ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್ ವತಿಯಿಂದ ಕ್ರಿಸ್ಮಸ್ ಹಬ್ಬದ ಅಂಗವಾಗಿ ಕ್ಯಾರಲ್ಸ್
ಸುರಪುರ ಟೈಮ್ಸ್ ವಾರ್ತೆ
ಸುರಪುರ :ನಗರದ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್ ವತಿಯಿಂದ ಕ್ರಿಸ್ಮಸ್ ಹಬ್ಬದ ಅಂಗವಾಗಿ ಕ್ಯಾರಲ್ಸ್ ಕಾರ್ಯಕ್ರಮವನ್ನು ಭಕ್ತಿಭಾವ ಹಾಗೂ ಸಂಭ್ರಮದಿಂದ ಆಯೋಜಿಸಲಾಯಿತು. ಮೆಥೋಡಿಸ್ಟ್ ದೇವಾಲಯದಿಂದ ಪ್ರಾರಂಭಗೊಂಡು ನಗರದಲ್ಲಿರುವ ಕ್ರೈಸ್ತರ ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ ಯೇಸು ಕ್ರಿಸ್ತರ ಜನನದ ಸಂದೇಶವನ್ನು ಸಾರುವ ಕ್ರಿಸ್ಮಸ್ ಹಾಡುಗಳನ್ನು ಗಾಯನ ತಂಡಗಳು ಮಧುರವಾಗಿ ಹಾಡಿ, ಶಾಂತಿ, ಪ್ರೀತಿ ಮತ್ತು ಸಹೋದರತ್ವದ ಸಂದೇಶವನ್ನು ಸಾರಿದರು.
ಕ್ಯಾರಲ್ಸ್ ಕಾರ್ಯಕ್ರಮದ ಮೂಲಕ ಸಮಾಜದಲ್ಲಿ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವಂತೆ ಕರೆ ನೀಡಲಾಯಿತು. ಚರ್ಚ್ ಪಾದ್ರಿಗಳು ಕ್ರಿಸ್ಮಸ್ ಹಬ್ಬದ ಮಹತ್ವವನ್ನು ವಿವರಿಸಿ, ಶಾಂತಿ ಮತ್ತು ಸೌಹಾರ್ದತೆಯ ಜೀವನ ನಡೆಸುವಂತೆ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಮೇಲ್ವಿಚಾರಕ ರೆವರೆಂಡ್ ಆನಂದ, ಸಭಾಪಾಲಕ ರೆವರೆಂಡ್ ಪ್ರಕಾಶ್ ಹಂಚಿನಾಳ, ರೆವರೆಂಡ್ ಧನರಾಜ್, ಮುಖಂಡರಾದ ಸಾಮುವೇಲ್ ಮ್ಯಾಥ್ಯೂ, ಜಯಪ್ಪ, ಅಮಿತ್ ಪಾಲ್, ಸಿಮಿಯೋನ್, ರಮೇಶ್, ಜಿಮ್ಮಿ ಜಸ್ಟೀನ್, ಥಾಮಸ ಮ್ಯಾಥ್ಯೂ, ಇಮಾನುವೆಲ್, ವಿಜಯಕುಮಾರ, ನವೀನಕುಮಾರ, ಸಂದೀಪಕುಮಾರ, ಸುಜಾತಾ ಆನಂದ, ಪ್ರಭುಕುಮಾರಿ, ಸುನೀಲಾ ಶಾಂತಕುಮಾರ, ಸೋನಾ ಸುಕುಮಾರಿ, ಸುಜಾತಾ, ಸುಕುಮಾರಿ, ಲಲಿತಾ, ಸಾಗರಿಕಾ, ಶೋಭಾ, ರೆಬೆಕ್ಕಾ, ಸೌಮ್ಯ, ಶೋಭಾ, ಪವಿತ್ರಾ, ಸ್ಟೆಲ್ಲಾ, ಅನಿತಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



