ನಾಳೆಯಿಂದ ನಗನೂರಿನ ಪವಾಡ ಪುರುಷ ಕರೆಪ್ಪ ತಾತನವರ ಪುಣ್ಯಾರಾಧನೆ

ಸುರಪುರ ಟೈಮ್ಸ್ ವಾರ್ತೆ

ಕೆಂಭಾವಿ : ಸಮೀಪದ ನಗನೂರ ಗ್ರಾಮದಲ್ಲಿ ಪವಾಡ ಪುರುಷ ಲಿಂ.ಶ್ರೀ ಕರೆಪ್ಪ ತಾತನವರ 15ನೇ ವರ್ಷದ ಪುಣ್ಯಾರಾಧನೆ ನಿಮಿತ್ತ ಡಿ.18 ನಾಳೆಯಿಂದ ಶಿವಶಿದ್ದ ಶ್ರೀ ಭೀರಲಿಂಗೇಶ್ವರರ ಮಹಾಪುರಾಣ – ಪ್ರವಚನ .ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ನಗರೇಶ್ವರ ದೇವಸ್ಥಾನದ ಪಟ್ಟಾಧಿಕಾರಿ ಪೂಜ್ಯ ಖಂಡಪ್ಪ ತಾತನವರು ಹೇಳಿದರು. ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಪ್ರವಚನ ಕಾರ್ಯಕ್ರಮವು 15 ದಿನಗಳವರೆಗೆ ನಡೆಯಲಿದ್ದು, ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ ಬಸವನ ಸಂಗೊಳಗಿಯ ಶ್ರೀ ಅಭಿನವ ಸಿದ್ದರತ್ನ ಮದಗೊಂಡೇಶ್ವರ ಮಹಾರಾಜರು ಪ್ರವಚನ ನೀಡಲಿದ್ದಾರೆ. ಪ್ರತಿದಿನ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಖ್ಯಾತ ಸಂಗೀತ ಕಲಾವಿದ ಬಸವರಾಜ ಭಂಟನೂರ, ತಬಲಾ ವಾದಕ ಯಮನೇಶ ಯಾಳಗಿ ಅವರು ಸಂಗೀತ ಸೇವೆ ನೀಡಲಿದ್ದಾರೆ ಕೆಂಭಾವಿ ಸಮೀಪದ ನಗನೂರ ಗ್ರಾಮದಲ್ಲಿ ಪವಾಡ ಪುರುಷ ಲಿಂ.ಶ್ರೀ ಕರೆಪ್ಪ ತಾತನವರ 15ನೇ ವರ್ಷದ ಪುಣ್ಯಾರಾಧನೆ ನಿಮಿತ್ತ ಭೀರಲಿಂಗೇಶ್ವರರ ಮಹಾಪುರಾಣ-ಪ್ರವಚನ ಕಾರ್ಯಕ್ರಮದ ಭಿತ್ತಿ ಪತ್ರವನ್ನು ಅನಾವರಣಗೊಳಿಸಲಾಯಿತು. ಎಂದು ತಿಳಿಸಿದರು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀ ಸೂಗೂರೇಶ್ವರ ಶಿವಾಚಾರ್ಯರು, ಶರಣಬಸವೇಶ್ವರ ದಾಸೋಹ ಮಠದ ಶ್ರೀ ಶರಣಪ್ಪ ಶರಣರು ದೇವರಮನಿ ಅವರು ವಹಿಸುವರು. ತಮ್ಮ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾನ್ನಿಧ್ಯವನ್ನು ನಗನೂರದ ಶ್ರೀ ದೊಡ್ಡಪ್ಪ ತಾತನವರು, ಯಾಳಗಿಯ ಶ್ರೀ ಸಿದ್ದಪ್ಪ ಕಕ್ಕಸಗೇರಾದ ಪೂಜಾರಿ, ಪೂಜಾರಿ, ರೇವಣಸಿದ್ದೇಶ್ವರ ಕಾಡಮಗೇರಾದ ಕೆಂಚಪ್ಪ ಪೂಜಾರಿ, ಕೆಂಭಾವಿಯ ಭೀರಪ್ಪ ಪೂಜಾರಿ, ನಗನೂರದ ಸಿದ್ದಪ್ಪ ಪೂಜಾರಿ ವಹಿಸುವರು. ನಗನೂರ, ಖಾನಪುರ ಸೇರಿ ಸುತ್ತಲಿನ ಗ್ರಾಮದ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪುರಾಣ- ಪ್ರವಚನ ಆಲಿಸಬೇಕು ಎಂದು ಕೋರಿದ್ದಾರೆ.

ದೇವರ ಕೃಪೆಗೆ ಪಾತ್ರರಾಗಬೇಕು

ಸಗರನಾಡಿನ ಆರಾಧ್ಯದೈವವಾಗಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾ ಬಂದಿರುವ ಪವಾಡಪುರಷ ಕರೆಪ್ಪ ತಾತನವರ ಪುಣ್ಯಾರಾಧನೆ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ ಎಲ್ಲಾ ಸಧ್ಭಕ್ತರು ಪಾಲ್ಗೊಳುವ ದೇವರ ಕೃಪೆಗೆ ಪಾತ್ರರಾಗಬೇಕು” ಎಂದು
ಪೂಜ್ಯ ಖಂಡಪ್ಪ ತಾತನವರು ಹೇಳಿದರು .

Leave a Reply

Your email address will not be published. Required fields are marked *

error: Content is protected !!