ವಿಕಲಚೇತನರ ಉದ್ಯೋಗ ತರಬೇತಿ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು;EO ಬಸವರಾಜ ಸಜ್ಜನ್
ಸುರಪುರ ಟೈಮ್ಸ್ ವಾರ್ತೆ
ಸುರಪುರ;ಉದ್ಯೋಗ ಸಿಗಲಿಲ್ಲವೆಂದು ತಮ್ಮ ಬದುಕೆ ಮುಗಿಯಿತು ಎಂಬ ನಿರಾಶಾವಾದಿ ಯುವ ಸಮುದಾಯದ ನಡುವೆ ಅಂಗವೈಕಲ್ಯವನ್ನೇ ಸವಾಲಾಗಿ ಸ್ವೀಕರಿಸಿ ಉದ್ಯೋಗ ತರಬೇತಿ ಪಡೆದು ಸ್ವಾವಲಂಬಿ ಜೀವನ ಕಟ್ಟಿಕೊಂಡು ಇತರರಿಗೆ ಮಾರ್ಗದರ್ಶಿ ಆಗಬೇಕು ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್ ಸಲಹೆ ನೀಡಿದರು.
ಅವರು ಇಂದು ಬೆಳಿಗ್ಗೆ ಸಮರ್ಥನಂ ಅಂಗವಿಕಲರ ಸಂಸ್ಥೆ ವತಿಯಿಂದ ನಗರದ ತಾಲೂಕ ಪಂಚಾಯತಿಯ ಸಮಾರ್ಥ್ಯ ಸೌಧ ಸಭಾಂಗಣದಲ್ಲಿ ವಿಕಲಚೇತನರಿಗೆ ಉಚಿತ ಉದ್ಯೋಗ ವಿಕಸನ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು ವಿಕಲಚೇತನರು ಆತ್ಮ ವಿಶ್ವಾಸ ಉಳ್ಳವರಾಗಿ ಜೀವನ ನಡೆಸುವ ಜತೆಗೆ ಸರಕಾರಿ ಸವಲತ್ತುಗಳನ್ನು ಪಡೆದು ಸ್ವಾವಲಂಬಿ ಬದುಕು ನಡೆಸಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ವಿಕಲಚೇತನರ ವಿಭಾಗೀಯ ಅಧ್ಯಕ್ಷ ಸಂಗನಗೌಡ ಧನರಡ್ಡಿ ರಾಜನಕೋಳೂರ ಮಾತನಾಡಿ ಇಂದಿನ ದಿನಮಾನದಲ್ಲಿ ಸ್ವಂತ ಜೀವನ ಹಾಗೂ ಸಾಂಸಾರಿಕ ಬದುಕನ್ನು ಕಟ್ಟಿಕೊಳ್ಳಲು ಉದ್ಯೋಗ ಅವಶ್ಯಕತೆ ಇದೆ ಆದ್ದರಿಂದ ಪ್ರತಿಯೊಬ್ಬ ವಿಕಲಚೇತನರು ಸ್ವಾವಲಂಬನೆ ಜೀವನ ನಡೆಸಬೇಕು ಎಂದು ತಿಳಿಸಿದರು
ತರಬೇತುದಾರ ಶಿವಲಿಂಗಯ್ಯ ಚುಕ್ಕೆಮಠ ಮಾತನಾಡಿ ನಮ್ಮ ಸಂಸ್ಥೆಯಿಂದ 3 ತಿಂಗಳಗಳ ಕಾಲ ಕಂಪ್ಯೂಟರ್ ಮತ್ತು ಟ್ಯಾಲಿ ,ಸ್ಪೋಕನ್ ಇಂಗ್ಲಿಷ್ ಮತ್ತು ಸಂವಹನ ಕೌಶಲ್ಯಗಳಯ,ಬಿ.ಪಿ.ಓ ವಾಯ್ಸ್ ಹಾಗೂ ಬಿ.ಪಿ.ಓ ನಾನ್ ವಾಯ್ಸ್ ತರಬೇತಿ ನೀಡಿ ಬೇರೆ ಬೇರೆ ಕಂಪನಿಗಳಲ್ಲಿ ಉದ್ಯೋಗಸ್ಥ ವ್ಯಕ್ತಿಗಳನ್ನಾಗಿ ಮಾಡಲಾಗುತ್ತದೆ ಎಂದರುಸಂದರ್ಭದಲ್ಲಿ ನಾಗರಾಜ ಚಂದುಕರ್,ಜಿಲ್ಲಾ ಅಧ್ಯಕ್ಷರಾದ ಬಸವರಾಜ ಬೈರಮಡ್ಡಿ,
ಭೂಮೇಶ ಧಾರವಾಡ, ಪ್ರವೀಣ್ ಧಾರವಾಡ ಸೇರಿದಂತೆ ಇತರರು ಉಪಸ್ಥಿತರಿದ್ದರು.ತಾ.ಪಂ MRWಗಳಾದ ಮಾಳಪ್ಪ ಪೂಜಾರಿ ನಿರೂಪಿಸಿ ವಂದಿಸಿದರು.


