ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಆರೋಗ್ಯ ತಪಾಸಣೆ ಶಿಬಿರ


ಸುರಪುರ ಟೈಮ್ಸ್ ವಾರ್ತೆ
ಸುರಪುರ : ಇಲ್ಲಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕಿನ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಆರೋಗ್ಯ ಮೌಲ್ಯಾಂಕನ ತಪಸಣಾ ಶಿಬಿರ ಮಂಗಳವಾರ ಜರುಗಿತು.
ಶಿಬಿರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರ ಮಾತನಾಡಿ, ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ವೈದ್ಯಕೀಯ ನೆರವು ಸಿಗಲಿ. ಈ ಶಿಬಿರ ಆಯೋಜನೆ ಮಾಡಿರುವುದು ಪ್ರಶಂಸನೀಯ ಎಂದರು. ಟಿಎಚ್‌ಒ ಡಾ.ಆರ್.ವಿ.ನಾಯಕ ಮಾತನಾಡಿ, ಎಲ್ಲಾ ವೈದ್ಯರು ಶಿಬಿರದಲ್ಲಿ ಮಕ್ಕಳ ಆರೋಗ್ಯವನ್ನು ತಪಾಸಣೆ ನಡೆಸಿ ಸೂಕ್ತವಾದ ಚಿಕಿತ್ಸೆಗೆ ಸಹಕರಿಸಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ಪಂಡಿತ ನಿಂಬೂರ್ ಮಾತನಾಡಿ, ಅಗತ್ಯವುಳ್ಳ ಮಕ್ಕಳು ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಕಾಲೇಜಿನ ಪ್ರಾಚಾರ್ಯ ಸೋಫಿಸಾಬ್ ಗುತ್ತೇದಾರ್ ಶಿಬಿರ ಉದ್ಘಾಟಿಸಿದರು. ವೈದ್ಯರಾದ ಮೋಹಿತ್ ಯಾದವ ಅಲಿಂಕೊ ಬೆಂಗಳೂರು, ಯಾದಗಿರಿಯ ಶ್ರವಣ ತಜ್ಞ ಡಾ.ವಿಜಯಕುಮಾರ, ನೇತ್ರ ತಜ್ಞ ಅಬ್ದುಲ್ ಹಕೀಮ್, ಎಂಆರ್‌ಡಬ್ಲೂ ಮಾಳಪ್ಪ ಪೂಜಾರಿ ಮಾತನಾಡಿದರು.
ಬಿಐಆರ್‌ಟಿ ಓಂಪ್ರಕಾಶ ಡೊಣ್ಣೂರು, ಎಪಿಡಿ ಸಂಸ್ಥೆಯ ತಾಲೂಕು ಸಂಯೋಜಕ ಗಿರೀಶ್, ರಂಗಂಪೇಟೆಯ ಕೆಪಿಎಸ್ ಶಾಲೆ ಪ್ರಾಂಶುಪಾಲ ಭೀಮಣ್ಣ ಬೋಸ್ಗಿ ಇದ್ದರು. ಬಿಐಆರ್‌ಟಿ ಗಳಾದ ಮಹಾದೇವಪ್ಪ ಗುತ್ತೇದಾರ್ ಮತ್ತು ರಾಜಶೇಖರ ದೇಸಾಯಿ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸೂಕ್ತ ಸೌಲಭ್ಯಗಳನ್ನು ಆಯಾ ಕೋಣೆಗಳಲ್ಲಿ ಒದಗಿಸಿ ಸಹಕರಿಸಿದ್ದರು. ತಾಲೂಕಿನ ವಿವಿಧ ಗ್ರಾಮಗಳಿಂದ ವಿಶೇಷ ಅಗತ್ಯವುಳ್ಳ ಮಕ್ಕಳ ಜತೆ ಅವರ ಪೋಷಕರು ಭಾಗವಹಿಸಿದ್ದರು. ಶಿಕ್ಷಕ ಲಕ್ಷ್ಮಣ ನಿರೂಪಿಸಿದರು. ನಾಗರಾಜ ವಂದಿಸಿದರು.

ಫೋಟೊ : ಸುರಪುರ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ವೈದ್ಯಕೀಯ ಮೌಲ್ಯಾಂಕನ ತಪಾಸಣಾ ಶಿಬಿರದ ಉದ್ಘಾಟನೆ ಜರುಗಿತು. ಬಿಇಒ ಯಲ್ಲಪ್ಪ ಕಾಡ್ಲೂರು ಸೇರಿ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!