ಶಾಸಕರ ಜನ್ಮದಿನಾಚರಣೆ ಆಚರಣೆ ಇಲ್ಲ

ಸುರಪುರ ಟೈಮ್ಸ್ ವಾರ್ತೆ

ಸುರಪುರ;ಸುರಪುರ ವಿಧಾನ ಸಭಾ ಮತಕ್ಷೇತ್ರದ ಶಾಸಕ ರಾಜಾ ವೇಣುಗೋಪಾಲ ನಾಯಕ ಜನ್ಮದಿನದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಆಚರಣೆ, ಕಾರ್ಯಕ್ರಮ, ಮೆರವಣಿಗೆ ಅಥವಾ ಸಾರ್ವಜನಿಕ ಸಭೆಗಳನ್ನು ಆಯೋಜಿಸಿಲ್ಲ ಎಂದು ಸಂಬಂಧಪಟ್ಟವರು ಸ್ಪಷ್ಟಪಡಿಸಿದ್ದಾರೆ.
ಈ ಬಾರಿ ಅತಿವೃಷ್ಠಿಯಿಂದ ನಮ್ಮ ಪ್ರದೇಶದ ಅನೇಕ ರೈತರು ಬೆಳೆ ನಷ್ಟದಿಂದಾಗಿ ತೀವ್ರ ಕಷ್ಟ ಅನುಭವಿಸುತ್ತಿದ್ದಾರೆ. ರೈತರ ಈ ನೋವಿನ ಸಂದರ್ಭದಲ್ಲಿ ವೈಯಕ್ತಿಕ ಸಂಭ್ರಮಾಚರಣೆಗಳು ಸೂಕ್ತವಲ್ಲ ಎಂಬ ಭಾವನೆಯಿಂದ, ನಿಮಗೆಲ್ಲ ತಿಳಿದಿರುವ ಹಾಗೆ ನಾನು ಯಾವತ್ತು ನನ್ನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳಲು ಇಷ್ಟ ಪಟ್ಟಿಲ್ಲ, ಈ ಬಾರಿಯೂ ನನ್ನ ಹುಟ್ಟುಹಬ್ಬದ ಆಚರಣೆಯಿಂದ ದೂರವೇ ಇರಲು ನಿರ್ಧರಿಸಿದ್ದೇನೆ. ಹಿಂದಿನಂತೆ ಈ ವರ್ಷ ಕೂಡ ನಿಮ್ಮ ಸಹಕಾರ, ಪ್ರೀತಿ ಹಾಗೂ ತಾಳ್ಮೆ ನನ್ನೊಂದಿಗೆ ಹೀಗೇ ಇರಲಿ ಎಂದು ಕೇಳಿಕೊಳ್ಳುತ್ತೇನೆ.

ನನ್ನ ಹುಟ್ಟುಹಬ್ಬದ ಆಚರಣೆಯನ್ನು ಮಾಡಲೇಬೇಕು ಎಂದು ನೀವು ನಿರ್ಧರಿಸಿದ್ದರೆ, ನನ್ನ ಸುರಪುರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ನಿಮ್ಮ ಪರಿಶ್ರಮವು ಬಡ ಜನರಿಗೆ, ಶೋಷಿತರಿಗೆ, ಸಂಕಷ್ಟದಲ್ಲಿರುವ ಜನರಿಗೆ, ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ರೀತಿಯಲ್ಲಿ ಹೆಚ್ಚು ಅರ್ಥಪೂರ್ಣವಾಗಿ ಬಳಕೆಯಾಗಲಿ ಎಂದು ನಿಮ್ಮಲ್ಲಿ ಕಳಕಳಿಯಿಂದ ವಿನಂತಿಸಿಕೊಂಡಿದ್ದಾರೆ.

ನಿಮ್ಮ ಪ್ರೀತಿ, ಹಾರೈಕೆ, ಅಭಿಮಾನವೇ ನನಗೆ ಗೌರವ ಹಾಗೂ ಸಂಭ್ರಮ,
ಜನರ ಸೇವೆಯೇ ನಿಜವಾದ ಆಚರಣೆ ಎಂಬ ತತ್ವದಡಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವುದೇ ಜನ್ಮದಿನದ ಸಂದೇಶವಾಗಿದೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!