ದ್ವೇಷ ಭಾಷಣ ನಿಯಂತ್ರಣ ಮಸೂದೆ ವಿರುದ್ಧ ಸುರಪುರ ಬಿಜೆಪಿ ಮಂಡಲದ ಆಕ್ರೋಶ ಪ್ರದರ್ಶನ


ಸುರಪುರ ಟೈಮ್ಸ್ ವಾರ್ತೆ
ಸುರಪುರ : ರಾಜ್ಯ ಸರಕಾರ ಅಂಗೀಕರಿಸಿರುವ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಕಗಳ ಪ್ರತಿಬಂಧಕ ವಿಧೇಯಕವನ್ನು ವಿರೋಧಿಸಿ ನಗರದಲ್ಲಿ ಬುಧವಾರ ಸುರಪುರ ಬಿಜೆಪಿ ಮಂಡಲದ ಮುಖಂಡರು ಮತ್ತು ಕಾರ್ಯಕರ್ತರು ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟಿಸಿದರು.
ನಂತರ ಮುಖಂಡರು ಮಾತನಾಡಿ, ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್ ಸರಕಾರ ವಾಕ್ ಸ್ವಾತಂತ್ರ್ಯವನ್ನು ಹರಣ ಮಾಡಲು, ಹಿಂದೂಪರ ಹೋರಾಟಗಾರರ ಧ್ವನಿಯನ್ನು ದಮನಿಸಲು ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಕಾಯ್ದೆ ಜಾರಿಗೆ ತರುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಕಾಂಗ್ರೆಸ್ ಸರಕಾರ ಜಾರಿಗೆ ತರಲು ಹೊರಟಿರುವ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ 2025 ವಿಧೇಯಕ ಸಂವಿಧಾನಕ್ಕೆ ವಿರೋಧವಾಗಿದೆ. ಕಾಯ್ದೆ ಮೂಲಕ ರಾಜ್ಯದ ಪ್ರತಿಯೊಬ್ಬ ನಾಗರಿಕರ ಮೂಲ ಹಕ್ಕುಗಳನ್ನು ಕಸಿದುಕೊಂಡತಾಗಲಿದೆ. ವಾಕ್ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ. ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ ಅವರು ಸಂವಿಧಾನದಡಿಯಲ್ಲಿ ನೀಡಿದ ಅಭಿವ್ಯಕ್ತ ಸ್ವಾತಂತ್ರ್ಯವನ್ನು ಕಾಂಗ್ರೆಸ್ ಸರಕಾರ ಕಿತ್ತುಕೊಳ್ಳುತ್ತಿದೆ ಸರಕಾರದ ವಿರುದ್ಧ ಮಾತನಾಡುವರ ಬಾಯಿ ಮುಚ್ಚಿಸುವ ಸಾಧನವಾಗಿದೆ ಎಂದು ದೂರಿದರು.
ಈ ಕಾಯ್ದೆ ವ್ಯಾಖ್ಯಾನವೇ ಸರಿಯಾಗಿಲ್ಲ. ಸರಕಾರದ ನೀತಿಗಳ ವಿರುದ್ಧ ಸಾಮಾಜಿಕ ಚರ್ಚೆ, ಟೀಕೆ, ಸತ್ಯ ಹೇಳುವುದನ್ನು ದ್ವೇಷ ಎಂದು ಪರಿಗಣಿಸುವ ಅಪಾಯವಿದೆ. ಜನರು ಭಯದಿಂದ ಮಾತನಾಡದಂತೆ ಮಾಡುವುದು ಸರಕಾರದ ಉದ್ದೇಶವೇ ಎಂದು ಪ್ರಶ್ನೀಸಬೇಕಾಗುತ್ತದೆ. ಇದು ಪ್ರಜಾಪ್ರಭುತ್ವದ ಮೂಲ ತತ್ವಕ್ಕೆ ಹಾನಿ ಮಾತ್ರವಲ್ಲ ಪ್ರಜಾಪ್ರಭುತ್ವದ ಕತ್ತು ಹಿಚಿಕುವ ಪ್ರಯತ್ನವಾಗಿದೆ. ಪೊಲೀಸ್ ಮತ್ತು ಸರಕಾರಕ್ಕೆ ನಿರಂಕುಶ ಅಧಿಕಾರ ನೀಡಿದಂತಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ ಹೆಚ್.ಎ. ಸರಕಾವಸ್ ಮೂಲಕ ಸಲ್ಲಿಸಲಾಯಿತು.
ಸುರಪುರ ಬಿಜೆಪಿ ಮಂಡಲ ಅಧ್ಯಕ್ಷ ವೇಣುಮಾಧವ ನಾಯಕ, ಮುಖಂಡರಾದ ಭೀಮಣ್ಣ ಬೇವಿನಾಳ ನರಸಿಂಹಕಾಂತ ಪಂಚಮಗಿರಿ, ಪಾರಪ್ಪ ಗುತ್ತೇದಾರ, ಸಣ್ಣ ದೇಸಾಯಿ, ದೇವಿಂದ್ರಪ್ಪಗೌಡ ಮಾಲಿ ಪಾಟೀಲ್, ವಿಜಯಕುಮಾರ ಚಿಟ್ಟಿ, ಸಂದೀಪ ಜೋಷಿ, ಜಗದೀಶ ಪಾಟೀಲ್, ಸಂಜೀವ ತಿಂಥಣಿ, ಭೀಮಾಶಂಕರ ಬಿಲ್ಲವ್, ಈಶ್ವರ ನಾಯಕ, ಮಹೇಶ ಪಾಟೀಲ್, ರಾಜಾ ರಂಗಪ್ಪ ನಾಯಕ. ಸಂಗನಗೌಡ ಪಾಟೀಲ, ಲಕ್ಷ್ಮೀಕಾಂತ ಗೋನಾಲ, ದತ್ತು ಗುತ್ತೇದಾರ, ವೀರಭದ್ರ ಕುಂಬಾರ, ಶಿವುಕುಮಾರ ಅವಂಟಿ, ವೆಂಕಟೇಶ ನಾಯಕ ಬೈರಿಮಡ್ಡಿ, ಇಸ್ಮಾಯಿಲ್ ಬಳಿಚಕ್ರ, ಜಕ್ಕಪ್ಪ ಕಟ್ಟಿಮನಿ, ಶಿವುರಾಜ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಾಯ್ದೆ ಜಾರಿಗೊಳಿಸುವುದು ಬೇಡವೇ ಬೇಡ
ಈ ಕಾಯ್ದೆ ಮೂಲಕ ಪ್ರತಿಭಟನೆ, ಸಭೆ, ಸಾಮಾಜಿಕ ಚಳುವಳಿಗಳನ್ನು ತಡೆಯಿಡಿಯವ ಕ್ರಮವಾಗಿದೆ. ಇದರಿಂದ ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೆಚ್ಚು ತೊಂದರೆಗೆ ಸಿಲುಕುತ್ತಾರೆ. ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ಮತ್ತು ಜನರ ದ್ವನಿ ಮತ್ತು ನಾಗರಿಕರ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳೂವ ಹುನ್ನಾರು ಅಡಗಿದೆ. ಸಂವಿಧಾನ ಮತ್ತು ಮೂಲಹಕ್ಕುಗಳ ರಕ್ಷಣೆ ಎಲ್ಲರ ಹೊಣೆಯಾಗಿದೆ. ಆದ್ದರಿಂದ ಈ ಕಾಯ್ದೆ ಜಾರಿಗೊಳಿಸುವುದು ಬೇಡವೇ ಬೇಡ ಎಂದು ಬಿಜೆಪಿ ಮುಖಂಡರು ಒತ್ತಾಯಿಸಿದರು.

ಫೋಟೊ :  ಸುರಪುರದಲ್ಲಿ ಬಿಜೆಪಿ ಮಂಡಲದವರು ಪ್ರತಿಭಟಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು

Leave a Reply

Your email address will not be published. Required fields are marked *

error: Content is protected !!