿನಲ್ಲಿ ಯುವಕರನ್ನು ತಮ್ಮ ಏಳಿಗೆಗೆ ಬಳಸಿಕೊಳ್ಳುತ್ತಿದ್ದಾರೆ, ಬಿಜೆಪಿಯವರಿಂದ ನಾವು ದೇಶಪ್ರೇಮ ಕಲಿಯುವ ಅವಶ್ಯಕತೆ ಇಲ್ಲವೆಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಸುರಪುರ ಮತಕ್ಷೇತ್ರದಲ್ಲಿ ಕಾನೂನು ವ್ಯಾಪ್ತಿಯಲ್ಲಿ ಅಧಿಕಾರ
ಕಳೆದ ಕೆಲ ದಿನಗಳ ಹಿಂದೆ ಮಾಜಿ ಸಚಿವ ರಾಜುಗೌಡ ಅವರು ಮಾತನಾಡಿ ಸುರಪುರ ಮತ ಕ್ಷೇತ್ರದಲ್ಲಿ ಪೊಲೀಸ್ ಇಲಾಖೆಯು ಆಡಳಿತ ಪಕ್ಷದ ಕೈಗೊಂಬೆಯಾಗಿ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದ್ದರು. ಈ ಆರೋಪಕ್ಕೆ ಶಾಸಕ ರಾಜಾ ವೇಣುಗೋಪಾಲ ನಾಯಕ ಪ್ರತಿಕ್ರಿಯಿಸಿ ಕ್ಷೇತ್ರದಲ್ಲಿ ನ್ಯಾಯದ ಪರವಾಗಿ ಪೊಲೀಸ್ ಇಲಾಖೆ ಕಾರ್ಯನಿರ್ವಹಿಸುತ್ತಿದೆ, ಅನ್ಯಾಯಕ್ಕೊಳಗಾದವರಿಗೆ ರಕ್ಷಣೆ ನೀಡುತ್ತಿದೆ. ಅಕ್ರಮವೆಸಗುತ್ತಿರುವವರ ಮೇಲೆ ಕ್ರಮ ಕೈಗೊಳ್ಳುತ್ತಿದ್ದಾರೆ. ಇದರಿಂದ ಮಾಜಿ ಸಚಿವರಿಗೆ ತೊಂದರೆಯಾದಂತಿದೆ, ಹೀಗಾಗಿ ಸುಳ್ಳು ಪ್ರಚಾರ ಗಿಟ್ಟಿಸಿಕೊಳ್ಳುವದರ ಮೂಲಕ ಕ್ಷೇತ್ರದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವರಿಗೆ ತಿರುಗೇಟು ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ ಪಾಟೀಲ್ ಮಾತನಾಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಠಲ್ ಯಾದವ್, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಕಾಶ ಗುತ್ತೇದಾರ್,ರಾಜಾ ವಾಸುದೇವ ಮಲ್ಲಣ್ಣ ಮುದೋಳ.ಆರ್.ಎಂ.ರೇವಡಿ,ರಾಜಾ ಪಿಡ್ಡನಾಯಕ, ಅಬ್ದುಲ್ ಗಫಾರ್ ನಗನೂರಿ, ಮಹಿಬೂಬ ಒಂಟಿ, ರಮೇಶ ದೊರೆ ಆಲ್ದಾಳ, ವೆಂಕಟೇಶ ಬೇಟೆಗಾರ,ಬೀರಲಿಂಗ ಬಾದ್ಯಾಪುರ, ಅಮರಣ್ಣ ಜೋಗಂಡಭಾವಿ, ಭೀಮನಗೌಡ ಲಕ್ಷ್ಮೀ ಹೆಮನೂರ,ಗುಂಡಪ್ಪ ಸೊಲ್ಲಾಪುರ,ನದಿಮುಲ್ಲಾ,ಮಜೀದ್ ಸಾಬ್, ಬಸನಗೌಡ ಪಾಟೀಲ್, ದುರ್ಗಪ್ಪ ಗೋಗಿಕರ್, ಮಲ್ಲಣ್ಣ ಐಕೂರ, ಸಿದ್ದಣ್ಣ ಮಲಘಾನದಿನ್ನಿ,ಗೌಡಪ್ಪ ಕುಪ್ಪಿ, ಸೂಗೂರೇಶ್ವರ ವಾರದ್, ರಂಗನಗೌಡ ಮಾಲಿ ಪಾಟೀಲ್ ದೇವಿಕೇರಿ, ವೆಂಕಟೇಶ ಹೊಸಮನಿ ವೇದಿಕೆಯಲ್ಲಿದ್ದರು. ಜುಮ್ಮಣ್ಣ ಕೆಂಗೂರಿ, ಸಿದ್ರಾಮ ಎಲಿಗಾರ, ಮಹ್ಮದ್ ಗೌಸ್ ಕಿಣ್ಣಿ, ಖಮುರುದ್ದೀನ್ ನಾರಾಯಣಪೇಟ, ನಾಸೀರ್ ಕುಂಡಾಲೆ, ಮಹಿಬೂಬ, ಪ್ರಕಾಶ ಆಲಬನೂರ, ಸಾಯ ಬಣ್ಣ ಮಡಿವಾಳ, ರಾಹುಲ್ ಹುಲಿಮನಿ, ಮಾಳಪ್ಪ ಕಿರದಳ್ಳಿ ಗುರು ಬಂಡೋಳಿ, ರಾಹುಲ್ ಹುಲಿಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಮಾನಪ್ಪ ಸೂಗೂರ ನಿರೂಪಿಸಿ ವಂದಿಸಿದರು.












