ದಸಂಸ ಭೀಮಮಾರ್ಗದ ಪದಾಧಿಕಾರಿಗಳ ಆಯ್ಕೆ, ಡಾ.ಬಿ.ಆರ್.ಅಂಬೇಡ್ಕರ್‌ರವರು ಹಾಕಿಕೊಟ್ಟ ದಾರಿಯಲ್ಲಿ ನಡೆಯೋಣ:ಡಾ.ಬಿ.ಎನ್.ವೆಂಕಟೇಶ

ಸುರಪುರ ಟೈಮ್ಸ್ ವಾರ್ತೆ
ಸುರಪುರ : ಇಲ್ಲಿಯ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ ಭೀಮಮಾರ್ಗ ಜಿಲ್ಲಾ ಸಮಿತಿಯ ಸಭೆಯು ರಾಜ್ಯ ಸಂಚಾಲಕ ಡಾ.ಬಿ.ಎನ್.ವೆಂಕಟೇಶ ಮತ್ತು ಕೋರ್ ಕಮಿಟಿ ಅಧ್ಯಕ್ಷ ಸಿದ್ದಾರ್ಥ ಸಿಂಗೆ ಆದೇಶದ ಮೇರೆಗೆ ಜರುಗಿ ಜಿಲ್ಲಾ ಮತ್ತು ತಾಲೂಕು ಸಮಿತಿಗಳ ಪದಾಧಿಕಾರಿಗಳ ಆಯ್ಕೆ ನಡೆಯಿತು.
ನಂತರ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಮಿತಿ ರಾಜ ಸಂಚಾಲಕ ಡಾ.ಬಿ.ಎನ್.ವೆಂಕಟೇಶ ಮಾತನಾಡಿ, ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರು ಹಾಕಿಕೊಟ್ಟ ದಾರಿಯಲ್ಲಿ ನಮ್ಮ ದಲಿತ ಸಂಘರ್ಷ ಸಮಿತಿ ಭೀಮಮಾರ್ಗ ಸಂಘಟನೆ ಸಾಗುತ್ತಿದ್ದು ಬಡವರಿಗೆ ಮತ್ತು ಸಮಾಜದ ಕಟ್ಟ ಕಡೆಯ ಜನರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಸೇವೆ ನೀಡುತ್ತಿದೆ. ಜಿಲ್ಲಾ ಮತ್ತು ತಾಲೂಕು ಸಮಿತಿಗಳ ಪದಾಧಿಕಾರಿಗಳು ಉತ್ತಮ ರೀತಿಯಲ್ಲಿ ಸೇವೆ ನೀಡಬೇಕು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿದ್ದ ಈರಣ್ಣ ಕಸನ್, ಮೂರ್ತಿ ಬೊಮ್ಮನಳ್ಳಿ ಮಾತನಾಡಿದರು.

ಜಿಲ್ಲಾ ಘಟಕದ ಪದಾಧಿಕಾರಿಗಳು

ಶಿವಶಂಕರ ಹೆಚ್.ಹೊಸಮನಿ (ಜಿಲ್ಲಾ ಸಂಚಾಲಕ), ಮಲ್ಲಪ್ಪ ಲಂಡನಕರ್ ತಡಿಬಿಡಿ, ಪರಶುರಾಮ ಹೈಯಾಳಕರ್, ವೆಂಕಟೇಶ ಕಟ್ಟಿಮನಿ, ಮಲ್ಲಿಕಾರ್ಜುನ ತಳವಾರಗೇರಾ, ಮಲ್ಲಿಕಾರ್ಜುನ ಜಾಲಿಬೆಂಚಿ, ಹಣಮಂತ ತೇಲ್ಕರ್ (ಜಿಲ್ಲಾ ಸಂಘಟನಾ ಸಂಚಾಲಕರು), ಸಿದ್ರಾಮ ನಾಯ್ಕಲ್ (ಖಜಾಂಚಿ).

ಸುರಪುರ ತಾಲೂಕು ಘಟಕದ ಪದಾಧಿಕಾರಿಗಳು

ಮಲ್ಲು ಕಟ್ಟಿಮನಿ ಮುಷ್ಠಳ್ಳಿ (ತಾಲೂಕು ಸಂಚಾಲಕ), ಬಸವರಾಜ ಬಡಿಗೇರ, ಮಲ್ಲಪ್ಪ ಬಿ.ದೊಡ್ಡಮನಿ, ಶರಣಪ್ಪ ಸಿ.ದೊಡ್ಡಮನಿ, ಮೌಲಾಸಾಬ್, ಶರಣಪ್ಪ ಬಿ.ದೊಡ್ಡಮನಿ, ರಘುನಂದ ತೇಲ್ಕರ್(ಸಂಘಟನಾ ಸಂಚಾಲಕರು), ಚಂದ್ರಶೇಖರ ಚಟ್ನಳ್ಳಿ (ಖಜಾಂಚಿ). ತಾಲೂಕು ಸಂಚಾಲಕರ ಆಯ್ಕೆ : ಪುರುಷೋತ್ತಮ ಬಬಲಾದಿ (ಶಹಾಪುರ), ಪರಶುರಾಮ ಮದರಕಲ್ (ವಡಗೇರಾ), ರಾಜು ಕುದುರಿ (ಯಾದಗಿರಿ), ಭೀಮಯ್ಯ ದಸರಿ (ಗುರುಮಠಕಲ್), ಎಂಡಿ ಸೈಯದ್ (ಸುರಪುರ ತಾಲೂಕು ಅಲ್ಪಸಂಖ್ಯಾತರ ಘಟಕದ ಸಂಚಾಲಕ), ಭೀಮರಾಯ ಮಾಲಗತ್ತಿ (ಕೆಂಭಾವಿ ಹೋಬಳಿ ಸಂಚಾಲಕ).

Leave a Reply

Your email address will not be published. Required fields are marked *

error: Content is protected !!