ಬಾಂಗ್ಲಾ : ಹಿಂದೂ ಯುವಕನ ಹತ್ಯೆ ಖಂಡಿಸಿ ಪ್ರತಿಭಟನೆ


ಸುರಪುರ ಟೈಮ್ಸ್ ವಾರ್ತೆ
ಸುರಪುರ : ಬಾಂಗ್ಲಾ ದೇಶದಲ್ಲಿ ಅಮಾಯಕ ಹಿಂದೂ ಯುವಕನನ್ನು ಮರಕ್ಕೆ ಜೀವಂತವಾಗಿ ನೇತು ಹಾಕಿ ಸುಟ್ಟು ಹಾಕಿರುವ ಅಮಾನವೀಯ ಕೃತ್ಯವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಮುಖಂಡರು, ಕಾರ್ಯಕರ್ತರು ಬುಧವಾರ ಪ್ರತಿಭಟಿಸಿದರು.
ಇಲ್ಲಿಯ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಸಂಘಟನೆಯವರು ಬಾಂಗ್ಲಾದೇಶದ ಹಂಗಾಮಿ ಪ್ರಧಾನ ಮಂತ್ರಿ ವಿರುದ್ಧ ಘೋಷಣೆ ಕೂಗಿ ಪ್ರತಿಕೃತಿ ದಹನ ಮಾಡಿದರು. ನಂತರ ಮುಖಂಡರು ಮಾತನಾಡಿ, ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ರಕ್ಷಣೆಗಾಗಿ ಭಾರತ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರುಕ್ಮಾಪುರ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಶಾಂತಮೂರ್ತಿ ಶಿವಾಚಾರ್ಯ, ಮುಖಂಡರಾದ ಡಾ.ಉಪೇಂದ್ರ ನಾಯಕ ಸುಬೇದಾರ್, ಶರಣು ನಾಯಕ ವಾಲ್ಮೀಕಿ ಮಾತನಾಡಿದರು. ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಶರಣು ನಾಯಕ ದಿವಳಗುಡ್ಡ, ಉಪಾಧ್ಯಕ್ಷ ಬಸವರಾಜ ಕವಡಿಮಟ್ಟಿ, ಪ್ರಶಾಂತ ಕಾಂಬ್ಳೆ, ವಿಹಿಂಪ ತಾಲೂಕು ಪ್ರಧಾನ ಕಾರ್ಯದರ್ಶಿ ಹಂಪಯ್ಯ ಹಿರೇಮಠ ಬೋನ್ಹಾಳ, ಚಂದ್ರಶೇಖರ ಗೋಗಿ, ರಮೇಶಗೌಡ, ಅಶೋಕ ಜಾಲಹಳ್ಳಿ, ಭಜರಂಗದಳದ ವಿರೇಶ ಪ್ಯಾಪ್ಲಿ, ವಿಶ್ವಾಸ್ ಕೋಸ್ಗಿ, ರಾಜು ಯಾದವ, ನಾಗರಾಜ ಶೆಟ್ಟಿ, ರವಿಕುಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಫೋಟೊ :ಸುರಪುರದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಮುಖಂಡರು ಪ್ರತಿಭಟನೆ ನಡೆಸಿದರು.

Leave a Reply

Your email address will not be published. Required fields are marked *

error: Content is protected !!