ಹಸಿರು ಕ್ರಾಂತಿಯ ಹರಿಕಾರ ‘ಜಗಜೀವನರಾಂ ನಾಮಫಲಕಕ್ಕೆ ಬೆಳಕು ಕಲ್ಪಿಸಿ’;ಬಸವರಾಜ ಹಾದಿಮನಿ
ಸುರಪುರ ಟೈಮ್ಸ್ ವಾರ್ತೆ
ಸುರಪುರ:ನಗರದ ಬಾಬು ಜಗಜೀವನರಾಂ ನಾಮಫಲಕಕ್ಕೆ ಬೆಳಕಿನ ವ್ಯವಸ್ಥೆ ಕಲ್ಪಿಸುವಂತೆ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯವರು ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ಡೊಣ್ಣಿಗೇರಾ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಸಮಿತಿಯ ತಾಲ್ಲೂಕು ಅಧ್ಯಕ್ಷ ಬಸವರಾಜ ಹಾದಿಮನಿ ಮಾತನಾಡಿ, ‘ತಹಶೀಲ್ದಾರ್ ಕಚೇರಿ ಹತ್ತಿರ ನಾಮಫಲಕ ಅಳವಡಿಸಲಾಗಿದೆ. ಅಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ಕಿಡಿಗೇಡಿಗಳು ಗಲೀಜು ಮಾಡುವುದು, ಸ್ಟಿಕರ್ ಕಿತ್ತುವುದು ಮಾಡುತ್ತಿದ್ದಾರೆ’ ಎಂದು ತಿಳಿಸಿದರು.
‘ಈ ಸ್ಥಳ ಕೋರ್ಟ್ ಮತ್ತು ತಹಶೀಲ್ದಾರ್ ಕಚೇರಿಗೆ ಸಂಪರ್ಕ ಕಲ್ಪಿಸುತ್ತದೆ. ಕಾರಣ ಈ ಸ್ಥಳದಲ್ಲಿ ಹೈಮಾಸ್ಟ್ ದೀಪ ಅಳವಡಿಸಬೇಕು. ಇದರಿಂದ ಜನರಿಗೂ ಅನುಕೂಲವಾಗುತ್ತದೆ’ ಎಂದರು.ಬಾಬು ವಾಗಣಗೇರಾ, ಲಕ್ಷ್ಮಣ ಆಲ್ದಾಳ, ಈಶ್ವರ ಸತ್ಯಂಪೇಟ, ಚಂದ್ರಶೇಖರ ಕವಡಿಮಟ್ಟಿ, ಬಸವರಾಜ ಕುಂಬಾರ, ಶರಣಪ್ಪ ಅನಸೂರ ಸೇರಿದಂತೆ ಇತರರು ಭಾಗವಹಿಸಿದ್ದರು.

