ಸುರಪುರ ಬಸ್ ನಿಲ್ದಾಣದಲ್ಲಿ ಶಾಲಾ  ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ

ಸುರಪುರ ಟೈಮ್ಸ್ ವಾರ್ತೆ

ಸುರಪುರ: ಬಸ್‌ ಘಟಕದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರಿಯಾದ ಸಮಯಕ್ಕೆ ಬಸ್ ಬರುತ್ತಿಲ್ಲ ಎಂದು ಆರೋಪಿಸಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಬುಧವಾರ ಸಂಜೆ ದಿಢೀರ್  ಪ್ರತಿಭಟನೆ ನಡೆಸಿದರು. ಪಟ್ಟಣಕ್ಕೆ ಹಲವು ಗ್ರಾಮಗಳಿಂದ ನೂರಾರು ಶಾಲಾ ಕಾಲೇಜು ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಬರುತ್ತಿದ್ದು, ಸಮಯಕ್ಕೆ ಬಸ್‌ ಬಾರದಿರುವುದರಿಂದ ತೊಂದರೆಯಾಗುತ್ತಿದೆ. ನಿನ್ನೆ ಸಾಯಂಕಾಲ ಶಾಲಾ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಬಸ್ ತಡೆದು   ಪ್ರತಿಭಟನೆ ನಡೆಸಿದರು.ಬೈರಿಮರಡಿ, ಬಾದಾಪುರ, ಶೆಟ್ಟಿಕೇರ ದೊಡ್ಡಿ ಮತ್ತು ಶೆಟ್ಟಿಕೇರ ಮುಂತಾದ ಭಾಗಗಳಿಗೆ ಬಸ್‌ಗಳು ತಡವಾಗಿ ಸಂಚರಿಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿ  ಅಸಮಾಧಾನ ವ್ಯಕ್ತಪಡಿಸಿದರು.
ಸಾಧಾರಣವಾಗಿ ಸಂಜೆ 4:30 ಗಂಟೆಗೆ ಬರುವ ಬಸ್‌ಗಳು 6:30 ಗಂಟೆಗೆ ಮಾತ್ರ ಬರುತ್ತಿರುವುದರಿಂದ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ಮನೆ ತಲುಪಲು ರಾತ್ರಿ ಆಗುತ್ತಿದೆ ಎಂದು ಅವರು ದೂರಿದರು.

ವಿದ್ಯಾರ್ಥಿಗಳು ಮನವಿ ಪತ್ರದ ಮೂಲಕ,
“ಶಾಲೆ ಮುಗಿದ ನಂತರ ಹಳ್ಳಿಗಳಿಗೆ ಹೋಗುವ ವಿದ್ಯಾರ್ಥಿಗಳಿಗಾಗಿ ಸಂಜೆ 4:30ಕ್ಕೆ ಸರಿಯಾದ ಬಸ್ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಸುರಕ್ಷತೆಗೆ ಧಕ್ಕೆಯುಂಟಾಗುವ ಭೀತಿ ಇದೆ,” ಎಂದು ಬಸ್ ಡಿಪೋ ಮ್ಯಾನೇಜರ್ ಅವರಿಗೆ ಮನವಿ ಸಲ್ಲಿಸಿದರು. ಜಯ ಕರ್ನಾಟಕ ರಕ್ಷಣಾ ಸೇನೆ ಸಂಘಟನೆಯ ಕಾರ್ಯಾಧ್ಯಕ್ಷ ಶಿವಕುಮಾರ ವಗ್ಗ ಉಪಸ್ಥಿತರಿದ್ದರು

ಈ ವೇಳೆ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!