ಪೇಠ ಅಮ್ಮಾಪುರ ಗ್ರಾಮದಲ್ಲಿ ಕಾರ್ಮಿಕ ಸಂಘಟನೆ ಅಸ್ತಿತ್ವಕ್ಕೆ ,ಕಾರ್ಮಿಕರು ಸಂಘಟಿತರಾಗಬೇಕು;ತಿಮ್ಮಯ್ಯ ತಳವಾರ

ಸುರಪುರ ಟೈಮ್ಸ್ ವಾರ್ತೆ

ಸುರಪುರ: ತಾಲೂಕಿನ ಪೇಠ ಅಮ್ಮಾಪುರ ಗ್ರಾಮದಲ್ಲಿ ಕರ್ನಾಟಕ ಕಟ್ಟಡ ಕಟ್ಟುವ ಮತ್ತು ಇತರೆ ನಿರ್ಮಾಣ ಕ್ವಾರಿ ಕಾರ್ಮಿಕ ಸಂಘಟನೆಯ ಹೋಬಳಿ ಘಟಕವನ್ನು ರಚಿಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಮ್ಮಯ್ಯ ತಳವಾರ ಮಾತನಾಡಿ, ಅಸಂಘಟಿತ ಕಾರ್ಮಿಕರು ಸಂಘಟನೆಗೋಳುವುದರ  ಮೂಲಕ ಸರ್ಕಾರಿ ಯೋಜನೆಗಳ ಫಲಾನುಭವಿಗಳಾಗಬೇಕು , ಕಾರ್ಮಿಕರ ಹಲವಾರು ಬೇಡಿಕೆಗಳಿಗೆ ಸಂಘಟನೆಯು ಕಳೆದ 6-7 ವರ್ಷಗಳಿಂದ ಹೋರಾಡುತ್ತಿದೆ. ಕೋವಿಡ್ ಸಮಯದಲ್ಲಿ ನಮ್ಮ ಸಂಘಟನೆಯ ನೇತೃದಲ್ಲಿ ಸುಮಾರು ನಾಲ್ಕು ಸಾವಿರ ಕಿಟ್ ಗಳನ್ನು ವಿತರಿಸಿದ್ದೇವೆ. ಅಸಂಘಟಿತ ವಲಯದ ಕಟ್ಟಡ ಕಾರ್ಮಿಕರಿಗೆ ನೊಂದಣಿ ಮಾಡಿಸಿದ್ದು ಹಾಗೂ ನೊಂದಣಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ತಲುಪಿಸಿದ್ದೇವೆ ಎಂದರು.ಸುರಪುರ ತಾಲೂಕಿನ 180 ಗ್ರಾಮಗಳಲ್ಲಿ ಮತ್ತು ಹೋಬಳಿಗಳಲ್ಲಿ ಸಂಘಟನೆಯನ್ನು ಬಲಪಡಿಸುವ ಗುರಿ ಹೊಂದಿದ್ದೇವೆ ಎಂದರು. ತಾಲೂಕು ಅಧ್ಯಕ್ಷ ದೇವೇಂದ್ರಪ್ಪ ನಗರಗುಂಡ ಮಾತನಾಡಿ, ಕಟ್ಟಡ ಕಾರ್ಮಿಕರಿಗೆ ಸಕಾಲದಲ್ಲಿ ಸೌಲಭ್ಯ ಸಿಗುವಂತಾಗಬೇಕೆಂದರು. ಪೇಟ ಅಮ್ಮಾಪುರ ಹೋಬಳಿ ಘಟಕದ ಅಧ್ಯಕ್ಷರಾಗಿ ನಿಂಗಪ್ಪ ಹಯ್ಯಳಪ್ಪ, ಗೌರವಾಧ್ಯಕ್ಷ ದೇವೇಂದ್ರಪ್ಪ ಸೋಮಯ್ಯ ಪ್ಯಾಟಿ, ಉಪಾಧ್ಯಕ್ಷರಾಗಿ ಕಾಸಿಂಸಾಬ್, ಶ್ರೀನಿವಾಸ್, ಕಾರ್ಯದರ್ಶಿ ಮಾನಪ್ಪ, ಸಂಘಟನಾ ಕಾರ್ಯದರ್ಶಿ ಮಾರುತಿ ಸಣ್ಣ ಮರೆಪ್ಪ, ಖಜಾಂಚಿ ರಾಯಪ್ಪ ಅವರುಗಳನ್ನು ಆಯ್ಕೆ ಮಾಡಲಾಯಿತು. ಭೀಮಣ ಪ್ರಾಟಿ, ಹನುಮಗೌಡ ಪೊಲೀಸ್ ಪಾಟೀಲ್, ರಾಯಪ್ಪ ಗೊಗ್ಗಿ, ಹನುಮಂತಪ್ಪ ಕುರಿ ಸಣ್ಣ ಹನುಮಂತ ಹದಗಲ,ವಿಠಲ ಪ್ಯಾಟಿ, ಹಂಬಲಪ್ಪ ಅಗಸರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!