ಪಲ್ಸ್ ಪೋಲಿಯೋ: ಎರಡು ಹನಿ ಮಕ್ಕಳ ಭವಿಷ್ಯ ರಕ್ಷಣೆ – ಡಾ.ಬಿ.ಬಿ.ಹಿರೇಮಠ ಜಾಲಿಬೆಂಚಿ
ಸುರಪುರ ಟೈಮ್ಸ್ ವಾರ್ತೆ
ಸುರಪುರ:ಜಾಲಿಬೆಂಚಿ ಗ್ರಾಮದಲ್ಲಿ ನಡೆಯುತ್ತಿರುವ ಪಲ್ಸ್ ಪೋಲಿಯೋ ಅಭಿಯಾನದ ಅಂಗವಾಗಿ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ತಪ್ಪದೆ ಪೋಲಿಯೋ ಲಸಿಕೆಯ ಎರಡು ಹನಿ ನೀಡಬೇಕು ಎಂದು ಸರ್ಕಾರಿ ವೈದ್ಯಾಧಿಕಾರಿ ಡಾ. ಬಸವಲಿಂಗಯ್ಯ ಬಿ ಹಿರೇಮಠ ಜಾಲಿಬೆಂಚಿ ಅವರು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, “ಪೋಲಿಯೋ ರೋಗವು ಮಕ್ಕಳಲ್ಲಿ ಶಾಶ್ವತ ಅಂಗವಿಕಲತೆಯನ್ನು ಉಂಟುಮಾಡುವ ಅಪಾಯಕಾರಿ ರೋಗ. ಇದನ್ನು ಸಂಪೂರ್ಣವಾಗಿ ತಡೆಗಟ್ಟಲು ಪಲ್ಸ್ ಪೋಲಿಯೋ ಅಭಿಯಾನ ಅತ್ಯಂತ ಪರಿಣಾಮಕಾರಿ. ಲಸಿಕೆ ಪಡೆದಿದ್ದರೂ ಸಹ ಪ್ರತಿಯೊಂದು ಸುತ್ತಿನಲ್ಲಿ ಮಕ್ಕಳಿಗೆ ಎರಡು ಹನಿ ಲಸಿಕೆ ಹಾಕಿಸುವುದು ಅಗತ್ಯ” ಎಂದು ಹೇಳಿದರು.
ಪೋಷಕರು ಯಾವುದೇ ಆತಂಕವಿಲ್ಲದೆ ತಮ್ಮ ಮಕ್ಕಳನ್ನು ಹತ್ತಿರದ ಬೂತ್‌ಗಳಿಗೆ ಕರೆತಂದು ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದ ಡಾಕ್ಟರ್, ಇದು ಮಕ್ಕಳ ಆರೋಗ್ಯ ಹಾಗೂ ದೇಶದ ಭವಿಷ್ಯ ರಕ್ಷಣೆಗೆ ಅತ್ಯಗತ್ಯ ಎಂದರು. ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತ ಮಂಜುಳಾ ಹಿರೇಮಠ ಸಿಬ್ಬಂದಿಯ ಸಹಕಾರದಿಂದ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ ಎಂದು ತಿಳಿಸಿದರು.



