ನಗನೂರನ ಶ್ರೀ ಸೂಗೂರೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮ, ಮಠ ಮಂದಿರಗಳಿಗೆ ಭೌತಿಕ ಆಸ್ತಿ ಗಿಂತ ಭಕ್ತರೇ ದೊಡ್ಡ ಆಸ್ತಿ; ಸೂಗೂರೇಶ್ವರ ಶಿವಾಚಾರ್ಯ
ಸುರಪುರ ಟೈಮ್ಸ್ ವಾರ್ತೆ
ಕೆಂಭಾವಿ:ಸಮಾಜ ಧರ್ಮದ ದಾರಿಯಲ್ಲಿ ನಡೆಯುವಂತೆ ಮಾರ್ಗದರ್ಶನ ಮಾಡುತ್ತಿರುವ ಮಠಗಳು ಬೆಳೆಯಬೇಕಾದರೆ ಭಕ್ತರ ಔದಾರ್ಯತೆ ಅಗತ್ಯ. ಮಠ ಮಂದಿರಗಳಿಗೆ ಭೌತಿಕ ಆಸ್ತಿಗಿಂದ ಭಕ್ತರೇ ದೊಡ್ಡ ಆಸ್ತಿ ಎಂದು ಷ.ಬ್ರ. ಶ್ರೀ ಸೂಗೂರೇಶ್ವರ ಶಿವಾಚಾರ್ಯರು ನುಡಿದರು.
ಪಟ್ಟಣ ಸಮೀಪದ ನಗನೂರ ಗ್ರಾಮದಲ್ಲಿ ಶ್ರೀ ಸೂಗೂರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಗುಡ್ಡಾಪೂರ ದಾನಮ್ಮದೇವಿ ಮಹಾ ಪುರಾಣ ಧರ್ಮಸಭೆ, ಶ್ರೀಗಳಿಗೆ ತುಲಭಾರ, ಮಹಿಳೆಯರಿಗೆ ಉಡಿ ತುಂಬುವ, ದೀಪೋತ್ಸವ ಕಾರ್ಯಕ್ರಮದ ನೇತೃತ್ವ ವಹಿಸಿ ಆಶೀರ್ವಚನ ನೀಡಿದ ಅವರು, ಶ್ರೀಮಠದ ಕಟ್ಟಡ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗಿದೆ. ಭಕ್ತರು ಇನ್ನೂ ಹೆಚ್ಚಿನ ರೀತಿಯಲ್ಲಿ ತನು-ಮನದಿಂದ ಸೇವೆ ಸಲ್ಲಿಸಿ ಪ್ರೀತಿ, ವಿಶ್ವಾಸದಿಂದ ಬದುಕು ಸಾಗಿಸಬೇಕು ಎಂದು ಹೇಳಿದರು.
ಜಿಪಂ ಮಾಜಿ ಉಪಾಧ್ಯಕ್ಷ ಶಂಕ್ರಣ್ಣ ವಣಿಕ್ಯಾಳ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಮಠ ಶ್ರೀ ಸೂಗೂರೇಶ್ವರ ಮಠವಾಗಿದೆ. ಗುಡ್ಡದಲ್ಲಿ ತಪಸ್ಸನ್ನು ಮಾಡಿ ಭಕ್ತರ ಒಳಿತಿಗಾಗಿ ಪ್ರಾರ್ಥಿಸುತ್ತಿರುವ ಸ್ವಾಮೀಜಿಗಳ ಕಾರ್ಯ ಶ್ಲಾಘನೀಯ. ಭಕ್ತರೆಲ್ಲರೂ ಸೇರಿ ಶ್ರೀಮಠದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಹೇಳಿದರು.
ಕೊಡೇಕಲ್ ದುರದುಂಡೇಶ್ವರ ವಿರಕ್ತಮಠದ ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಧರ್ಮದ ದಾರಿಯಲ್ಲಿ ನಡೆದರೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಮಠ. ಮಂದಿರಗಳು ಭಕ್ತರಿಗೆ ಶ್ರದ್ಧಾಕೇಂದ್ರಗಳಾಗಿ ಅವರನ್ನು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಣೆ ನೀಡುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ನೇತೃತ್ವ ವಹಿಸಿ ಷ.ಬ್ರ. ಶ್ರೀ ಸೂಗೂರೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಷ.ಬ್ರ. ಶ್ರೀ ಅಭಿನವ ರುದ್ರಮುನಿ ಶಿವಾಚಾರ್ಯರು, ಕಲಕೇರಿ ಹಿರೇಮಠ ಸಂಸ್ಥಾನದ ಷ.ಬ್ರ. ಶ್ರೀ ಸಿದ್ಧರಾಮ ಶಿವಾಚಾರ್ಯರು, ಕೆಂಭಾವಿ ಹಿರೇಮಠ ಸಂಸ್ಥಾನದ ಷ.ಬ್ರ. ಶ್ರೀ ಚನ್ನಬಸವ ಶಿವಾಚಾರ್ಯರು, ನಾವದಗಿ ಹಿರೇಮಠದ ಷ.ಬ್ರ ಶ್ರೀ ರಾಜಗುರು ಒಡೆಯರ್ ರಾಜೇಂದ್ರ ಶಿವಾಚಾರ್ಯರು, ಕೊಡೇಕಲ್ ದುರದುಂಡೇಶ್ವರ ವಿರಕ್ತಮಠದ ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು, ಶ್ರೀ ಶರಣಬಸವೇಶ್ವರ ದಾಸೋಹ ಮಠದ ಪೂಜ್ಯ ಶರಣಪ್ಪ ಶರಣರು, ವೆ. ಮೂ. ಶ್ರೀ ಅಮರಯ್ಯ ಶಾಸ್ತಿç, ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಅಮೀನರೆಡ್ಡಿ ಪಾಟೀಲ ಯಾಳಗಿ, ಮುಖಂಡರಾದ ಶಂಕ್ರಣ್ಣ ವಣಿಕ್ಯಾಳ, ಸಿದ್ದಣ್ಣ ಸಾಹು ಗೂಗಲ್, ಗುರಪ್ಪಗೌಡ ಪೊಲೀಸ್ ಪಾಟೀಲ, ಶಿವರಾಜ ಸಾಹು ಬೂದೂರ, ರಾಜಶೇಖರ ಸಾಹು ಗೂಗಲ್, ವಿನೋಧರೆಡ್ಡಿ ಸಿ. ಪಾಟೀಲ, ಭೋಜಪ್ಪಗೌಡ ಪೊಲೀಸ್ ಪಾಟೀಲ, ಚನ್ನಾರೆಡ್ಡಿ ದೇಸಾಯಿ, ಅಣ್ಣಾಸಾಹೇಬ ಪಾಟೀಲ, ಶಂಕರಗೌಡ ಪೊಲೀಸ್ ಪಾಟೀಲ, ವೀರಭದ್ರ ಕುಂಬಾರ, ಸಗರನಾಡು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ, ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಸಾವಿತ್ರಮ್ಮ, ತಾಪಂ ಸಹಾಯಕ ನಿರ್ದೇಶಕ ಶರಣಗೌಡ ಗೂಗಲ್, ರುದ್ರಗೌಡ ವಣಿಕ್ಯಾಳ ಸೇರಿದಂತೆ ನಗನೂರ, ಖಾನಾಪೂರ (ಎಸ್‌ಕೆ) ಹಾಗೂ ಸುತ್ತಮುತ್ತಲಿನ ಗ್ರಾಮದ ಸದ್ಭಕ್ತರಿದ್ದರು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಯಮುನೇಶ ಯಾಳಗಿ, ಸೋಮನಾಥ ಯಾಳಗಿ ಅವರಿಂದ ಸಂಗೀತ ಸೇವೆ ಜರುಗಿತು. ಶಿಕ್ಷಕ ಸಿದ್ದನಗೌಡ ಗೂಗಲ್ ನಿರೂಪಿಸಿದರು. ನಾಗಭೂಷಣ ಪತ್ತಾರ ಸ್ವಾಗತಿಸಿದರು. ಅಮರೇಶ ಕುಂಬಾರ ವಂದಿಸಿದರು.
ಮಠಗಳು ಸಂಸ್ಕಾರ ನೀಡುವ ಕೇಂದ್ರಗಳು
ಮಠಗಳು ಸಂಸ್ಕಾರ ನೀಡುವ ಕೇಂದ್ರಗಳಾಗಿ ಸಮಾಜದಲ್ಲಿ ಸಾಮರಸ್ಯ, ಸೌಹಾರ್ದತೆ ಬೆಳೆಸುವ ಕಾರ್ಯ ಮಾಡುತ್ತಿವೆ ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಅಮೀನರೆಡ್ಡಿ ಪಾಟೀಲ ಯಾಳಗಿ ಹೇಳಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ನಾಡಿನ ಪ್ರಗತಿ ಮತ್ತು ಏಳ್ಗೆಯಲ್ಲಿ ಮಠ-ಮಾನ್ಯಗಳ ಪಾತ್ರ ಮಹತ್ವದಾಗಿದೆ. ಶಿಕ್ಷಣ, ಸಂಸ್ಕಾರ, ಸಂಸ್ಕೃತಿ, ದಾಸೋಹ, ಸತ್ಸಂಗದಂತಹ ಕಾರ್ಯಗಳ ಮೂಲಕ ನಾಡಿನ ಸೇವೆಯಲ್ಲಿ ತೊಡಗಿಕೊಂಡಿವೆ ಎಂದ ಅವರು, ವಿವಿಧ ಕ್ಷೇತ್ರಗಳಲ್ಲಿ ಸಾಧಕರು ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದು, ಅವರನ್ನು ಗುರುತಿಸಿ ಪ್ರಶಸ್ತಿ ನೀಡಿ ಸನ್ಮಾನಿಸುತ್ತಿರುವ ಷ.ಬ್ರ. ಶ್ರೀ ಸೂಗೂರೇಶ್ವರ ಶಿವಾಚಾರ್ಯರ ಕಾರ್ಯ ಶ್ಲಾಘನೀಯವಾಗಿದೆ ಎಂದು ಬಣ್ಣಿಸಿದರು.
ಸಾಧಕರಿಗೆ ಸೂಗೂರೇಶ್ವರ ಶ್ರೀ ಪ್ರಶಸ್ತಿ
ವಿವಿಧ ಕ್ಷೇತ್ರಗಳ ಸಾಧಕರಾದ ಮಲ್ಲಮ್ಮ ಕನ್ನೆಳ್ಳಿ (ಸಾಂಸ್ಕೃತಿಕ ಕ್ಷೇತ್ರ), ಜುಲೇಖಾ ಬೇಗಂ (ರಂಗಭೂಮಿ ಕಲೆ), ಎಂ. ನಾರಾಯಣ ಶಹಾಪುರ (ಸಹಕಾರ), ಬಸಣ್ಣ ಗುರಿಕಾರ (ಸಂಗೀತ), ಬಸಪ್ಪ ಹಣಮಸಾಗರ (ಜಾನಪದ), ಕನಕಪ್ಪ ವಾಗಣಗೇರಾ (ಸಾಹಿತ್ಯ), ವೀರೇಶ ಕೆಂಭಾವಿ ಮತ್ತು ಗಿರೀಶ ಬ್ಯಾಕೋಡ್ (ಮಾಧ್ಯಮ ಕೇತ್ರ), ನರಸಪ್ಪ ಹುಲಕಲ್ (ಕೃಷಿ) ಅವರಿಗೆ ಸೂಗೂರೇಶ್ವರ ಶ್ರೀ ಪ್ರಶಸ್ತಿ ನೀಡಿದರು



