ಸುರಪುರದ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಕಾರ್ಯಾಲಯದಲ್ಲಿ ಕೆವೈಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕ ಡಾ.ಸುರೇಶ ಆರ್ ಸಜ್ಜನ್‌ಗೆ ಅಭಿನಂದನೆಗಳ ಸತ್ಕಾರ
ಸುರಪುರ ಟೈಮ್ಸ್ ವಾರ್ತೆ
ಸುರಪುರ:ಈ ಹಿಂದೆ ನಮ್ಮ ಸೇವಾವಧಿಯಲ್ಲಿ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಎಲ್ಲಾ ವ್ಯವಸಾಯ ಸೇವಾ ಸಹಕಾರ ಸಂಘಗಳಿಗೆ ಒಂದು ಸಾವಿರ ಕೋಟಿ ಆ ಪೈಕಿ ಸುರಪುರ ತಾಲೂಕಿಗೆ 120 ಕೋಟಿ ಸಾಲ ವಿತರಣೆ ಮಾಡಲಾಗಿದೆ ಎಂದು ಕೆವೈಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಮತ್ತು ಹಾಲಿ ನೂತನ ನಿರ್ದೇಶಕ ಸುರೇಶ ಸಜ್ಜನ ತಿಳಿಸಿದರು.
ಇಲ್ಲಿಯ ಬಸವೇಶ್ವರ ಪತ್ತಿನ ಸಹಕಾರ ಸಂಘದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನೆಗಳ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, 2021 ನೇ ಸಾಲಿನಲ್ಲಿ ನಾನು ಕೆವೈಡಿಸಿಸಿ ಬ್ಯಾಂಕ್ ನಿರ್ದೇಶಕನಾದೆ ನಂತರ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿತ್ತು. 5 ವರ್ಷಗಳ ನಿರಂತರ ಸೇವೆ ತೃಪ್ತಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು. ನಾವು ಅಧಿಕಾರದ ಚುಕ್ಕಾಣಿಯಿಡಿದಾಗ ಕೆವೈಡಿಸಿಸಿ ಬ್ಯಾಂಕ್ 58 ಕೋಟಿ ರೂಪಾಯಿ ನಷ್ಟದಲ್ಲಿತ್ತು. ಮೂರು ವರ್ಷಗಳಿಂದ ರೈತರಿಗೆ ಯಾವ ಸಾಲ, ಸೌಲಭ್ಯ ಕೊಟ್ಟಿರಲಿಲ್ಲ. ರೈತರಿಂದಲೂ ಹಣ ಬರಬೇಕಿತ್ತು. ಅಪೆಕ್ಸ್ ಮತ್ತು ನಬಾರ್ಡ್ ಬ್ಯಾಂಕ್‌ಗೆ ದುಡ್ಡು ಕಟ್ಟಬೇಕಾಗಿತ್ತು. ಸ್ವಲ್ಪವೇ ದಿನಗಳಲ್ಲಿ ನಮ್ಮ ರಾಯಚೂರು ಅಥವಾ ಬೀದರ್‌ಗೆ ಸೇರಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಆಚ್ಚರಿ ಮೂಡಿಸಿತು. ಹೊಸ ಜೋಶ್ ನಲ್ಲಿದ್ದ ನಮ್ಮ ಎಲ್ಲಾ ನಿರ್ದೇಶಕರಿಗೆ ದಿಗ್ಧಮೆಯಾಯಿತು. ಪಕ್ಷಾತೀತವಾಗಿ 16 ಜನ ನಿರ್ದೇಶಕರು ಒಟ್ಟುಗೂಡಿ ದುಸ್ಥಿತಿಯಲ್ಲಿದ್ದ ಬ್ಯಾಂಕ್‌ನ ಉದ್ಧರಿಸಲು ನಿರ್ಧರಿಸಿದ್ದೇವು. ನಾನಾ ಪ್ರಯತ್ನ ಮಾಡಿ ಸಾಲ ಪಡೆದು, ಸಾಲ ತುಂಬಿ, ಮತ್ತೆ ಸಾಲ ಪಡೆದು ರೈತರಿಗೆ ಸಾಲ ಕೊಟ್ಟು ಬ್ಯಾಂಕ್ ಅಭಿವೃದ್ಧಿಪಡಿಸಿದ್ದೇವೆ ಎಂದು ಹೇಳಲು ಹೆಮ್ಮೆ ಎನ್ನಿಸುತ್ತದೆ ಎಂದರು. ಈ ಬಾರಿಯ ನಿರ್ದೇಶಕ ಬ್ಯಾಂಕ್
ಮಂಡಳಿ ಚುನಾವಣೆ ಭಾರಿ ಪೈಪೋಟಿಯಿಂದ ಕೂಡಿತ್ತು. ಘಟಾನುಘಟಿಗಳು ಸ್ಪರ್ಧಿಸಿದ್ದರು. ನನ್ನ ಎದುರಾಳಿ ಅಭ್ಯರ್ಥಿಯು ಗಣ್ಯರಾಗಿದ್ದರು. ಕೆವೈಡಿಸಿಸಿ ಬ್ಯಾಂಕ್‌ನಲ್ಲಿ ನೋಂದಣಿಯಾಗಿರುವ ಆಳಂದ, ಅಫಜಲಪುರ, ಸೇಡಂ, ಚಿತ್ತಾಪುರ ಭಾಗಗಳ 65 ಸಂಘ-ಸಂಸ್ಥೆಗಳ ಮತದಾರರರು ನಮಗೆ ಮತ ಚಲಾಯಿಸಬೇಕಾಗಿತ್ತು. 104 ಮತಗಳಲ್ಲಿ 89 ಮತಗಳು ನನಗೆ ಬಂದು ನಾನು ಜಯಶೀಲನಾದೆ. ದೊಡ್ಡ ಬಹುಮತದಿಂದ ನನಗೆ ಚುನಾಯಿಸಿದರು. ಕಲಬುರಗಿ ಭಾಗದ ಅನೇಕ ಸೊಸೈಟಿಗಳು ನನ್ನ ಬೆಂಬಲಿಕ್ಕೆ ನಿಂತಿದ್ದವು. ನನಗಂತೂ ಖುಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಮಾಜ ಸೇವೆ ಮಾಡಬೇಕೆಂದರೆ ಸಹಕಾರ ಕ್ಷೇತ್ರಕ್ಕೆ ಬರಬೇಕು. ಯುವಕರು ಸಹಕಾರ ಕ್ಷೇತ್ರಕ್ಕೆ ಬಂದು ಸಹಕಾರ ಕ್ಷೇತ್ರದ ಬಗ್ಗೆ ತಿಳಿದುಕೊಂಡು ಪರಿಪೂರ್ಣವಾಗಿ ಮಾಡುವ
ಯಾದಗಿರಿಯಲ್ಲಿ ಡಿಸಿಸಿ ಬ್ಯಾಂಕ್ ಸ್ಥಾಪನೆ ಆಸೆ
ನಂಬಿಕೆ, ವಿಶ್ವಾಸ, ನಾವು ಮಾಡುವ ಕೆಲಸ ಕಾರ್ಯಗಳು ನಮ್ಮ ಕೈಯಿಡಿದಿವೆ. ಸಹಕಾರ ಕ್ಷೇತ್ರ ಸಮಾಜ ಸೇವೆ. ಇದರಲ್ಲಿ ನಾವು ಏನು ನಿರೀಕ್ಷೆ ಮಾಡುವಂತದು ಇಲ್ಲ. ನಮ್ಮ ವೈಯಕ್ತಿಕ ಮನೋಭಾವ ಬೆಳೆಸಿಕೊಳ್ಳಬೇಕು. ನನಗೆ ಸಹಕಾರ ಕ್ಷೇತ್ರದಲ್ಲಿ ತೃಪ್ತಿ ಇದೆ. ಇದೇ ಕ್ಷೇತ್ರದಲ್ಲಿ ಮುಂದುವರೆಯಬೇಕು ಎಂಬ ಆಶಯವಿದೆ. ಜತೆಗೆ ಯಾದಗಿರಿಯಲ್ಲಿ ಡಿಸಿಸಿ ಬ್ಯಾಂಕ್ ಸ್ಥಾಪನೆಯಾಗಬೇಕು ಎಂಬ ಆಸೆಯೂ ಇದೆ. ಕಾರಣ ಇಲ್ಲಿ ಹೆಚ್ಚು ಹೆಚ್ಚು ಸಹಕಾರಿ ಸಂಘಗಳು, ಸೌಹಾರ್ದ, ಪತ್ತಿನ ಸಹಕಾರ ಸಂಘಗಳು ಸ್ಥಾಪನೆಯಾಗಬೇಕು. ನನ್ನ ಮಾರ್ಗದರ್ಶನ, ಸೇವೆ, ಸಹಕಾರ ಸದಾ ಇರುತ್ತದೆ ಎಂದು ನಿರ್ದೇಶಕ ಸುರೇಶ ಸಜ್ಜನ್ ಭರವಸೆ ನೀಡಿದರು.
ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಸಿ.ಪಾಟೀಲ್, ಉಪಾಧ್ಯಕ್ಷ ವಿರೇಂದ್ರ ನಿಷ್ಕ್ರಿ ದೇಶಮುಖ, ಆಡಳಿತ ಮಂಡಳಿ ನಿರ್ದೇಶಕರು, ಪ್ರಮುಖರಾದ ಬಸವರಾಜ ಜಮದ್ರಖಾನಿ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಗಿರೀಶ ಶಾಬಾದಿ , ಸೇರಿದಂತೆ ಷೇರುದಾರರು, ಸಮಾಜ ಬಾಂಧವರು, ಅಭಿಮಾನಿಗಳು ಉಪಸ್ಥಿತರಿದ್ದರು.










