ಹೆಚ್ಚುತ್ತಿದೆ ಕೆಂಭಾವಿ ವಲಯದಲ್ಲಿ ಅಗ್ನಿ ಅವಘಡ: ತುರ್ತಾಗಿ ಬೇಕಿದೆ ಅಗ್ನಿಶಾಮಕ ಠಾಣೆ

ಸುರಪುರ ಟೈಮ್ಸ್ ವಾರ್ತೆ

ಕೆಂಭಾವಿ:-ಅಗ್ನಿ ಅವಘಡಗಳಿಗೆ ನಲುಗುತ್ತಿರುವ ಕೆಂಭಾವಿ ವಲಯ ಜಿಲ್ಲೆಯಲ್ಲಿಯೇ ಅತೀ ದೊಡ್ಡ ಪಟ್ಟಣವಾದ್ರೂ ಸೌಲಭ್ಯಗಳ ಕೊರತೆಯಿಂದ ವಂಚಿತವಾಗುತ್ತಿರುವದರಿಂದ ಜನಸಾಮಾನ್ಯರ ಸಂಕಷ್ಟ ಅನುಭವಿಸುತ್ತಾಂಗಿದೆ ವ್ಯಾಪ್ತಿಯಲ್ಲಿ ಬರುವ ಸುಮಾರು 38 ಗ್ರಾಮಗಳಿಗೂ ಅಗ್ನಿ ಅವಘಡಗಳು ಇನ್ನಿಲ್ಲದಂತೆ ಕಾಡುತ್ತಿವೆ ಸುರಪುರ ಅಗ್ನಿಶಾಮಕ ಕೇಂದ್ರದಿಂದ ಕೊನೆ ಭಾಗದ ಗ್ರಾಮಕ್ಕೆ 45 ಕಿಲೋಮೀಟರ್ ಆಗುತ್ತದೆ ಸುರಪುರದಿಂದ ವಾಹನ ಬರಬೇಕಾದ ಅನಿವಾರ್ಯತೆ ಎದುರಾಗಿದೆ. ವಾಹನ ಬರೊವಷ್ಟರಲ್ಲಿ ಸುಟ್ಟು ಹೋಗುತ್ತವೆ. ರೈತರು ಬೆಳೆದ ಬೆಳೆಗಳು, ಮನೆ, ಅಂಗಡಿ,ಬೆಂಕಿಗಾಹುತಿಯಾಗಿರುವ ಘಟನೆಗಳು ಮರಕಳಿಸುತ್ತಿದ್ದು ಕೊನೆಯಿಲ್ಲದಂತಾಗಿದೆ ಸಾವು ನೋವಿಗೂ ಅಗ್ನಿ ಅವಘಡ ಕಾರಣವಾಗುತ್ತಿವೆ ಇನ್ನಾದ್ರೂ ಆಡಳಿತ ವರ್ಗ ಎಚ್ಚತುಕೊಳ್ಳಬೇಕಿದೆ ಜನ್ರ ಸುರಕ್ಷತೆಗೆ ಕ್ರಮವಹಿಸಬೇಕಿದೆ

ಸ್ಥಳ ಮಂಜೂರಾತಿ ಆದರೂ ನಿರ್ಮಾಣವಾಗದ ಠಾಣೆ

ಅಗ್ನಿ ಶಾಮಕ ಠಾಣೆಗೆ ಕೆಂಭಾವಿ ಪಟ್ಟಣದ ಸರ್ಕಾರಿ ಗಾಯರಾಣ ಸರ್ವೆ ನಂ 512 ರಲ್ಲಿ ವಿಸ್ತೀರ್ಣ 71ಎಕರೆ / ಗುಂಟೆ ಜಮೀನು 2ಎಕರೆ /ಗುಂಟೆ ಜಮೀನು ಅಗ್ನಿ ಶಾಮಕ ಠಾಣೆ ಸ್ಥಾಪನೆಗಾಗಿ ಈಗಾಗಲೆ ಮಾನ್ಯ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಮಹಾನಿರ್ದೇಶಕರು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಬೆಂಗಳೂರು ರವರ ಹೆಸರಿನಲ್ಲಿ ಜಮೀನು ಮಂಜೂರಾಗಿದೆ.

ವಾರದಲ್ಲಿ ಸಂಬವಿಸಿದೆ ಅಗ್ನಿದುರಂತಗಳು : ಕೆಂಭಾವಿ ಸೀಮಾಂತರದ ಸರ್ವೆ ನಂಬರ್ 556ರ ಶಿವಶರಣಪ್ಪ ಹುಣಶ್ಯಾಳ ಎಂಬುವರ 12ಎಕರೆ ಜಮೀನಲ್ಲಿ ಆದ ಬೆಂಕಿ ಅವಘಡದಿಂದ ರೈತ ಬೆಳದ ಹತ್ತಿ ಬೆಳೆ ಸುಮಾರು ಅಂದಾಜು 70 ಕ್ವಿಂಟಾಲ್ ಸುಮಾರು 6ಲಕ್ಷ ರೂ.ಮೌಲ್ಯದ ಹತ್ತಿ ಬೆಂಕಿಗೆ ಆಹುತಿಯಾಗಿದೆ ಸುಟ್ಟು ಹೋಗಿದೆ.ಕೆಂಭಾವಿ ಸೀಮಾಂತರ ಬೆಂಕಿ ಅವಘಡದಿಂದ ವೆಂಕನಗೌಡ ಮಾಲಿಪಾಟೀಲ ಎಂಬವರಿಗೆ ಸೇರಿದ ಸರ್ವೆ ನಂ 108/109ವಿಸ್ತೀರ್ಣ ಭೂಮಿಯಲ್ಲಿ ಬೆಳದ ಕಬ್ಬು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ.

ಇಷ್ಟೇಲ್ಲಾ ಅಗ್ನಿ ದುರಂತ ಪ್ರಕರಣಗಳು ದಿನದಿಂದ ದಿನಕ್ಕೆ ವರದಿಯಾಗುತ್ತಿವೆ ಸರ್ಕಾರ ಹಾಗೂ ಸ್ಥಳಿಯ ಶಾಸಕರು ಅಗ್ನಿ ಅವಘಡ ತಪ್ಪಿಸಿ ಕೂಡಲೇ ಕ್ರಮವಹಿಸಿ ಅಗ್ನಿಶಾಮಕ ಕೇಂದ್ರದ ಕಟ್ಟಡಕ್ಕೆ ಅನುದಾನ ಮಂಜೂರಾತಿ ನೀಡುವ ಮೂಲಕ ಬೆಂಕಿ ಭವಣೆಯಿಂದ ತಪ್ಪಿಸಬೇಕಿದೆ‌.

ಅಗ್ನಿಶಾಮಕ ಕೇಂದ್ರ ಮಂಜೂರು ಕೆಂಭಾವಿ ಪಟ್ಟಣದಲ್ಲಿ ಮಾಡುವದು ಅವಶ್ಯಕತೆ ಇದ್ದು ಈಗಾಗಲೇ 2ಎಕರೆ ಜಮೀನು ಕೊಟ್ಟಿದ್ದೇವೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶಾನಪೂರ ಅವರು ವಲಯದಲ್ಲಿ ಅಗ್ನಿ ಅವಘಡ ಹೆಚ್ಚಾಗುತ್ತಿವೆ ಅಗ್ನಿಶಾಮಕ ಕಟ್ಟಡಕ್ಕೆ ಅನುದಾನ ಒದಗಿಸುವ ಮೂಲಕ ಜನತೆಗೆ ಅನುಕೂಲ ಮಾಡಿಕೊಡಬೇಕಿದೆ.

ಸಂಜೀವರಾವ ಕುಲಕರ್ಣಿ .
ಹಿರಿಯ ಪತ್ರಕರ್ತರು ಹಾಗೂ ನಾಗರೀಕ ಹಿತ ರಕ್ಷಣಾ ಸಮಿತಿ ಅಧ್ಯಕ್ಷರು.

ನಮ್ಮ ಜಮೀನಿನಲ್ಲಿ ಹಾಕಿದ ಹತ್ತಿ ಸುಟ್ಟು ಹೋಗಿದೆ ಸುರಪುರಿನಿಂದ ಅಗ್ನಿ ನಂದಿಸುವ ವಾಹನ ಬರೋದರಲ್ಲಿ ನಮ್ಮ ಹತ್ತಿ ಸುಟ್ಟು ಹೋಗಿ ಕರಕಲಾಗಿದೆ 6 ಲಕ್ಷಕ್ಕೂ ಅಧಿಕ ನಷ್ಟವಾಗಿದೆ ಬೆಂಕಿಯಿಂದಲೇ ಸುಟ್ಟು ಹೋಗಿದೆ ..

ಶಿವಶರಪ್ಪ ಹುಣಸ್ಯಾಳ .
ಹತ್ತಿ ಸುಟ್ಟು ಹೋದ ರೈತ

Leave a Reply

Your email address will not be published. Required fields are marked *

error: Content is protected !!