ಕಳ್ಳತನ ಆಗಿರುವ ಮೊಬೈಲ್ ಪತ್ತೆ ಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ ಸುರಪುರ ಠಾಣೆ ಪೊಲೀಸರು
ಸುರಪುರ ಟೈಮ್ಸ್ ವಾರ್ತೆ
ಸುರಪುರ; ಮೊಬೈಲ್ ಕಳ್ಳತನವಾದರೆ ಹಾಗೆ ಮಾಡಿ, ಹೀಗೆ ಮಾಡಿ ಎಂದು ಪ್ರತಿನಿತ್ಯ ನೂರಾರು ಸಲಹೆಗಳು ಸಿಗುತ್ತವೆ. ಆದರೆ ಒಮ್ಮೆ ಮೊಬೈಲ್ ಕಳೆದು ಹೋದ ಬಳಿಕ ಮೊಬೈಲ್ ಮರಳಿ ದೊರಕುವುದು ಕಡಿಮೆಯೇ. ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಅಷ್ಟೇ. ನೀಡದಿದ್ದರೂ ಅಷ್ಟೇ. ಸಿಕ್ಕಿದರೆ ಅದೃಷ್ಟ ಎಂಬಂತಹ ಪರಿಸ್ಥಿತಿಯಿದೆ. ಅಂಥದ್ದರಲ್ಲಿ ಸುರಪುರ ಪೊಲೀಸರು ಕಳ್ಳತನವಾದ ಹಲವು ಮೊಬೈಲ್ ಗಳನ್ನು ಪತ್ತೆ ಹಚ್ಚಿ ಅದರ ವಾರಸುದಾರರಿಗೆ ಹಸ್ತಾಂತರಿಸುವ ಕೆಲಸ ಮಾಡಿದ್ದಾರೆ. ಮೊಬೈಲ್ ಮರಳಿ ಸಿಕ್ಕವರ ಮುಖದಲ್ಲಿ ನಗು ಮಿನುಗುತ್ತಿತ್ತು….
ಹೌದು ಸುರಪುರ ಠಾಣೆ ವ್ಯಾಪ್ತಿಯಲ್ಲಿ ಪ್ರದೇಶದಲ್ಲಿ ಬರುವ ಮೊಬೈಲ್ ಕಳೆದುಕೊಂಡ ವಾರಸುದಾರರಿಗೆ ಹಿಂದಿರುಗಿಸಲಾಗಿದ್ದು, ನಾಗರಿಕರು ಎಚ್ಚರಿಕೆ ಹಾಗೂ ಸಂರಕ್ಷಣೆಯಿಂದ ಮೊಬೈಲ್ ಬಳಸಬೇಕು ಎಂದು ಸುರಪುರ ಪೊಲೀಸ್ ಉಪ ವಿಭಾಗದ ಡಿವೈಎಸ್‌ಪಿ ಜಾವೀದ್ ಇನಾಮದಾರ್ ಹೇಳಿದರು.
ನಗರದ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆದುಕೊಂಡವರಿಗೆ ಮೊಬೈಲ್ ವಿತರಿಸಿ ಮಾತನಾಡಿದ ಅವರು, ನಾಗರಿಕರ ಹಿತರಕ್ಷಣೆಯೇ ಪೊಲೀಸ್ ಇಲಾಖೆಯ ಪ್ರಥಮಾದ್ಯತೆಯಾಗಿದೆ. ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಕಳ್ಳತನ ಹಾಗೂ ಬಿಟ್ಟು ಬರುವುದು, ವಾಹನಗಳಲ್ಲಿ ಹೋಗುವಾಗ ಬೀಳಿಸಿಕೊಂಡು ಹೋಗುವ ಪ್ರಕರಣಗಳು ದಾಖಲಾಗುತ್ತವೆ. ಸೈಬರ್ ಕ್ರೈಂನವರು ಚಾಣಾಕ್ಷತನದಿಂದ ಮೊಬೈಲ್ ಟವರ್ ಮೂಲಕ ಮೊಬೈಲ್ ಪತ್ತೆ ಮಾಡಿ ಮಾಲೀಕರಿಗೆ ಸಾರ್ವಜನಿಕರು ಹಿಂದಿರುಗಿಸುತ್ತದೆ. ಪೊಲೀಸರೊಂದಿಗೆ ಸಹಕರಿಸಬೇಕು ಎಂದರು.
ಪಿಐ. ಉಮೇಶ ಎಂ ನಾಯಕ ಮಾತನಾಡಿ, ಮೊಬೈಲ್ ರಕ್ಷಣೆ ಮಾಡಿಕೊಳ್ಳುವುದು ಜವಾಬ್ದಾರಿಯಾಗಿರುತ್ತದೆ. ಮಾಲೀಕರ
ಮೊಬೈಲ್ ಕಳೆದುಕೊಂಡ ತಕ್ಷಣ ದಾಖಲೆ ಸಮೇತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಬೇಕು. ಮೊಬೈಲ್ ಶೋಧಿಸಲು ಸುಲಭವಾಗುತ್ತದೆ ಎಂದರು.
ಹನುಮಂತರಾಯ ಚನ್ನಪಟ್ಟಣ, ಸದಾಶಿವ ಬಿಜಾಸ್ಪುರ, ಸಂತೋಷ್ ಹಿರೇಮಠ ರಂಗಂಪೇಟ, ಎಫ್‌ಡಿಎ ಸಂತೋಷ್ ವಾಲಿ, ನಾನೇಗೌಡ ದೇವರಗೋನಲ, ಹನುಮಂತರಾಯ ಕಕ್ಕೇರ ಅವರಿಗೆ ಮೊಬೈಲ್ ವಿತರಿಸಲಾಯಿತು.
ಪಿಎಸ್ಐ ಸಿದ್ದಣ್ಣ ಯಡ್ರಾಮಿ, ಪೇದೆಗಳಾದ ಬಸವರಾಜ ನಾಟೇಕರ್, ಹುಸೇನ್ ಪಟೇಲ್, ಪ್ರಮುಖರಾದ ಶರಣು ನಾಯಕ ಡೊಣ್ಣಿಗೇರಿ, ನಾಗರಾಜ ನಾಯಕ ಪ್ಯಾಪ್ಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.


