ಇಂದು ಸುರಪುರ ನಗರದಲ್ಲಿ ಮಾಜಿ ಸಚಿವ ಬಿಜೆಪಿ ರಾಜ್ಯ ಉಪಾಧ್ಯಕ್ಷ ನರಸಿಂಹ ನಾಯಕ (ರಾಜುಗೌಡ) ಅವರ ಅದ್ದೂರಿ ಜನ್ಮದಿನಾಚರಣೆ


ಸುರಪುರ ಟೈಮ್ಸ್ ವಾರ್ತೆ

ಸುರಪುರ;ಸಾಮಾಜಿಕ, ರಾಜಕೀಯ, ಸಿನಿಮಾ, ಕ್ರೀಡಾ ಕ್ಷೇತ್ರ ಸೇರಿ ಹಲವು ರಂಗಗಳಲ್ಲಿ ಕೃಷಿ ಮಾಡಿರುವ ಮಾಜಿ ಸಚಿವ ಹಾಗೂ ಸುರಪುರ ಕ್ಷೇತ್ರದ ಮಾಜಿ ಸಚಿವ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರಾಜುಗೌಡ ಅವರು ಇಂದು ಸುರಪುರ ನಗರದಲ್ಲಿ ಮಾಜಿ ಸಚಿವರ ಕಾರ್ಯಾಲಯದಲ್ಲಿ ಸಂಜೆ 5 ಗಂಟೆ ಅದ್ದೂರಿ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದು, ಇವರು ಕ್ಷೇತ್ರದಲ್ಲಿ ಯಾವುದೇ ಹಮ್ಮು, ಭಿಮ್ಮು ಇಲ್ಲದೆ ಎಲ್ಲರೊಂದಿಗೆ ಸರಳವಾಗಿ ಬೆರೆಯುವ ಮೂಲಕ ಹೃದಯವಂತರಾಗಿ ಜನಮಾನಸದಲ್ಲಿದ್ದಾರೆ.

ರಾಜಕೀಯ ಪಟ್ಟುಗಳನ್ನು ಕರಗತ ಮಾಡಿ ಕೊಂಡಿರುವ ರಾಜೂಗೌಡ ಬಹಳ ವೇಗವಾಗಿ ರಾಜ್ಯದಲ್ಲಿ ಹೆಸರು ಮಾಡುವ ಮೂಲಕ ಅಧಿ ಕಾರವಧಿಯಲ್ಲಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿ ಕೈಗೊಂಡು ಜನಮನ್ನಣೆ ಗಳಿಸಿ ಕ್ಷೇತ್ರದ ಬಡಜನರ ಪಾಲಿಗೆ ಆಶಾಕಿರಣವಾಗಿದ್ದಾರೆ. ಎಂತಹ ಸಂದರ್ಭವೇ ಬರಲಿ ಮುನ್ನುಗ್ಗಿ ಮುನ್ನುಗ್ಗಿ ನಡೆಯುವ ಸಾರಥಿಯಾಗಿ ರಾಜಕೀಯದಲ್ಲಿ ಸೋಲೇ ಇರಲಿ, ಗೆಲುವೇ ಇರಲಿ ಸದಾ ಜನರ ಸಮಸ್ಯೆಗೆ ಸ್ಪಂದಿಸುವ ಮಾತೃಹೃದಯಿಯಾಗಿದ್ದಾರೆ.
ಅಪಾರ ಅಭಿಮಾನಿಗಳು, ಜನಪ್ರತಿನಿಧಿಗಳು, ಪಕ್ಷದ ಹುದ್ದೆದಾರರು ಹಾಗೂ ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನ್ಮದಿನದ ಅಂಗವಾಗಿ ಅನ್ನಸಂತರ್ಪಣೆ, ನಿರ್ಗತಿಕರಿಗೆ ಒದಿಕೆ,ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಸೇರಿದಂತೆ ಸಮಾಜಮುಖಿ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿದೆ. ರಾಜುಗೌಡ ಅವರಿಗೆ ಜನರ ಪ್ರೀತಿ ಹಾಗೂ ಆಶೀರ್ವಾದವೇ ದೊಡ್ಡ ಬಲ ಎಂದು ಪ್ರಥಮ ದರ್ಜೆ ಗುತ್ತಿಗೆದಾರ ಡಾ.ಬಿ ಎಮ್ ಹಳ್ಳಿ ಕೋಟೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!