ವಿಶ್ವ ಮಹಿಳಾ ದಿನಾಚರಣೆ| ಅಂಗವಾಗಿ ಮಾತೃ ಸಮಾವೇಶ|”ಅಮ್ಮನ ಕೈ ತುತ್ತು ಅಮೃತಕ್ಕೆ ಸಮ”; ಸಿದ್ದಲಿಂಗ ದೇವರು

ಸುರಪುರ ಟೈಮ್ಸ್ ವಾರ್ತೆ
ಹುಣಸಗಿ;ಬಾಲ್ಯದಲ್ಲಿ ತಾಯಿ ನೀಡುವ ಕೈತುತ್ತು ಕೇವಲ ಆಹಾರವಲ್ಲ. ಅದರಲ್ಲಿ ಪ್ರೀತಿ, ವಾತ್ಸಲ್ಯ ಹಾಗೂ ಅಂತಃಕರಣ, ಆನಂದ ಹಾಗೂ ಸದ್ಭಾವನೆ ಇರುತ್ತದೆ. ಅಮ್ಮನ ಕೈತುತ್ತು ಅಮೃತಕ್ಕೆ ಸಮ ಎಂದು ತಾಳಿಕೋಟಿಯ ಖಾಸ್ಥತೇಶ್ವರ ವಿರಕ್ತಮಠ ಪೀಠಾಧಿಪತಿ ಸಿದ್ದಲಿಂಗ ದೇವರು ಹೇಳಿದರು.
ಅವರು ಕಲ್ಲದೇವನಹಳ್ಳಿ ಶ್ರೀ ಖಾಸ್ಥತೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಾತೃ ಸಮಾವೇಶ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು ಕುಟುಂಬದ ಸರ್ವರ ಏಳ್ಗೆಗಾಗಿ ಶ್ರೀಗಂಧದಂತೆ ತನ್ನ ಬದುಕನ್ನು ತೇಯ್ದು ರಕ್ಷಣೆ, ಪೋಷಣೆ, ಆಸರೆಗಳ ಆಗರವಾದ ಹೆಣ್ಣು ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ತಾಯಿಯೇ ದೇವರು ಎಂದು ನುಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಲ್ಬುರ್ಗಿ ಯಾದಗಿರಿ ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷರು ಡಾ.ಸುರೇಶ ಸಜ್ಜನ್ ತಂದೆ ತಾಯಂದಿರೆ ಇಂದು ನಿಜವಾದ ದೇವರ ಸ್ವರೂಪ. ಆದರೆ ಇಂದು ತಂದೆ ತಾಯಂದಿರು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ದೊಡ್ಡ ದೊಡ್ಡ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಾರೆ. ವಸತಿ ನಿಲಯಗಳಲ್ಲಿ ಮಕ್ಕಳನ್ನಿಟ್ಟು ಓದಿಸುತ್ತಾರೆ, ಮುಂದೆ ಕಲಿತ ಮಕ್ಕಳು ವಿದೇಶಗಳಲ್ಲಿಯೂ ನೌಕರಿ ಪಡೆಯುತ್ತಾರೆ. ಆದರೆ ಸಂಪರ್ಕ ಕೊರತೆಯಿಂದಾಗಿ ಮಕ್ಕಳಿಗೆ ತಂದೆ-ತಾಯಂದಿರ ಪ್ರೀತಿ ಲಭಿಸುವುದಿಲ್ಲ. ತಂದೆತಾಯಂದಿರು ನಿರಂತರವಾಗಿ ಮಕ್ಕಳ ಬಗ್ಗೆ ಕಾಳಜಿವಹಿಸಿ, ಗುರುಹಿರಿಯರನ್ನು ಗೌರವಿಸುವ ಕುರಿತು ತಿಳುವಳಿಕೆ ನೀಡಬೇಕೆಂದರು. ಈ ಶಾಲೆಯಲ್ಲಿ ನೆಡೆಯುವ ಕಾರ್ಯಗಳಿಗೆ ಸಹಾಯ ಸಹಕಾರ ನೀಡುತ್ತೇವೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಸನ್ಮಾನಿತರಾಗಿ ಆಗಮಿಸಿ , ಶ್ರೀ ಬಸವೇಶ್ವರ ಪತ್ತಿನ ಸೌಹಾರ್ದ ಬ್ಯಾಂಕ್, ಸುರಪುರ ಅಧ್ಯಕ್ಷ ಹೆಚ್. ಸಿ. ಪಾಟೀಲ್ ಪಾಲಕರು ಮಕ್ಕಳಿಗಾಗಿ ಆಸ್ತಿಯನ್ನು ಮಾಡದೇ, ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ, ಸಂಸ್ಕಾರ ಕೊಡಿಸಿ ಅವರನ್ನೇ ದೇಶದ ದೊಡ್ಡ ಆಸ್ತಿಯನ್ನಾಗಿ ಮಾಡಬೇಕೆಂದರು.
ಖ್ಯಾತ ಹಾಸ್ಯ ಕಲಾವಿದ
ಬಸವರಾಜ ಮಹಾಮನಿಯವರಿಂದ ಹಾಸ್ಯ ಕಾರ್ಯಕ್ರಮ ಜರಗಿತು. ಮಕ್ಕಳ ತಜ್ಞರು,ಡಾ.ಮುಕುಂದ ಯನಗುಂಟಿ ಮಕ್ಕಳ ಆರೋಗ್ಯ ಕುರಿತು ಮಾಹಿತಿ ನೀಡಿದರು.ಬೆಂಗಳೂರು ಶಿಕ್ಷಣ ಚಿಂತಕರುಕು. ಭಾವನಾ. ಆರ್. ಗೌಡ ಮಾತನಾಡಿ ದ್ರೌಪದಿ, ಸೀತಾ ಹಾಗೂ ಮೀರಾರ ಭೂಮಿ ಇದು. ವೇದಗಳ ಕಾಲದಲ್ಲಿಯೂ ಮಹಿಳೆಯರನ್ನು ಗೌರವಿಸಿದ ನೆಲ ಇದು. ಮಾತೃ ಭೂಮಿ, ಮಾತೃಭಾಷೆ, ಗಂಗಾ, ಯಮುನಾ ಎನ್ನುವ ಪದಗಳಲ್ಲಿಯೂ ಮಹಿಳಾ ಗೌರವ ಅಡಕವಾಗಿದೆ. ಇದು ಪುರುಷ ಹಾಗೂ ಮಹಿಳಾ ಪ್ರಧಾನ ಸಮಾಜವಲ್ಲ. ಧರ್ಮ ಪ್ರಧಾನ ಸಮಾಜ ಎಂದರು. ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಎನ್ ದಂಡಿನ್ ಮಾತನಾಡಿದರು. ಶಿವುಕುಮಾರ ಬಂಡೋಳಿ . ಶಿವುಕುಮಾರ ಸ್ಥಾವರಮಠ ,ಶ್ರೀ ಗುರು ಪುಟ್ಟರಾಜ ಸಂಸ್ಕೃತ ವೇದ ಪಾಠಶಾಲೆ.ಪ್ರಾಚಾರ್ಯ ಡಾ. ವಿದ್ವಾನ ಗಂಗಾಧರಯ್ಯ ಶಾಸ್ತ್ರಿ
ಸಂಸ್ಥೆಯ ಅಧ್ಯಕ್ಷ ಶ್ರೀ ಗಜದಂಡಯ್ಯ ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಕ್ಕಳ ಸಾಂಸ್ಕೃತಿಕ ವೇದಿಕೆಯ ಅಮ್ಮ ಎಂಬ ನೃತ್ಯಕ್ಕೆ ವೇದಿಕೆ ಮೇಲೆ ಸಭಿಕರನ್ನು ಕಣ್ಣಂಚಿನಲ್ಲಿ ನೀರು ಬರುವಂತೆ ನೃತ್ಯ ಮಾಡಿ ಗಮನ ಸೆಳೆದರು.ಕಾರ್ಯಕ್ರಮದ ಶಾಲೆಯ ನಿರೂಪಣೆಯನ್ನು ಶಾಲೆಯ ಮಕ್ಕಳು ಅದ್ಭುತವಾಗಿ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!